ಅಪ್ಪು ಸರ್​ ನಮ್ಮೊಂದಿಗೆ ಇದ್ದಾರೆ, ಅವರನ್ನು ಮರೆಯೋಕೆ ಆಗಲ್ಲ ಎಂದ ನಟ ವಿಶಾಲ್

| Updated By: ಗಂಗಾಧರ​ ಬ. ಸಾಬೋಜಿ

Updated on: Dec 17, 2022 | 8:08 PM

ಕಾಲಿವುಡ್ ನಟ ವಿಶಾಲ್ ಅಭಿನಯನದ ಚಿತ್ರ 'ಲಾಠಿ' (Laththi). ಡಿ. 22ರಂದು ವಿಶ್ವದಾದ್ಯಂತ ರಿಲೀಸ್​ ಆಗುತ್ತಿದೆ. ಚಿತ್ರದ ಟೀಸರ್​​ನಿಂದಲೇ 'ಲಾಠಿ' ಚಿತ್ರ ನಿರೀಕ್ಷೆ ಹೆಚ್ಚಿಸಿದೆ.

ಕಾಲಿವುಡ್ ನಟ ವಿಶಾಲ್ ಅಭಿನಯನದ ಚಿತ್ರ ‘ಲಾಠಿ’ (Laththi). ಡಿ. 22ರಂದು ವಿಶ್ವದಾದ್ಯಂತ ರಿಲೀಸ್​ ಆಗುತ್ತಿದೆ. ಚಿತ್ರದ ಟೀಸರ್​​ನಿಂದಲೇ ‘ಲಾಠಿ’ ಚಿತ್ರ ನಿರೀಕ್ಷೆ ಹೆಚ್ಚಿಸಿದೆ. ಚಿತ್ರದ ಪ್ರಮೋಷನ್ ಕಾರ್ಯ ಭರ್ಜರಿಯಾಗಿ ನಡೆಯುತ್ತಿದ್ದು, ಇಂದು (ಡಿ. 17) ಬೆಂಗಳೂರಿನಲ್ಲಿ ಪ್ರೀ ರಿಲೀಸ್ ಇವೆಂಟ್​ ಮಾಡಲಾಗಿದೆ. ನಟ ವಿಶಾಲ್ ಇದೇ ವೇಳೆ ನಟ ಪುನೀತ್​ ರಾಜ್​ಕುಮಾರ್​ ಅವರನ್ನು ನೆನೆದರು. ‘ಪುನೀತ್​ ಅವರು ಇಲ್ಲ ಎನ್ನುವುದನ್ನು ನಾನು ಊಹಿಸಲಾರೆ, ಅವರು ನಮ್ಮೊಂದಿಗೆ ಇದ್ದಾರೆ. ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಅದನ್ನು ನಾನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ’ ಎಂದು ವಿಶಾಲ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.