ಮಾಜಿ ಸಿಎಂ ಕುಮಾರಸ್ವಾಮಿಗೆ ಕುಟುಕಿದ ಶಿವಲಿಂಗೇಗೌಡ್ರು, ಇಡೀ ಸದನದಲ್ಲಿ ನಗುವೇ ನಗು!

|

Updated on: Jul 05, 2023 | 6:21 PM

ನಾವು ನಿಮ್ಮನ್ನು ಎರಡು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿಲ್ವಾ? ನಾವು ನಿಮ್ಮನ್ನು ಕುಮಾರಣ್ಣ ಅನ್ನಲ್ವಾ ಎಂದ ಕೆ.ಎಂ.ಶಿವಲಿಂಗೇಗೌಡರು ವಿಶ್ವಾಸ ಇದ್ದಾಗ ಇದ್ದೆವು, ವಿಶ್ವಾಸ ಇಲ್ಲದಿದ್ದಾಗ ಹೊರಬಂದಿದ್ದೇವೆ. ನಾವೇನು‌ ನಿಮ್ಮನ್ನು ಹೆಸರು ಹೇಳಿ ಕರೆಯುತ್ತೀವಾ? ಎಂದು ದಬಾಯಿಸತೊಡಗಿದರು.

ಇಂದಿನ ವಿಧಾನಸಭೆ ಕಲಾಪದ (Assembly Session) ವೇಳೆ ರಾಜ್ಯಪಾಲರ ಭಾಷಣ ಮೇಲಿನ ವಂದನಾ ನಿರ್ಣಯ ಕುರಿತು ಚರ್ಚೆ ನಡೆಯಿತು. ನಿಯಮ 69ರಡಿ ಕೊಬ್ಬರಿಗೆ ಬೆಂಬಲ ಬೆಲೆ ನೀಡುವ ಕುರಿತು ಚರ್ಚೆ ಆರಂಭವಾಯಿತು. ವಿಧಾನಸಭೆಯಲ್ಲಿ ಚರ್ಚೆ ಆರಂಭಿಸಿದ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಅವರು ಹಾಸನ ಜಿಲ್ಲೆಯ ಶಾಸಕರೊಬ್ಬರು ಎಂದರು. ಆಗ ಧಿಡಿಗ್ಗನೇ ಎದ್ದು ನಿಂತ ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್​ ಶಾಸಕ ಕೆ.ಎಂ. ಶಿವಲಿಂಗೇಗೌಡ (Arsikere Congress MLA Shivalinge gowda) ಅವರು ನಾನು ಹೆಸರು ಇಟ್ಟುಕೊಂಡೇ ಬಂದಿದ್ದೇನೆ, ಕಸುವು ಇಲ್ಲದೇ ಬಂದಿಲ್ಲ. ಅದ್ಯಾಕೆ ಹಾಸನ ಜಿಲ್ಲೆಯ ಶಾಸಕರು ಅಂತೀರಾ, ನನ್ನ ಹೆಸರು ಹೇಳಿ. ನಿಮಗೆ 10 ಲಕ್ಷ ಜನ ಇದ್ದರೆ ನನಗೆ ಎರಡು ಲಕ್ಷ ಜನ ಇದ್ದಾರೆ. 5 ಸಾವಿರ ಜನರು ನನ್ನ ಬಳಿ ಸೆಲ್ಫಿ ತಗೊಂಡಿದ್ದಾರೆ ಎಂದು ಶಿವಲಿಂಗೇಗೌಡ ಗುಡುಗಿದರು.

ನಾವು ನಿಮ್ಮನ್ನು ಎರಡು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿಲ್ವಾ? ನಾವು ನಿಮ್ಮನ್ನು ಕುಮಾರಣ್ಣ ಅನ್ನಲ್ವಾ ಎಂದ ಕೆ.ಎಂ.ಶಿವಲಿಂಗೇಗೌಡರು ವಿಶ್ವಾಸ ಇದ್ದಾಗ ಇದ್ದೆವು, ವಿಶ್ವಾಸ ಇಲ್ಲದಿದ್ದಾಗ ಹೊರಬಂದಿದ್ದೇವೆ. ನಾವೇನು‌ ನಿಮ್ಮನ್ನು ಹೆಸರು ಹೇಳಿ ಕರೆಯುತ್ತೀವಾ? ಎಂದು ದಬಾಯಿಸತೊಡಗಿದರು. ಅದಕ್ಕೆ ತಣ್ಣಗಾದ ಹೆಚ್​ಡಿಕೆ, ಆಯ್ತು ಆಯ್ತು ಸ್ವಲ್ಪ ಕೇಳಿ ಶಿವಲಿಂಗೇಗೌಡರೇ ಎಂದು ಸಮಾಧಾನದ ದನಿಯಲ್ಲಿ ಹೇಳಿದರು. ಬಳಿಕ ಅರಸೀಕೆರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಸುಮ್ಮನಾದರು.