ಮೋಸ್ಟ್ ವಾಂಟೆಡ್ ಕ್ರಿಮಿನಲ್ಸ್​ ಬಂಧನ ಪ್ರಕರಣ: ಹಣ ವರ್ಗಾವಣೆಗೆ ಬೆಂಗಳೂರಿನಲ್ಲಿ ಫ್ಯಾಕ್ಟರಿ ಹಾಕಿಕೊಂಡಿದ್ದ ಪಾತಕಿ! ಓಮನ್ ಪೊಲೀಸರ ಮೊರೆ ಹೋದ ಸಿಸಿಬಿ

| Updated By: ಸಾಧು ಶ್ರೀನಾಥ್​

Updated on: Aug 26, 2023 | 12:02 PM

ಇನ್ನು ಪಾತಕಿ ಜಲಾಲನ ಮಧ್ಯವರ್ತಿ ಅನ್ಬುಗೆ ಪಾಸ್ ಪೋರ್ಟ್ ಮಾಡಿಸಿಕೊಡಲು ಅಧಿಕಾರಿಗಳು ಸಹಾಯ ಮಾಡಿರುವ ಸಾಧ್ಯತೆ ಹಿನ್ನೆಲೆ ವಿಚಾರಣೆಗೆ ಸಿಸಿಬಿ ಪೊಲೀಸರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಜಲಾಲ್ ಗೆ ಪಾಸ್ ಪೋರ್ಟ್ ಮಾಡಿಸಿದ ಸಂದರ್ಭದಲ್ಲಿ ಸಹಾಯ ಮಾಡಿದವರು ಯಾರು ಯಾರು ಎಂಬುದರ ಕುರಿತು ತನಿಖೆ ನಡೆದಿದೆ. ಜಲಾಲ್ ತನ್ನ ಕೈಗೆ ಸಲೀಸಾಗಿ ಹಣ ವರ್ಗಾವಣೆಯಾಗಲು ಬೆಂಗಳೂರಿನಲ್ಲಿ ಫ್ಯಾಕ್ಟರಿ ಸ್ಥಾಪಿಸಿರುವ ನಾಟಕ ಮಾಡಿದ್ದ.

ಬೆಂಗಳೂರು, ಆಗಸ್ಟ್​ 26: ಸಿಸಿಬಿ ಪೊಲೀಸರಿಂದ (Bangalore CCB) ಇಂಟರ್ನ್ಯಾಷನಲ್ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗಳ (international most wanted criminals) ಬಂಧನ ಪ್ರಕರಣದಲ್ಲಿ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಈ ವೇಳೆ ಸ್ಪೋಟಕ ವಿಚಾರಗಳು ಬಯಲಾಗುತ್ತಿವೆ. ಪ್ರಕರಣದ ಪ್ರಮುಖ ಆರೋಪಿ ಜಲಾಲ್ ಅಲಿಯಾಸ್ ಮಹಮದ್ ಸಿದ್ದಿಕಿ ದುಬೈಗೆ ಹಾರಿದ್ದು (Oman) ಆತಂಕಕಾರಿಯಾಗಿದೆ. ಅನ್ಬು ಅಳಗನ್ ಎಂಬಾತನಿಗೆ ಪಾಸ್ ಪೋರ್ಟ್ (pass port) ಮಾಡಿಸಿಕೊಡಲು ಆರೋಪಿ ಜಲಾಲ್ ಕೊಟ್ಟ ಹಣವೆಷ್ಟು ಗೊತ್ತಾ? ಅಷ್ಟಕ್ಕೂ ಜಲಾಲ್ ಮೊದಲು ಬಂಧವಾಗಿದ್ದು ಎಲ್ಲಿ? ಇವೇ ಮುಂತಾದ ವಿಷಯಗಳು ಆತಂಕಕಾರಿಯಾಗಿವೆ.

ಅಸಲಿಗೆ ಜಲಾಲ್ ಅಲಿಯಾಸ್ ಸಿದ್ದಿಕಿ ಮೂಲತಃ ಶ್ರೀಲಂಕಾದವನು. ಡ್ರಗ್ ಡೀಲಿಂಗ್ ಮತ್ತು ಶ್ರೀಲಂಕಾ ಅಂಡರ್​​ ವರ್ಲ್ಡ್​​​ನಲ್ಲಿ ಸಕ್ರಿಯನಾಗಿದ್ದ. ಲಂಕಾದಲ್ಲಿ ಹಲವಾರು ಕೇಸ್ ಬಿದ್ದು, ಮೋಸ್ಟ್ ವಾಂಟೆಡ್‌ ಆಗಿದ್ದ ಬಳಿಕ ಜಲಾಲ್ ಕಳ್ಳದಾರಿಯಲ್ಲಿ ಭಾರತಕ್ಕೆ ಬಂದಿದ್ದ. ಭಾರತ, ಶ್ರೀಲಂಕಾ, ಪಾಕಿಸ್ತಾನ ಭಾಗದಲ್ಲಿ ಡ್ರಗ್ಸ್ ಡೀಲ್ ಮಾಡ್ತಿದ್ದ. ತಮಿಳುನಾಡಿಗೆ ಬಂದು ಡ್ರಗ್ ಡೀಲಿಂಗ್ ಮಾಡುತ್ತಿದ್ದ.

ಚೆನ್ನೈನಲ್ಲಿ ಡ್ರಗ್ ಪೆಡ್ಲಿಂಗ್ ಕೇಸ್ ನಲ್ಲಿ ಎನ್​​ಸಿಬಿ ಅವನನ್ನು ಬಂಧಿಸಿ, ಜೈಲಿಗೆ ಕಳುಹಿಸಿತ್ತು. ಪ್ರಕರಣದಲ್ಲಿ ನ್ಯಾಯಾಲಯವು ಜಲಾಲ್ ಗೆ 10 ವರ್ಷಗಳ ಸಜೆ ಸಹ ವಿಧಿಸಿತ್ತು. ಆದ್ರೆ ಜೈಲಿನಿಂದಲೇ ಎಸ್ಕೇಪ್ ಆಗಿದ್ದ ನಟೋರಿಯಸ್ ಜಲಾಲ್ ಮುಂದೆ ಬೆಂಗಳೂರಿನಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ತಲೆಮರಿಸಿಕೊಂಡಿದ್ದ. ನಂತ್ರ ಬೆಂಗಳೂರಿನ ವಿವೇಕ್ ನಗರದಲ್ಲಿ ಪಾಸ್ ಪೋರ್ಟ್ ಮಾಡಿಸಿಕೊಂಡಿದ್ದ. ಇದಕ್ಕೆ ಸಹಾಯ ಮಾಡಿದ್ದು ಹಾರಿಜಾನ್ ಪಾಸ್ ಪೋರ್ಟ್ ಏಜೆನ್ಸಿಯ ಅನ್ಬು ಅಳಗನ್ ಎಂಬಾತ.

ಅನ್ಬು ಅಳಗನ್ ಪಾಸ್ ಪೋರ್ಟ್ ಏಜೆನ್ಸಿಯಲ್ಲಿ ಕೆಲಸ ಮಾಡ್ತಿದ್ದ. ಪಾಸ್ ಪೋರ್ಟ್ ಮಾಡಲು 1.5 ಲಕ್ಷ ಹಣವನ್ನ ಕೊಟ್ಟಿದ್ದ ಜಲಾಲ್. ನಕಲಿ ದಾಖಲಾತಿಗಳ ಮೂಲಕ ಜಲಾಲ್ ಗೆ ಪಾಸ್ ಪೋರ್ಟ್ ಸಿಕ್ಕಿತ್ತು.

ಇದೀಗ ಬೆಂಗಳೂರು ಸಿಸಿಬಿ ತನಿಖೆ ಪೊಲೀಸರಿಂದ ಮುಂದುವರೆದಿದೆ. ಸದ್ಯ ಓಮನ್ ಪೊಲೀಸರ ವಶದಲ್ಲಿರುವ ಜಲಾಲ್​ನನ್ನು ತಮ್ಮ ವಶಕ್ಕೆ ಪಡೆಯಲು ಸಿಸಿಬಿ ಪೊಲೀಸರಿಂದ ಪೇಪರ್ ವರ್ಕ್ ನಡೆದಿದೆ.

ಇನ್ನು ಜಲಾಲನ ಮಧ್ಯವರ್ತಿ ಅನ್ಬುಗೆ ಪಾಸ್ ಪೋರ್ಟ್ ಮಾಡಿಸಿಕೊಡಲು ಅಧಿಕಾರಿಗಳು ಸಹಾಯ ಮಾಡಿರುವ ಸಾಧ್ಯತೆ ಹಿನ್ನೆಲೆ ವಿಚಾರಣೆಗೆ ಸಿಸಿಬಿ ಪೊಲೀಸರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಜಲಾಲ್ ಗೆ ಪಾಸ್ ಪೋರ್ಟ್ ಮಾಡಿಸಿದ ಸಂದರ್ಭದಲ್ಲಿ ಸಹಾಯ ಮಾಡಿದವರು ಯಾರು ಯಾರು ಎಂಬುದರ ಕುರಿತು ತನಿಖೆ ನಡೆಯಲಿದೆ.

ಜಲಾಲ್ ತನ್ನ ಕೈಗೆ ಸಲೀಸಾಗಿ ಹಣ ವರ್ಗಾವಣೆಯಾಗಲು ಬೆಂಗಳೂರಿನಲ್ಲಿ ಫ್ಯಾಕ್ಟರಿ ಸ್ಥಾಪಿಸಿರುವ ನಾಟಕ ಮಾಡಿದ್ದ. ಎಲ್ಇಡಿ ಫ್ಯಾಕ್ಟರಿ ಎಂದು ರಿಜಿಸ್ಟರ್ ಮಾಡಿಸಿದ್ದ ಜಲಾಲ. ಯಲಹಂಕದಲ್ಲಿ ಪ್ರಾಪರ್ಟಿ ಖರೀದಿ ಮಾಡಿದ್ದ. ಈ ಪ್ರಾಪರ್ಟಿಗೆ ಮನ್ಸೂರ್ ಎಂಬುವವನು ಬೇನಾಮಿಯಾಗಿದ್ದ. ಇದೇ ಪ್ರಾಪರ್ಟಿಯನ್ನ ಮಾರಿ ಶ್ರೀಲಂಕಾದಿಂದ ಬಂದ ಆರೋಪಿಗಳಿಗೆ ನೀಡಲು ರೆಡಿ ಮಾಡಿದ್ದ ಮನ್ಸೂರ್. ಸದ್ಯ ಈ ಹಣವನ್ನ ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.