ಆರಗ ಜ್ಞಾನೇಂದ್ರ ಯಾವತ್ತೂ ಸಮಾಜಘಾತುಕ ಶಕ್ತಿಗಳ ಪರ ಮಾತಾಡಿದವರಲ್ಲ: ಸಿಟಿ ರವಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 26, 2022 | 6:23 PM

ಹಗರಣ ಬಯಲಿಗೆ ಬಂದ ಬಳಿಕ ಅವರನ್ನು ರಕ್ಷಣೆ ಮಾಡುವ ಕೆಲಸ ಗೃಹ ಸಚಿವರಿಂದ ಆಗಿದೆಯೇ? ದಿವ್ಯಾ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಅಂತ ಗೊತ್ತಾದ ಬಳಿಕ ಅವರ ಜೊತೆ ಸಂಪರ್ಕವಿಟ್ಟುಕೊಂಡಿದ್ದರೆ ಅದು ಅಕ್ಷಮ್ಯ ಅಪರಾಧ ಎಂದು ರವಿಯವರು ಹೇಳಿದರು.

Delhi: ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ಅವರು ರಾಜ್ಯದ ಗೃಹಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರ ಸಾಮರ್ಥ್ಯದ ಬಗ್ಗೆ ಸ್ಪಷ್ಟವಾದ ಅಭಿಪ್ರಾಯ ವ್ಯಕ್ತಪಡಿಸಲಿಲ್ಲ. ದೆಹಲಿ ಪ್ರವಾಸದಲ್ಲಿರುವ ರವಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತಾಡುವಾಗ ಜ್ಞಾನೇಂದ್ರ ಅವರನ್ನು ವಹಿಸಿಕೊಂಡು ಮಾತಾಡಿದ್ದು ನಿಜವಾದರೂ ಅವರ ಮಾತುಗಳಲ್ಲಿ ಸ್ಪಷ್ಟತೆ ಇರಲಿಲ್ಲ. ಗೃಹಸಚಿವ (home minister) ಎಂಬ ಪದವೇ ಜನರಲ್ಲಿ ಸಾಮರ್ಥ್ಯ ಹುಟ್ಟಿಸುತ್ತದೆ, ಹಾಗಾಗಿ ಸಚಿವರನ್ನು ಅಸಮರ್ಥ ಅಂತ ಹೇಳಲಾಗದು. ಕೆಲಸ ಮಾಡುವ ವೈಖರಿ ಬೇರೆ ಬೇರೆಯಾಗಿರುತ್ತದೆ, ಎಲ್ಲರೂ ಒಂದೇ ಥರ ಕೆಲಸ ಮಾಡೋದಿಲ್ಲ. ಅವರನ್ನು 30 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ, ಅವರೊಬ್ಬ ಒಳ್ಳೆಯ ಮತ್ತು ಪ್ರಮಾಣಿಕ ವ್ಯಕ್ತಿಯಾಗಿದ್ದಾರೆ ಎಂದು ರವಿ ಹೇಳಿದರು. ಮಾನವನ ಬದುಕಿನಲ್ಲಿ ಕಲಿಯುವುದು ಯಾವತ್ತೂ ನಿಲ್ಲದ ಪ್ರಕ್ರಿಯೆ, ಅವರು ಕೆಲವನ್ನೂ ಈನ್ನೂ ಕಲಿತಿರಲಿಕ್ಕಿಲ್ಲ, ಹಾಗಂತ ಅವರನ್ನು ಅಸಮರ್ಥ ಗೃಹಸಚಿವ ಅಂತ ಕರೆಯಲಾಗದು ಎಂದು ರವಿ ಹೇಳಿದರು.

ಗೃಹ ಸಚಿವರು ಯಾವತ್ತೂ ದೇಶದ್ರೋಹಿಗಳ ಪರ ನಿಂತವರಲ್ಲ, ಸಮಾಜಘಾತುಕ ಶಕ್ತಿಗಳನ್ನು ಬೆಂಬಲಿಸಿದವರಲ್ಲ. ಪಿಎಸ್ಐ ನೇಮಕಾತಿ ಹಗರಣದಲ್ಲಿ ಆರೋಪಿ ಎಂದು ಹೇಳಲಾಗುತ್ತಿರುವ ದಿವ್ಯಾ ಹಾಗರಗಿ ಅವರ ಮನೆಗೆ ಜ್ಞಾನೇಂದ್ರ ಹೋಗಿರಬಹುದು. ಆದರೆ, ಈ ಹಗರಣ ಬಯಲಿಗೆ ಬಂದ ಬಳಿಕ ಅವರನ್ನು ರಕ್ಷಣೆ ಮಾಡುವ ಕೆಲಸ ಗೃಹ ಸಚಿವರಿಂದ ಆಗಿದೆಯೇ? ದಿವ್ಯಾ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಅಂತ ಗೊತ್ತಾದ ಬಳಿಕ ಅವರ ಜೊತೆ ಸಂಪರ್ಕವಿಟ್ಟುಕೊಂಡಿದ್ದರೆ ಅದು ಅಕ್ಷಮ್ಯ ಅಪರಾಧ ಎಂದು ರವಿಯವರು ಹೇಳಿದರು.

ಅದರೆ, ಹಗರಣದಲ್ಲಿ ದಿವ್ಯಾ ಹೆಸರು ಕೇಳಿ ಬಂದ ನಂತರ ಅವರ ಪತಿಯನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ದಿವ್ಯಾರನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಅವರನ್ನು ರಕ್ಷಿಸುವ ಕೆಲಸ ಗೃಹಮಂತ್ರಿಗಳು ಮಾಡುತ್ತಿಲ್ಲ ಎಂದು ರವಿ ಹೇಳಿದರು.

ಇದನ್ನೂ ಓದಿ:  PSI Recruitment Scam: ಇಷ್ಟು ದಿನ ಪ್ರಿಯಾಂಕ್ ಸಾಕ್ಷ್ಯ ಏಕೆ ಕೊಡಲಿಲ್ಲ; ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನೆ