ಬಿಜೆಪಿ ನಾಯಕರ ವಿರುದ್ಧ ಆರೋಪಗಳನ್ನು ಮಾಡಿರುವ ರಂಗನಾಥ್ ಕೇವಲ ಜೆಡಿಎಸ್ ಅಭ್ಯರ್ಥಿ ಮಾತ್ರ: ಎಸ್ ಟಿ ಸೋಮಶೇಖರ್

|

Updated on: Feb 13, 2024 | 6:21 PM

ರಂಗನಾಥ್ ವಿರುದ್ಧ ಹರಿಹಾಯ್ದ ಸೋಮಶೇಖರ್, ತನ್ನ ಕ್ಷೇತ್ರದಲ್ಲಿ ಎರಡು ಭಾರಿ ಅವರು ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಿದರು ಅದರೆ ಸೌಜನ್ಯಕ್ಕಾದರೂ ತನ್ನನ್ನು ಆಹ್ವಾನಿಸಲಿಲ್ಲ, ಇಂಥವರ ಪರ ತಾನು ಪ್ರಚಾರ ಮಾಡಬೇಕಿತ್ತೇ? ತನಗೆ ಸ್ವಾಭಿಮಾನ ಇಲ್ಲವೇ ಎಂದು ಪ್ರಶ್ನಿಸಿದರು.

ಬೆಂಗಳೂರು: ವಿಧಾನ ಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯಲ್ಲಿ (Bengaluru Council’s Teachers seat by poll) ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎಪಿ ರಂಗನಾಥ್ (AP Ranganath) ವಿರುದ್ಧ ಪ್ರಚಾರ ಮಾಡುತ್ತಿರುವುದಕ್ಕೆ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ (ST Somashekhar) ಕಾರಣಗಳನ್ನು ನೀಡಿದ್ದಾರೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸೋಮಶೇಖರ್, ರಂಗನಾಥ್ ಬಿಜೆಪಿ ಆಭ್ಯರ್ಥಿ ಅಲ್ಲ, ಅವರು ಕೇವಲ ಜೆಡಿಎಸ್ ಅಭ್ಯರ್ಥಿ; ಹಿಂದೆ ಅವರು ಬಿಜೆಪಿಯ ಪ್ರಮುಖ ನಾಯಕರಾದ ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರ, ಡಾ ಸಿಎನ್ ಅಶ್ವಥ್ ನಾರಾಯಣ ಮತ್ತು ತನ್ನ ವಿರುದ್ಧ ಆರೋಪಗಳನ್ನು ಹೊರೆಸಿ ಅಪಪ್ರಚಾರ ಮಾಡಿದ್ದರು ಅಂತ ಹೇಳಿ, ರಂಗನಾಥ್ ಬಿಜೆಪಿ ನಾಯಕರ ವಿರುದ್ಧ ಆಡಿದ ಮಾತುಗಳ ವಿಡಿಯೋವೊಂದನ್ನು ಪ್ಲೇ ಮಾಡಿದರು. ಮುಂದುವರಿದು ಮಾತಾಡಿದ ಸೋಮಶೇಖರ್, ತನ್ನ ಕ್ಷೇತ್ರದಲ್ಲಿ ಎರಡು ಭಾರಿ ರಂಗನಾಥ್ ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಿದರು ಅದರೆ ಸೌಜನ್ಯಕ್ಕಾದರೂ ತನ್ನನ್ನು ಆಹ್ವಾನಿಸಲಿಲ್ಲ, ಇಂಥವರ ಪರ ತಾನು ಪ್ರಚಾರ ಮಾಡಬೇಕಿತ್ತೇ? ತನಗೆ ಸ್ವಾಭಿಮಾನ ಇಲ್ಲವೇ ಎಂದು ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿಅ ಇಲ್ಲಿ ಕ್ಲಿಕ್ ಮಾಡಿ