ಬೇರೆ ಪಕ್ಷ ಸೇರುವಂತೆ ಯಾರೂ ನನ್ನನ್ನು ಸಂಪರ್ಕಿಸಿಲ್ಲ ಮತ್ತು ಆ ಇಚ್ಛೆಯೂ ನನಗಿಲ್ಲ: ಜಿಟಿ ದೇವೇಗೌಡ
ಜಿಟಿ ದೇವೇಗೌಡ ಅವರು ಹೆಚ್ ಡಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿ ಅವರಿಂದ ವಿಮುಖರಾಗಿರುವ ಹಿನ್ನೆಲೆಯಲ್ಲೇ ಕಾಂಗ್ರೆಸ್ ಸೇರುತ್ತಾರೆಂಬ ವದಂತಿಗಳು ಹರಿದಾಡುತ್ತಿವೆ. ಅವರು ಕವಲುದಾರಿಯಲ್ಲಿ ನಿಂತಿರೋದು ಮಾತ್ರ ಸತ್ಯ. ಅವರೊಂದಿಗೆ ಇನ್ನೂ ಒಂದಷ್ಟು ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರುತ್ತಾರೆಂಬ ಸುದ್ದಿ ಇದೆ. ಅದರೆ ಸುದ್ದಿ ಇದುವರೆಗೆ ಖಚಿತಪಟ್ಟಿಲ್ಲ.
ಮೈಸೂರು: ಜೆಡಿಎಸ್ ತೊರೆದು ಬೇರೆ ಪಕ್ಷ ಸೇರುವಂತೆ ಹುಣಸೂರು ಶಾಸಕ ಹರೀಶ್ ಗೌಡ ಅವರಿಗೆ ಪ್ರಲೋಭನೆ ಬಂದಿದ್ದರೆ ಅದನ್ನು ಒಡ್ಡಿದವರು ಯಾರೆಂದು ಅವರೇ ಹೇಳಬೇಕು ಎಂದು ಚಾಮುಂಡೇಶ್ವರಿ ಶಾಸಕ ಜಿಟಿ ದೇವೇಗೌಡ ಹೇಳಿದರು. ರಾಮಲಲ್ಲಾನ ಮೂರ್ತಿ ಕೆತ್ತಲು ಶಿಲೆ ದೊರೆತ ಸ್ಥಳದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತಾಡಿದ ದೇವೇಗೌಡ , ಶ್ರೀರಾಮನ ಸನ್ನಿಧಿಯಲ್ಲಿ ಮಾತಾಡುತ್ತಿದ್ದೇನೆ, ಯಾವುದೇ ಪಕ್ಷದ ನಾಯಕರು ಪಕ್ಷ ಸೇರುವ ಆಮಿಶದೊಂದಿಗೆ ತನ್ನನ್ನು ಸಂಪರ್ಕಿಸಿಲ್ಲ ಮತ್ತು ತಾನು ಸಹ ಬೇರೆ ಪಕ್ಷ ಸೇರುತ್ತಿಲ್ಲ ಎಂದು ಹೇಳಿದರು. ಪುಟ್ಟರಾಜು ಮತ್ತು ಸಾರಾ ಮಹೇಶ್ ತನ್ನೊಂದಿಗೆ ಮಾತಾಡಲು ಮನೆಗೆ ಬಂದಿದ್ದು ಸತ್ಯ, ಜಿಲ್ಲಾ ಮತ್ತು ಪಂಚಾಯತ್ ಚುನಾವಣೆಗಳಲ್ಲೂ ಭಾಗಿಯಾಗಲ್ಲವೆಂದು ಹೇಳಿದ್ದೇನೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
Latest Videos