Karnataka Budget Session: ಅರವಿಂದ್ ಬೆಲ್ಲದ್ ಮತ್ತು ಪ್ರದೀಪ್ ಈಶ್ವರ್ ನಡುವೆ ಪ್ರೀತಿ ವಿನಿಮಯ ಆಗಿದ್ದು ಯಾಕೆ ಗೊತ್ತಾ?

|

Updated on: Feb 22, 2024 | 4:56 PM

Karnataka Budget Session: ಸಾಲದ ಬಗ್ಗೆ ಬೆಲ್ಲದ್ ಅವರು ಸುಳ್ಳು ಹೇಳುತ್ತಿದ್ದಾರೆ ಅದನ್ನು ಕ್ಲ್ಯಾರಿಫೈ ಮಾಡಲು ಅವಕಾಶ ಕೊಡಿ ಸಭಾಧ್ಯಕ್ಷರನ್ನು ಅವರು ಕೋರಿದಾಗ, ಕೂತ್ಕೊಳ್ರೀ ಈಶ್ವರ್ ಅನ್ನುತ್ತಾ ನಿನ್ ಮ್ಯಾಲ ನಂಗ್ ಪ್ರೀತಿ ಐತೆ ಅನ್ನುತ್ತಾರೆ. ಆಗ ಈಶ್ವರ್, ನಂಗೂ ನಿಮ್ ಮೇಲೆ ಪ್ರೀತಿ ಇದೆ ಸಾರ್ ಆದರೆ ನಾನು ಯೀಲ್ಡ್ ಅಗಲ್ಲ ಅನ್ನುತ್ತಾರೆ.

ಬೆಂಗಳೂರು: ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ (Aravind Bellad) ಮತ್ತು ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ವಾಲೆಂಟೈನ್ಸ್ ಡೇ ಎರಡು ವಾರಗಳ ಬಳಿಕ ಪರಸ್ಪರ ಪ್ರೀತಿ ವಿನಿಮಯ ಮಾಡಿಕೊಂಡರು! ಸದನದಲ್ಲಿ ಬೆಲ್ಲದ್ ಇಂದು ಭರ್ಜರಿ ಫಾರಂನಲ್ಲಿದ್ದರು. ಅದರೆ ಅವರು ಉಲ್ಲೇಖಿಸಿದ ಅಂಶವೊಂದರ ಮೇಲೆ ಈಶ್ವರ್ ಗೆ ತಕರಾರಿತ್ತು. ಅದನ್ನು ಬೆಲ್ಲದ್ ಮತ್ತು ಸದನದ ಗಮನಕ್ಕೆ ತರುವ ಪ್ರಯತ್ನವನ್ನು ಈಶ್ವರ್ ಮಾಡುತ್ತಾರೆ. ಸಭಾಧ್ಯಕ್ಷ ರುದ್ರಪ್ಪ ಲಮಾಣಿ (Rudrappa Lamani) ಮತ್ತು ಖುದ್ದು ಬೆಲ್ಲದ್ ಅಮೇಲೆ ಮಾತಾಡಿ ಅಂತ ಹೇಳಿದರೂ ಈಶ್ವರ್ ಹಟಬಿಡದೆ ಪ್ರಶ್ನೆ ಕೇಳಲು ತವಕಿಸುತ್ತಾರೆ. ಸಾಲದ ಬಗ್ಗೆ ಬೆಲ್ಲದ್ ಅವರು ಸುಳ್ಳು ಹೇಳುತ್ತಿದ್ದಾರೆ ಅದನ್ನು ಕ್ಲ್ಯಾರಿಫೈ ಮಾಡಲು ಅವಕಾಶ ಕೊಡಿ ಸಭಾಧ್ಯಕ್ಷರನ್ನು ಅವರು ಕೋರಿದಾಗ, ಕೂತ್ಕೊಳ್ರೀ ಈಶ್ವರ್ ಅನ್ನುತ್ತಾ ನಿನ್ ಮ್ಯಾಲ ನಂಗ್ ಪ್ರೀತಿ ಐತೆ ಅನ್ನುತ್ತಾರೆ. ಆಗ ಈಶ್ವರ್, ನಂಗೂ ನಿಮ್ ಮೇಲೆ ಪ್ರೀತಿ ಇದೆ ಸಾರ್ ಆದರೆ ನಾನು ಯೀಲ್ಡ್ ಅಗಲ್ಲ ಅನ್ನುತ್ತಾರೆ. ಮಾತು ಮುಂದುವರೆಸುವ ಬೆಲ್ಲದ್ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಿದ್ದರಾಮಯ್ಯ ಕಳೆದ ಬಜೆಟ್ ನಲ್ಲಿ 11,496 ಕೋಟಿ ರೂ. ನೀಡಿದ್ದರು, ಆದರೆ ಪ್ರಿಯಾಂಕ್ ಖರ್ಗೆ ಅವರ ಜನಪ್ರಿಯತೆ ತನಗಿಂತ ಜಾಸ್ತಿಯಾದೀತು ಎಂಬ ಆತಂಕದಲ್ಲಿ ಅವರು ಈ ಬಾರಿ ರೂ. 2,000 ಕೋಟಿ ಕಡಿತಗೊಳಿಸಿದ್ದಾರೆ ಎನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 22, 2024 01:17 PM