ಸಿಐಡಿ ತನಿಖೆ ಮೂಲಕ ನೇಹಾ ಹಿರೇಮಠ ಹತ್ಯೆ ಪ್ರಕರಣ ಹಳ್ಳ ಹಿಡಿಸುವ ಪ್ರಯತ್ನ ನಡೆದರೆ ನಾವು ಫಯಾಜ್ ಗೆ ಶಿಕ್ಷೆ ಕೊಡುತ್ತೇವೆ: ಪ್ರಮೋದ್ ಮುತಾಲಿಕ್
ನೇಹಾ ಹಿರೇಮಠ ಪ್ರಕರಣವನ್ನು ಸಿಐಡಿ ಒಪ್ಪಿಸಿರುವ ರಾಜ್ಯ ಸರ್ಕಾರ ತನಿಖೆಯನ್ನು ಹಳ್ಳಹಿಡಿಸುವ ಪ್ರಯತ್ನ ಮಾಡಿ, ಫಯಾಜ್ ಏನಾದರೂ ಜೈಲಿಂದ ಹೊರಬಂದರೆ ತಾವೇ ಅವನನ್ನು ಶಿಕ್ಷೆಗೊಳಪಡಿಸುವುದಾಗಿ ಹೇಳಿದ ಮುತಾಲಿಕ್ ಅದಕ್ಕಾಗಿ ತಮಗೆ ಜೈಲು ಶಿಕ್ಷೆಗೂ ಸಿದ್ದರಿರುವುದಾಗಿ ಹೇಳಿದರು.
ಹುಬ್ಬಳ್ಳಿ: ನಗರದಲ್ಲಿಂದು ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಶ್ರೀರಾಮ ಸೇನೆ ಸಂಘಟನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ನೇಹಾ ಕೊಲೆ ಪ್ರಕರಣದ (Neha Hiremath murder case) ಬಳಿಕ ಹಿಂದೂ ಯುವತಿಯರು, ಉದ್ಯೋಗಸ್ಥ ಮಹಿಳೆಯರು ಹೆದರುವ ಕಾರಣವಿಲ್ಲ, ಅವರು ನಿರ್ಭೀತಿಯಿಂದ ಶಾಲಾ ಕಾಲೇಜುಗಳಿಗೆ, ತಾವು ಕೆಲಸ ಮಾಡುವ ಸ್ಥಳಗಳಿಗೆ ಹೋಗಬಹುದು, ಅವರಿಗೆ ಏನೇ ತೊಂದರೆ ಎದುರಾದರೂ ತಮ್ಮ ಸಂಘಟನೆ ರಕ್ಷಣೆ ಸನ್ನದ್ಧವಾಗಿರುತ್ತದೆ ಎಂದು ಹೇಳಿದರು. ಶೀಘ್ರದಲ್ಲೇ ತಾವೊಂದು ಸಹಾಯವಾಣಿ (helpline) ಒಂದನ್ನು ಸ್ಥಾಪಿಸಿ ನಂಬರ್ ಅನ್ನು ಎಲ್ಲ ಹಿಂದೂಗಳ ಮನೆಗಳಿಗೆ ತಲುಪಿಸಲಾಗುವುದು, ಮಹಿಳೆಯರು ತಮ್ಮ ಸಮಸ್ಯೆ ಹೇಳಿಕೊಂಡ 24 ಗಂಟೆಯೊಳಗೆ ಶ್ರೀರಾಮ ಸೇನೆಯ ಕಾರ್ಯಕರ್ತರು ಸ್ಥಳಕ್ಕೆ ಬಂದು ಅದನ್ನು ಬಗೆಹರಿಸುವರೆಂದು ಮುತಾಲಿಕ್ ಹೇಳಿದರು. ನೇಹಾ ಹಿರೇಮಠ ಪ್ರಕರಣವನ್ನು ಸಿಐಡಿ ಒಪ್ಪಿಸಿರುವ ರಾಜ್ಯ ಸರ್ಕಾರ ತನಿಖೆಯನ್ನು ಹಳ್ಳಹಿಡಿಸುವ ಪ್ರಯತ್ನ ಮಾಡಿ, ಫಯಾಜ್ ಏನಾದರೂ ಜೈಲಿಂದ ಹೊರಬಂದರೆ ತಾವೇ ಅವನನ್ನು ಶಿಕ್ಷೆಗೊಳಪಡಿಸುವುದಾಗಿ ಹೇಳಿದ ಮುತಾಲಿಕ್ ಅದಕ್ಕಾಗಿ ತಮಗೆ ಜೈಲು ಶಿಕ್ಷೆಗೂ ಸಿದ್ದರಿರುವುದಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದೇಶದ್ರೋಹ ಕ್ಯಾನ್ಸರ್ ಇದ್ದ ಹಾಗೆ, ಆಪರೇಷನ್ ಮಾಡದಿದ್ದರೆ ದೇಶದ ತುಂಬ ಹರಡುತ್ತದೆ: ಪ್ರಮೋದ್ ಮುತಾಲಿಕ್