ಯುದ್ಧಕ್ಕೆ ಸಿದ್ಧ ಎಂದ ಸುದೀಪ್ ಮಾತಿಗೆ ಅರ್ಜುನ್ ಜನ್ಯ ಮೊದಲ ರಿಯಾಕ್ಷನ್
ನಟ ಸುದೀಪ್ ಹುಬ್ಬಳ್ಳಿಯಲ್ಲಿ ನಡೆದ ‘ಮಾರ್ಕ್’ ಚಿತ್ರದ ಪ್ರೀ-ರಿಲೀಸ್ ಇವೆಂಟ್ನಲ್ಲಿ ‘ಮಾತಿಗೆ ಬದ್ಧ, ಯುದ್ಧಕ್ಕೆ ಸಿದ್ಧ’ ಎಂದು ಹೇಳಿದ್ದರು. ಹಾಗಾದ್ರೆ ಅವರು ಆ ಮಾತು ಹೇಳಿದ್ದು ಯಾರಿಗೆ ಎನ್ನುವ ಪ್ರಶ್ನೆ ಜನರ ಮನದಲ್ಲಿ ಮೂಡಿತ್ತು. ಅರ್ಜುನ್ ಜನ್ಯ ಅವರು ಈಗ ಆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ಇಲ್ಲಿದೆ..
ನಟ ಕಿಚ್ಚ ಸುದೀಪ್ (Kichcha Sudeep) ಅವರು ಹುಬ್ಬಳ್ಳಿಯಲ್ಲಿ ನಡೆದ ‘ಮಾರ್ಕ್’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ‘ಮಾತಿಗೆ ಬದ್ಧ, ಯುದ್ಧಕ್ಕೆ ಸಿದ್ಧ’ ಎಂದು ಹೇಳಿದ್ದರು. ಹಾಗಾದರೆ ಅವರು ಆ ಮಾತು ಹೇಳಿದ್ದು ಯಾರಿಗೆ ಎಂಬ ಪ್ರಶ್ನೆ ಜನರಲ್ಲಿ ಮೂಡಿತ್ತು. ‘ಮಾರ್ಕ್’ ತೆರೆಕಾಣುತ್ತಿರುವ ದಿನವೇ (ಡಿಸೆಂಬರ್ 25) ಅರ್ಜುನ್ ಜನ್ಯ ನಿರ್ದೇಶನದ ‘45’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಬಗ್ಗೆ ಅರ್ಜುನ್ ಜನ್ಯ (Arjun Janya) ಅವರು ಟಿವಿ9 ಜೊತೆ ಮಾತನಾಡಿ ಪ್ರತಿಕ್ರಿಯೆ ನೀಡಿದ್ದಾರೆ. ‘ಪೈರಸಿಗೋಸ್ಕರ ತಾವು ಆ ರೀತಿ ಹೇಳಿಕೆ ನೀಡಿರುವುದು ಎಂದು ಸುದೀಪ್ ಸರ್ ಈಗಾಗಲೇ ಹೇಳಿದ್ದಾರೆ. ಶಿವಣ್ಣ, ಉಪೇಂದ್ರ, ರಾಜ್ ಬಿ. ಶೆಟ್ಟಿ ಅವರಿಗೂ ಸುದೀಪ್ ಸರ್ ಎಂದರೆ ಬಹಳ ಪ್ರೀತಿ ಇದೆ. ಇವರೆಲ್ಲರ ಬಗ್ಗೆ ಸುದೀಪ್ ಅವರಿಗೂ ಬಹಳ ಅಭಿಮಾನ ಇದೆ. ಜನರು ಬೇರೆ ರೀತಿ ಅಂದುಕೊಂಡಿರಬಹುದು. ಆದರೆ ಈಗ ಸ್ಪಷ್ಟನೆ ಸಿಕ್ಕಿದೆ’ ಎಂದು ಅರ್ಜುನ್ ಜನ್ಯ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
