ಹುಬ್ಬಳ್ಳಿ: ಬಿಪಿಎಲ್-ಎಪಿಎಲ್ ಗೊಂದಲ, ಆಹಾರ ಮತ್ತು ನಾಗರಿಕ ಪೂರೈಕೆ ಕಚೇರಿಗೆ ಜನ ಲಗ್ಗೆ
ಬಿಪಿಎಲ್ ಕಾರ್ಡ್ಗಳು ಎಪಿಎಲ್ ಅಂತ ಪರಿಗಣನೆಗೆ ಬಂದಿರೋದು ಬಡ ಕುಟುಂಬಗಳಲ್ಲಿ ಅತಂಕ ಹುಟ್ಟಿಸಿದೆ. ಅದು ಅವರನ್ನು ಹಲವು ಸೌಲಭ್ಯಗಳಿಂದ ವಂಚಿತವಾಗಿಸುತ್ತದೆ. ನಿಗದಿತ ಮಿತಿಗಿಂತ ಹೆಚ್ಚು ಆದಾಯ ಇರುವ ಕುಟುಂಬಗಳ ಬಿಪಿಎಲ್ ಕಾರ್ಡ್ಗಳನ್ನು ಮಾತ್ರ ಎಪಿಎಲ್ ಅಂತ ಘೋಷಿಸಲಾಗುತ್ತಿದೆ ಅಂತ ಸರ್ಕಾರ ಹೇಳುತ್ತಿದ್ದರೂ ಜನರಲ್ಲಿ ಅಸಮಾಧಾನ ಹುಟ್ಟಿಕೊಂಡಿದೆ.
ಹುಬ್ಬಳ್ಳಿ: ನಗರದ ಆಹಾರ ಮತ್ತು ನಾಗರಿಕ ಪೂರೈಕೆ ಕಚೇರಿಯಲ್ಲಿ ಕಂಡುಬಂದ ದೃಶ್ಯವಿದು. ಗೃಹಲಕ್ಷ್ಮಿ, ಅನ್ನಭಾಗ್ಯ ಮತ್ತು ವೈದ್ಯಕೀಯ ಸೌಲಭ್ಯ ಪಡೆಯಲು ಅಗತ್ಯವಿರುವ ಬಿಪಿಎಲ್ ಕಾರ್ಡುಗಳ ಪರಿಷ್ಕರಣೆಯನ್ನು ಸರ್ಕಾರ ಮಾಡುತ್ತಿದ್ದು ಹಲವಾರು ಕುಟುಂಬಗಳ ಕಾರ್ಡ್ಗಳನ್ನು ಎಪಿಎಲ್ ಎಂದು ಪರಿಗಣಿಸಲಾಗುತ್ತಿದೆ. ಪಡಿತರ ಅಂಗಡಿಗೆ ಅಕ್ಕಿ ತೆಗೆದುಕೊಳ್ಳಲು ಹೋದಾಗ ಜನರಿಗೆ ತಮ್ಮ ಕಾರ್ಡ್ ಎಪಿಎಲ್ ಅಂತಾಗಿದ್ದು ಗೊತ್ತಾಗಿದೆ. ಹಾಗಾಗಿ ಅವರು ಯಾಕೆ ಕಾರ್ಡ್ ಬದಲಾಗಿದೆ ಅಂತ ಅರಿಯಲು ಕಚೇರಿಗೆ ಬಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಿಗದಿತ ಮಿತಿಗಿಂತ ಅದಾಯ ಜಾಸ್ತಿಯಿರುವ ಕುಟುಂಬಗಳ ಬಿಪಿಎಲ್ ಕಾರ್ಡುಗಳು ಮಾತ್ರ ರದ್ದಾಗಿವೆ: ಸಂತೋಷ್ ಲಾಡ್