ಕಿರುಕುಳ ಆರೋಪ ಮಾಡಿದ್ದ ಸ್ಯಾಂಡಲ್‌ವುಡ್ ನಟಿ ವಿರುದ್ಧ ಅರವಿಂದ್ ರೆಡ್ಡಿ ಹೊಸ ಬಾಂಬ್
ಸ್ಯಾಂಡಲ್‌ವುಡ್ ನಟಿ ಮತ್ತು ಉದ್ಯಮಿ ಅರವಿಂದ್ ರೆಡ್ಡಿ ನಡುವಿನ ವಿವಾದ ತಾರಕಕ್ಕೇರಿದೆ. ನಟಿ ಮಾಡಿದ ಆರೋಪಗಳಿಗೆ ಕೆರಳಿದ ರೆಡ್ಡಿ, ಆಕೆ ಮೂವರಿಗೆ ಮೋಸ ಮಾಡಿದ್ದಾಳೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮದುವೆಯಾಗುವ ನೆಪದಲ್ಲಿ ಲಕ್ಷಾಂತರ ಹಣ ಪಡೆದು ವಂಚಿಸಿ, ಗಿಫ್ಟ್ ನೀಡಿದ್ದ ಆಸ್ತಿ ದಾಖಲೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಹೇಳಿದ್ದಾರೆ. ನಟಿಯ ಪ್ರತಿಕ್ರಿಯೆ ಕುತೂಹಲ ಕೆರಳಿಸಿದೆ.
ಬೆಂಗಳೂರು, ನವೆಂಬರ್ 18: ಸ್ಯಾಂಡಲ್‌ವುಡ್ ನಟಿ ಮತ್ತು ಉದ್ಯಮಿ ಅರವಿಂದ್ ರೆಡ್ಡಿ ನಡುವಿನ ವಿವಾದವು ತೀವ್ರಗೊಂಡಿದೆ. ಉದ್ಯಮಿ ಜೊತೆ ಸಂಬಂಧದಲ್ಲಿದ್ದ ನಟಿ, ಬ್ರೇಕಪ್ ನಂತರ ಅರವಿಂದ್ ರೆಡ್ಡಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದರು. ಇದರ ನಂತರ ಪೊಲೀಸರು ಅರವಿಂದ್ ರೆಡ್ಡಿಯನ್ನು ಬಂಧಿಸಿದ್ದರು. ನಟಿ ತನ್ನ ವಿರುದ್ಧ ಮಾಡಿದ ಆರೋಪಗಳಿಂದ ಕೆರಳಿದ ಉದ್ಯಮಿ ಅರವಿಂದ್ ರೆಡ್ಡಿ, ದಿನಕ್ಕೊಂದು ಹೊಸ ಹೇಳಿಕೆ ನೀಡುತ್ತಿದ್ದಾರೆ. ಆಕೆ ಮೂವರಿಗೆ ಇದೇ ರೀತಿ ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ಮೋಸ ಮಾಡಿದ್ದಾಳೆ ಎಂದು ಅರವಿಂದ್ ಆರೋಪಿಸಿದ್ದು, ಒಬ್ಬರ ಬಳಿ 80 ಲಕ್ಷ ರೂಪಾಯಿ ಪಡೆದಿರುವುದಾಗಿಯೂ ತಿಳಿಸಿದ್ದಾರೆ.
ಇದನ್ನೂ ಓದಿ ನನ್ನ ಮನೆಯಲ್ಲೇ ಇದ್ದುಕೊಂಡು ಇನ್ನೊಬ್ಬರ ಜತೆ ಸಂಸಾರ ಮಾಡಿದಳು: ನಟಿ ಮೇಲೆ ಉದ್ಯಮಿ ಆರೋಪ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
