ಯೋಗ ಇರುವ ಯಾರಾದರೂ ಸಿಎಂ ಆಗಬಹುದು, ಅದರೆ ಯೋಗ್ಯತೆ ಇರೋನು ಮಾತ್ರ ಒಳ್ಳೆಯ ಸಿಎಂ ಆಗಬಲ್ಲ: ಸಿಟಿ ರವಿ

|

Updated on: Jan 22, 2025 | 5:51 PM

ಜೈನಮುನಿಯೊಬ್ಬರು ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗುವ ಯೋಗ ಇದೆಯೆಂದು ಹೇಳಿರುವ ಬಗ್ಗೆ ರವಿಯವರ ಗಮನಕ್ಕೆ ಮಾಧ್ಯಮದವರು ತಂದಾಗ, ಯೋಗ ಇರೋರು ಯಾರು ಬೇಕಾದರೂ ಮುಖ್ಯಮಂತ್ರಿಯಾಗಬಹುದು, ಆದರೆ ಒಳ್ಳೆಯ ಮುಖ್ಯಮಂತ್ರಿಯಾಗಲು ಯೋಗ್ಯತೆ ಇರಬೇಕೆಂದು ಹೇಳಿದರು. ಯಾರಿಗೆ ಯೋಗ್ಯತೆ ಇದೆ ಅಂತ ಅವರು ಬಿಡಿಸಿ ಹೇಳಲಿಲ್ಲ.

ಬೆಂಗಳೂರು: ರಾಜ್ಯ ನಾಯಕತ್ವಕ್ಕೆ ಸವಾಲೆಸೆಯುವ ಪ್ರವೃತ್ತಿ ಈಗ ಎಲ್ಲ ಪಕ್ಷಗಳಲ್ಲೂ ಕಂಡುಬರುತ್ತಿರುವ ಅಂಶ. ಜೆಡಿಎಸ್ ಶಾಸಕ ಜಿಟಿ ದೇವೇಗೌಡ ತನ್ನನ್ನು ಜೆಡಿಎಸ್ ಪಕ್ಷದಿಂದ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಲು ಧಮ್ ಬೇಕು ಅಂತ ಮೈಸೂರಲ್ಲಿ ಹೇಳಿರುವುದಕ್ಕೆ ಬಿಜೆಪಿ ಹಿರಿಯ ನಾಯಕ ಸಿಟಿ ರವಿ ಅವರ ಪ್ರತಿಕ್ರಿಯೆ ಕೇಳಿದಾಗ, ಮುಗುಳ್ನಕ್ಕ ಅವರು ದೇವೇಗೌಡ ಏನು ಹೇಳಿದ್ದಾರೆಂದು ತನಗೆ ಗೊತ್ತಿಲ್ಲ ಎಂದು ಹೇಳಿ ನುಣುಚಿಕೊಂಡರು. ಅನೇಕ ವರ್ಷಗಳಿಂದ ರಾಜಕಾರಣದಲ್ಲಿರುವ ರವಿಗೆ ಯಾವ ಪ್ರಶ್ನೆಗೆ ಉತ್ತರಿಸಬೇಕು ಯಾವ ಪ್ರಶ್ನೆಗೆ ಕೊಕ್ ಕೊಡಬೇಕೆಂದು ಚೆನ್ನಾಗಿ ಗೊತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಅವಾಚ್ಯ ಶಬ್ಧ ಬಳಕೆ ಕೇಸ್: ವಾಯ್ಸ್ ಸ್ಯಾಂಪಲ್ ನೀಡಲು ನಿರಾಕರಿಸಿದ ಸಿಟಿ ರವಿ ಕೋರ್ಟ್​ ಬಿಗ್ ಶಾಕ್!

Published on: Jan 22, 2025 04:10 PM