Guru Sanchara Rashi Phala 2026: ಗುರು ಸಂಚಾರ ಮೇಷ ರಾಶಿಯ ಮೇಲೆ ಹೇಗೆ ಪ್ರಭಾವ ಬೀರಲಿದೆ? ಜ್ಯೋತಿಷ್ಯ ಸಲಹೆ ಇಲ್ಲಿದೆ

Updated on: May 19, 2026 | 2:50 PM

ಮೇಷ ರಾಶಿಯವರಿಗೆ 2026ರಲ್ಲಿ ಗುರುವು ನಾಲ್ಕನೇ ಮನೆಯಲ್ಲಿ ಸಂಚರಿಸುತ್ತಾನೆ. ಇದು ಆಸ್ತಿ ಖರೀದಿ, ವಾಹನ ಯೋಗ, ವೃತ್ತಿ ಪ್ರಗತಿಗೆ ಶುಭ. ಆಂತರಿಕ ಶಾಂತಿ ದೊರೆಯುತ್ತದೆ. ಆದರೆ, ದುರಭ್ಯಾಸಗಳು, ದಾಂಪತ್ಯ ಕಲಹ, ಕಾನೂನು ಸಮಸ್ಯೆಗಳ ಬಗ್ಗೆ ಎಚ್ಚರ ವಹಿಸಬೇಕು. ಗುರುವಾರ ದಾನ, ಮಂತ್ರ ಜಪದಿಂದ ಉತ್ತಮ ಫಲ ಪಡೆಯಬಹುದು.

ಜ್ಯೋತಿಷ್ಯದಲ್ಲಿ ಗುರು ಗ್ರಹದ ಸಂಚಾರವು ಅತ್ಯಂತ ಮಹತ್ವದ್ದಾಗಿದೆ. ಈ ವರ್ಷ ಗುರುವು ಜೂನ್‌ನಲ್ಲಿ ಸ್ಥಾನ ಬದಲಾಯಿಸುತ್ತಿದ್ದು, ಪ್ರಪ್ರಥಮವಾಗಿ ಮೇಷ ರಾಶಿಯವರಿಗೆ ಗುರು ಸಂಚಾರ ಹೇಗಿರಲಿದೆ ಎಂಬುದನ್ನು ಡಾ. ಬಸವರಾಜ್ ಗುರೂಜಿ ವಿವರಿಸಿದ್ದಾರೆ. ಮೇಷರಾಶಿಯ ನಾಲ್ಕನೇ ಮನೆಯಲ್ಲಿ ಗುರುವು (ಸುಖಸ್ಥಾನ) ಸಂಚಾರ ಮಾಡಲಿದ್ದಾನೆ. ಈ ಸಂಚಾರವು ಇವರ ಜೀವನದಲ್ಲಿ ಹಲವು ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ.

ಈ ಅವಧಿಯಲ್ಲಿ, ಮೇಷ ರಾಶಿಯವರಿಗೆ ಮನೆ ಕಟ್ಟುವ, ನಿವೇಶನ ಅಥವಾ ಭೂಮಿ ಖರೀದಿಸುವ ಯೋಗ ಬಲಗೊಳ್ಳಲಿದೆ. ವಾಹನ ಯೋಗವೂ ಚೆನ್ನಾಗಿದ್ದು, ಉದ್ಯೋಗದಲ್ಲಿ ಬಡ್ತಿ ಅಥವಾ ಬದಲಾವಣೆಗಳ ಸಾಧ್ಯತೆಗಳಿವೆ. ಆಂತರಿಕ ಶಾಂತಿ ಮತ್ತು ವ್ಯಾಪಾರದಲ್ಲಿ ವೃದ್ಧಿಯನ್ನು ಕಾಣಬಹುದು. ರಿಯಲ್ ಎಸ್ಟೇಟ್, ಸೇನಾ ಮತ್ತು ಪೊಲೀಸ್ ವೃತ್ತಿಯಲ್ಲಿರುವವರಿಗೆ ಮನಸ್ಸಿನ ತೃಪ್ತಿ ಸಿಗಲಿದೆ. ಪಿತೃಾರ್ಜಿತ ಆಸ್ತಿ ದೊರೆಯುವ ಹಾಗೂ ಐಷಾರಾಮಿ ಜೀವನ ನಡೆಸುವ ಅವಕಾಶಗಳು ಒದಗಿ ಬರಲಿವೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 19, 2026 11:25 AM
Loading...
Unable to load recommendations.
Follow Us
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More