PM Modi in ISRO, Bengaluru: ಇಸ್ರೋ ವಿಜ್ಞಾನಿಗಳ ದರ್ಶನ ಮಾಡುವ ತಳಮಳ ಅದುಮಿಡಲಾಗದೆ ಬೆಳಗ್ಗೆಯೇ ಅವರನ್ನು ಐಎಸ್​ಟಿಅರ್​ಎಸಿಗೆ ಕರೆಸಿ ತೊಂದರೆ ಕೊಟ್ಟಿರುವೆ: ಪ್ರಧಾನಿ ನರೇಂದ್ರ ಮೋದಿ

PM Modi in ISRO, Bengaluru: ಇಸ್ರೋ ವಿಜ್ಞಾನಿಗಳ ದರ್ಶನ ಮಾಡುವ ತಳಮಳ ಅದುಮಿಡಲಾಗದೆ ಬೆಳಗ್ಗೆಯೇ ಅವರನ್ನು ಐಎಸ್​ಟಿಅರ್​ಎಸಿಗೆ ಕರೆಸಿ ತೊಂದರೆ ಕೊಟ್ಟಿರುವೆ: ಪ್ರಧಾನಿ ನರೇಂದ್ರ ಮೋದಿ

ಅರುಣ್​ ಕುಮಾರ್​ ಬೆಳ್ಳಿ
|

Updated on:Aug 26, 2023 | 11:18 AM

ಚಂದ್ರಯಾನ-3 ವಿಕ್ರಮ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವಾಗ, ತಾವು ದಕ್ಷಿಣ ಆಫ್ರಿಕಾ ಮತ್ತು ನಂತರ ಗ್ರೀಸ್ ನಲ್ಲಿದ್ದರೂ ತಮ್ಮ ಮನಸ್ಸು ಮಾತ್ರ ಇಸ್ರೋ ವಿಜ್ಞಾನಿಗಳೊಂದಿಗಿತ್ತು, ಹಾಗಾಗಿ ಭಾರತಕ್ಕೆ ಬಂದ ಕೂಡಲೇ ಅಮೋಘ ಸಾಧನೆ ಮಾಡಿದ ವಿಜ್ಞಾನಿಗಳ ದರ್ಶನಕ್ಕೆ ಮತ್ತು ಅವರನ್ನು ವಂದಿಸುವುದಕ್ಕೆ ಮನಸ್ಸು ಇನ್ನಿಲ್ಲದಂತೆ ಹಾತೊರೆಯುತಿತ್ತು ಎಂದು ಪ್ರಧಾನಿ ಮೋದಿ ಭಾವುಕರಾಗಿ ಗದ್ಗದಿತ ಧ್ವನಿಯಲ್ಲಿ ಹೇಳಿದರು.

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಇಂದು ಪೀಣ್ಯದ ಇಸ್ರೋ ಐಎಸ್​ಟಿಅರ್​ಎಸಿ ನಲ್ಲಿ (ISRO Telemetry Tracking and Command Network) ವಿಜ್ಞಾನಿಗಳನ್ನು ಅಭಿನಂದಿಸಿ ಅವರೊಂದಿಗೆ ಮಾತಾಡುವಾಗ ಬೆಳಗಿನ ಜಾವವೇ ಅವರೆಲ್ಲ ಕೇಂದ್ರಕ್ಕೆ ಬರುವ ಅನಿವಾರ್ಯತೆ ಸೃಷ್ಟಿಯಾಗಿದ್ದಕ್ಕೆ ವಿಷಾದ (regret) ವ್ಯಕ್ತಪಡಿಸಿದರು. ಇಸ್ರೋ ವಿಜ್ಞಾನಿಗಳನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಭೇಟಿ ಮಾಡುವ ತಳಮಳವನ್ನು ಅದುಮಿಡಲಾಗದೆ, ಬೆಳಗ್ಗೆಯೇ ಅಲ್ಲಿಗೆ ಅಗಮಿಸಿ ಅವರಿಗೆ ತೊಂದರೆ ಕೊಟ್ಟು ಅನ್ಯಾಯ ಮಾಡಿರುವುದಾಗಿ ಪ್ರಧಾನಿ ಹೇಳಿದರು. ಚಂದ್ರಯಾನ-3 ವಿಕ್ರಮ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವಾಗ, ತಾವು ದಕ್ಷಿಣ ಆಫ್ರಿಕಾ ಮತ್ತು ನಂತರ ಗ್ರೀಸ್ ನಲ್ಲಿದ್ದರೂ ತಮ್ಮ ಮನಸ್ಸು ಮಾತ್ರ ಇಸ್ರೋ ವಿಜ್ಞಾನಿಗಳೊಂದಿಗಿತ್ತು, ಹಾಗಾಗಿ ಭಾರತಕ್ಕೆ ಬಂದ ಕೂಡಲೇ ಅಮೋಘ ಸಾಧನೆ ಮಾಡಿದ ವಿಜ್ಞಾನಿಗಳ ದರ್ಶನಕ್ಕೆ ಮತ್ತು ಅವರನ್ನು ವಂದಿಸುವುದಕ್ಕೆ ಮನಸ್ಸು ಇನ್ನಿಲ್ಲದಂತೆ ಹಾತೊರೆಯುತಿತ್ತು ಎಂದು ಪ್ರಧಾನಿ ಮೋದಿ ಭಾವುಕರಾಗಿ ಗದ್ಗದಿತ ಧ್ವನಿಯಲ್ಲಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 26, 2023 10:43 AM