ಶಾಸಕ ಎಮ್ ಪಿ ರೇಣುಕಾಚಾರ್ಯರ ಅಣ್ಣನ ಮಗ ಚಂದ್ರಶೇಖರ್ 4 ದಿನಗಳಿಂದ ನಾಪತ್ತೆ, ಅತಂಕದಲ್ಲಿ ಶಾಸಕರ ಕುಟುಂಬಸ್ಥರು!
ಸೋಮವಾರ ಅಪರಾತ್ರಿ ಒಂದು ಗಂಟೆಗೆ ಅವರ ಕಾರು ಶಿವಮೊಗ್ಗೆಗೆ ಹತ್ತಿರದ ಸುರಹೊನ್ನೆಯಲ್ಲಿರುವ ಪೆಟ್ರೋಲ್ ಬಂಕೊಂದರ ಮುಂದಿನ ರಸ್ತೆ ಮೂಲಕ ಹಾದು ಹೋಗುತ್ತಿರುವುದು ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆಯಾದರೂ ಹೊನ್ನಾಳಿ ತಲುಪಿಲ್ಲ
ದಾವಣಗೆರೆ: ಹೊನ್ನಾಳಿ ಶಾಸಕ ಎಮ್ ಪಿ ರೇಣುಕಾಚಾರ್ಯ (MP Renukacharya) ಅವರ ಅಣ್ಣನ ಮಗ ಚಂದ್ರಶೇಖರ್ (Chandrashekhar) (ಎಮ್ ಪಿ ರಮೇಶ್ ಮಗ) ಭಾನುವಾರದಿಂದ ನಾಪತ್ತೆಯಾಗಿದ್ದು ಕುಟುಂಬಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ. ರವಿವಾರದಂದು ಅವರ ಕಾರಲ್ಲಿ ಚಿಕ್ಕಮಗಳೂರಿಗೆ (Chikmagalur) ಹೋಗಿದ್ದರಂತೆ. ಸೋಮವಾರ ಅಪರಾತ್ರಿ ಒಂದು ಗಂಟೆಗೆ ಅವರ ಕಾರು ಶಿವಮೊಗ್ಗೆಗೆ ಹತ್ತಿರದ ಸುರಹೊನ್ನೆಯಲ್ಲಿರುವ ಪೆಟ್ರೋಲ್ ಬಂಕೊಂದರ ಮುಂದಿನ ರಸ್ತೆ ಮೂಲಕ ಹಾದು ಹೋಗುತ್ತಿರುವುದು ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆಯಾದರೂ ಹೊನ್ನಾಳಿ ತಲುಪಿಲ್ಲ. ಶಾಸಕರ ಕುಟುಂಬವರ್ಗದವರು ಚಿಂತಾಕ್ರಾಂತರಾಗಿದ್ದಾರೆ.