ನಾವು ಜೈ ಬೀಮ್, ಜೈ ವಾಲ್ಮೀಕಿ, ಜೈ ಬಸವಣ್ಣ ಜೊತೆಗೆ ಜೈ ಶ್ರೀರಾಮ ಕೂಡ ಅನ್ನುತ್ತೇವೆ: ಎಂಬಿ ಪಾಟೀಲ್, ಸಚಿವ

|

Updated on: Feb 12, 2024 | 5:55 PM

ಕೇಸರಿ ಬಿಜೆಪಿಯವರ ಸ್ವತ್ತಲ್ಲ, ಎಲ್ಲ ಹಿಂದೂ ದೇವಸ್ಥಾನಗಳ ಮೇಲೆ ಕೇಸರಿ ಧ್ವಜವಿರುತ್ತದೆ, ಮಠಮಾನ್ಯಗಳಲ್ಲಿ ಕೇಸರಿ ಬಾವುಟಗಳಿರುತ್ತವೆ, ನಾವೆಲ್ಲ ಮನೆಗಳಲ್ಲಿ ಪೂಜೆ ಮಾಡುವಾಗ ಕೇಸರಿ ಬಟ್ಟೆಯನ್ನು ಇಟ್ಟುಕೊಂಡಿರುತ್ತೇವೆ, ಕೇಸರಿ ಶಲ್ಯ ಹೆಗಲ ಮೇಲೆ ಹಾಕಿಕೊಂಡಿರುತ್ತೇವೆ, ಹಾಗಾಗಿ ಕೇಸರಿ ಶಲ್ಯ, ಕೇಸರಿ ಬಾವುಟ ಬಿಜೆಪಿಯವರ ಸೊತ್ತಲ್ಲ ಎಂದು ಸಚಿವ ಎಂಬಿ ಪಾಟಿಲ್ ಹೇಳಿದರು.

ಬೆಂಗಳೂರು: ಬಿಜೆಪಿ ಶಾಸಕರು ಇಂದು ವಿಧಾನ ಸಭೆಯಲ್ಲಿ ಜೈ ಶ್ರೀರಾಮ್ (Jai Sriram) ಅಂದಿದ್ದಾರೆ ಮತ್ತು ಜೈ ಹನುಮಾನ್ ಅಂದಿದ್ದಾರೆ ಜೈ ಭೀಮ್ ಅಂದಿಲ್ಲ ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ (MB Patil) ಹೇಳಿದರು. ವಿಧಾನ ಸೌಧದ (Vidhana Soudha) ಬಳಿ ಇಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಪಾಟೀಲ್, ಕಾಂಗ್ರೆಸ್ ನಾಯಕರು ಜೈ ಬಸವೇಶ್ವರ, ಜೈ ವಾಲ್ಮೀಕಿ, ಜೈ ಭೀಮ್ ಮತ್ತು ಜೈ ಶ್ರೀರಾಮ್ ಸಹ ಅನ್ನತ್ತಾರೆ, ಜಗಜ್ಯೋತಿ ಬಸವೇಶ್ವರರನ್ನು ನಾಡಿನ ಸಾಂಸ್ಕೃತಿಕ ನಾಯಕನಾಗಿ ಕಾಂಗ್ರೆಸ್ ಅಂಗೀಕರಿಸಿದೆ. ರಾಷ್ಟ್ರಕವಿ ಕುವೆಂಪು ಅವರು ನೀಡಿದ ಸರ್ವಜನಾಂಗದ ಶಾಂತಿ ತೋಟದ ಸಂದೇಶವನ್ನು ಬಸವಣ್ಣನವರು 12ನೇ ಶತಮಾನದಲ್ಲಿ ಪ್ರತಿಪಾದಿಸಿದವರು. ಕಾಂಗ್ರೆಸ್ ನಾಯಕರು ಈ ತತ್ವಗಳನ್ನು ಅನುಸರಿಕೊಂಡು ರಾಜಕಾರಣದಲ್ಲಿದ್ದಾರೆ ಎಂದು ಪಾಟೀಲ್ ಹೇಳಿದರು. ಕೇಸರಿ ಬಿಜೆಪಿಯವರ ಸ್ವತ್ತಲ್ಲ, ಎಲ್ಲ ಹಿಂದೂ ದೇವಸ್ಥಾನಗಳ ಮೇಲೆ ಕೇಸರಿ ಧ್ವಜವಿರುತ್ತದೆ, ಮಠಮಾನ್ಯಗಳಲ್ಲಿ ಕೇಸರಿ ಬಾವುಟಗಳಿರುತ್ತವೆ, ನಾವೆಲ್ಲ ಮನೆಗಳಲ್ಲಿ ಪೂಜೆ ಮಾಡುವಾಗ ಕೇಸರಿ ಬಟ್ಟೆಯನ್ನು ಇಟ್ಟುಕೊಂಡಿರುತ್ತೇವೆ, ಕೇಸರಿ ಶಲ್ಯ ಹೆಗಲ ಮೇಲೆ ಹಾಕಿಕೊಂಡಿರುತ್ತೇವೆ, ಹಾಗಾಗಿ ಕೇಸರಿ ಶಲ್ಯ, ಕೇಸರಿ ಬಾವುಟ ಬಿಜೆಪಿಯವರ ಸೊತ್ತಲ್ಲ ಎಂದು ಸಚಿವ ಎಂಬಿ ಪಾಟಿಲ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 12, 2024 05:53 PM