ಯಲ್ಲಾಪುರ ಬಳಿ ಭೀಕರ ಲಾರಿ ಅಪಘಾತವನ್ನು ಸಿಎಂಗೆ ವಿವರಿಸಿ ಹೆಚ್ಚಿನ ಪರಿಹಾರ ಕೇಳಿದ ಶಾಸಕ ಪಠಾಣ್

ಯಲ್ಲಾಪುರ ಬಳಿ ಭೀಕರ ಲಾರಿ ಅಪಘಾತವನ್ನು ಸಿಎಂಗೆ ವಿವರಿಸಿ ಹೆಚ್ಚಿನ ಪರಿಹಾರ ಕೇಳಿದ ಶಾಸಕ ಪಠಾಣ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 22, 2025 | 3:04 PM

ಅಪಘಾತದಲ್ಲಿ ಮಡಿದವರ ಕುಟುಂಬಗಳಿಗೆ ತಲಾ ₹3 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಯಲ್ಲಾಪುರದ ಬಿಜೆಪಿ ಶಾಸಕಕ ಶಿವರಾಂ ಹೆಬ್ಬಾರ್ ಮತ್ತು ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿರುವರೆಂದು ಪಠಾಣ್ ಮುಖ್ಯಮಂತ್ರಿಯವರಿಗೆ ಹೇಳಿದರು. ಒಬ್ಬ ಪೊಲೀಸ್ ಅಧಿಕಾರಿ ಶಾಸಕನ ಪಕ್ಕ ನಿಂತಿರುವುದನ್ನು ನೋಡಬಹುದು.

ಕಾರವಾರ: ಯಲ್ಲಾಪುರದ ಬಳಿ ಇಂದು ಬೆಳಗ್ಗೆ ನಡೆದ ಭೀಕರ ರಸ್ತೆ ಅಪಘಾತ ಕನ್ನಡಿಗರನ್ನು ಬೆಚ್ಚಿಬೀಳುವಂತೆ ಮಾಡಿದೆ. ಅಪಘಾತ ನಡೆದ ಸ್ಥಳದಲ್ಲಿ 9 ಜನ ಸಾವನ್ನಪ್ಪಿದ್ದರೆ ಮತ್ತೊಬ್ಬರು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಕೊನೆಯುಸಿರೆಳೆದಿದ್ದಾರೆ. ಶಿಗ್ಗಾವಿಯ ಶಾಸಕ ಯಾಸಿರ್ ಅಹ್ಮದ್ ಖಾನ್ ಪಠಾಣ್ ಯಲ್ಲಾಪುರದ ಅಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೆಲ ಗಾಯಾಳುಗಳನ್ನು ಮಾತಾಡಿಸಿ ಸಿಎಂ ಸಿದ್ದರಾಮಯ್ಯನವರಿಗೆ ಫೋನಲ್ಲಿ ದುರ್ಘಟನೆಯನ್ನು ವಿವರಿಸಿದರು. ಮಡಿದವರು ಮತ್ತು ಗಾಯಗೊಂಡವರೆಲ್ಲ ಸವಣೂರು ತಾಲ್ಲೂಕಿನವರು, ಬೀದಿಬದಿಯ ತರಕಾರಿ ವ್ಯಾಪಾರಸ್ಥರು ಕುಮಟಾ ಸಂತೆಗೆ ತರಕಾರಿ ಮಾರಲು ಹೋಗುವಾಗ ಅಪಘಾತ ಸಂಭವಿಸಿದೆ, ಹೆಚ್ಚಿನ ಪರಿಹಾರ ನೀಡಬೇಕೆಂದು ಶಾಸಕ ಸಿಎಂಗೆ ಮನವಿ ಮಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಅಪಘಾತದಲ್ಲಿ ಮೃತರ ಕುಟುಂಬದವರಿಗೆ 3 ಲಕ್ಷ ರೂ. ಪರಿಹಾರ, ಗಾಯಾಳುಗಳಿಗೆ ಉಚಿತ ಚಿಕಿತ್ಸೆ: ಸಿಎಂ ಘೋಷಣೆ