ಮಜಾ ಟಾಕೀಸ್ ನಲ್ಲಿ ಕಮೆಡಿಯನ್ ಆಗಿ ಕೆಲಸ ಮಾಡುವ ಬಗ್ಗೆ ಅಪರ್ಣಾಗೆ ಅಳುಕಿತ್ತು: ಗ್ರೀಷ್ಮಾ ಸೃಜನ್

|

Updated on: Jul 12, 2024 | 2:36 PM

ಧಾರಾವಾಹಿಗಳಲ್ಲಿ ಗಂಭೀರವಾದ ಪಾತ್ರಗಳನ್ನು ನಿರ್ವಹಿಸುತ್ತಿದ್ದರೂ ಸೆಟ್ ಗಳಲ್ಲಿ ಅಪರ್ಣಾ ಅವರು ಮಿಮಿಕ್ರಿ ಮಾಡುತ್ತಾ ಬೇರೆಯವರನ್ನು ನಗಿಸುತ್ತಾ ಇರುತ್ತಿದ್ದರಂತೆ. ಅದನ್ನು ಕಂಡೇ ಗ್ರೀಷ್ಮಾ ಅವರಿಗೆ ಅಪರ್ಣಾ ಕಮೆಡಿಯನ್ ಆಗಿ ಕಾರ್ಯ ನಿರ್ವಹಿಸಬಲ್ಲರು ಅನ್ನೋದು ಮನದಟ್ಟಾಯಿತಂತೆ. ಅಲ್ಲಿಂದ ಮಿಕ್ಕಿದ್ದು ಇತಿಹಾಸ.

ಬೆಂಗಳೂರು: ಮಜಾ ಟಾಕೀಸ್ ಖ್ಯಾತಿಯ ಸೃಜನ್ ಲೋಕೇಶ್ ಅವರ ಪತ್ನಿ ಹಾಗೂ ಕಿರುತೆರೆ ನಟಿ ಗ್ರೀಷ್ಮಾ ಹಾಗೂ ಅಗಲಿದ ನಟಿ ಅಪರ್ಣಾ ಬಹಳ ಆತ್ಮೀಯ ಸ್ನೇಹಿತೆಯರು. ಬನಶಂಕರಿಯ ಚಿತಾಗಾರದ ಬಳಿ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಗ್ರೀಷ್ಮಾ, ‘ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ ಬಳಿಕ ತಾವಿಬ್ಬರು ಹಲವಾರು ಸೀರಿಯಲ್ ಗಳಲ್ಲಿ ಜೊತೆಯಾಗಿ ನಟಿಸಿದೆವು, ತಮ್ಮ ನಡುವೆ 20 ವರ್ಷದ ಸ್ನೇಹ ಎಂದು ಹೇಳಿದರು. ಸಾಮಾನ್ಯವಾಗಿ ಸೀರಿಯಲ್ ಗಳಲ್ಲಿ ಗಂಭೀರ ಸ್ವರೂಪದ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಅಪರ್ಣಾ ಅವರಿಗೆ ಮಜಾ ಟಾಕೀಸ್ ನಲ್ಲಿ ಭಾಗಿಯಾಗಿಸುವಂತೆ ಸೃಜನ್ ಗೆ ತಾನೇ ಹೇಳಿದ್ದು ಎಂದು ಹೇಳಿದ ಗ್ರೀಷ್ಮಾ, ಕಿರುತೆರೆಯ ಮೇಲೆ ಕಮೆಡಿಯನ್ ಆಗಿ ಕಾಣಿಸುವಕೊಳ್ಳುವ ಬಗ್ಗೆ ಅವರಿಗೆ ಅಳುಕಿತ್ತು ಎಂದರು. ಅವರು ತನಗೆ ನೀನು ಯಾವಾಗಲೂ ನಗುತಾ ನಗುತಾ ಇರ್ತಿಯಾ ಬದುಕಿದರೆ ನಿನ್ನ ಹಾಗೆ ಬದುಕಬೇಕು ಅನ್ನುತ್ತಿದ್ದರು ಎಂದು ಗ್ರೀಷ್ಮಾ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಮಜಾ ಟಾಕೀಸ್ ಆಧಾರ ಸ್ತಂಭವಾಗಿದ್ದ ಅಪರ್ಣಾ ಪಾರ್ಥೀವ ಶರೀರದ ಮುಂದೆ ಸೃಜನ್ ಲೋಕೇಶ್ ಭಾವುಕ!