ಮುಖ್ಯಮಂತ್ರಿಗಳು ಅನಾವರಣಗೊಳಿಸಿದ ಪುನೀತ್ 3ಡಿ ಪುತ್ಥಳಿ ಬೇರೆಯವುಗಳಿಗಿಂತ ಭಿನ್ನವಾಗಿದೆ ಎಂದರು ಕಲಾವಿದ ಮೋಹನ್
ಪುತ್ಥಳಿಯ ನಮೂನೆ ತಯಾರಿಸಿದ ಮೇಲೆ ಕಂಪ್ಯೂಟರೈಸ್ಡ್ ಆರ್ಟ್ ಕ್ಯಾಮ್ನಲ್ಲಿ ಇಂದು ಅನಾವರಣ ಮಾಡಿದ ಪುನೀತ್ ಅವರ ಪುತ್ಥಳಿಯನ್ನು ತಯಾರು ಮಾಡಲಾಯಿತು ಎಂದು ಕಲಾವಿದ ಮೋಹನ್ ಹೇಳಿದರು.
ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಪುನೀತ್ ನಮನ ಕಾರ್ಯಕ್ರಮ ಮಂಗಳವಾರದಂದು ಬೆಂಗಳೂರಿನಲ್ಲಿ ನೆರವೇರಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುನೀತ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಿದರು. ಈ ಪುತ್ಥಳಿ ಎಲ್ಲ ಪುತ್ಥಳಿಗಳಂತಿರದೆ ಭಿನ್ನವಾಗಿದೆ. ಇದನ್ನು ತಯಾರಿಸಿದ ಕಲಾವಿದ ಬಿಕೆ ಮೋಹನ್ ಅವರ ಜೊತೆ ಟಿವಿ9 ಸಿನಿಮಾ ವರದಿಗಾರ ಮಾಲ್ತೇಶ್ ಜಗ್ಗಿನ್ ಅವರು ಮಾತಾಡಿದರು. ಪುತ್ಥಳಿಯನ್ನು ಪ್ಲಾಸ್ಟರ್ ಅಫ್ ಪ್ಯಾರಿಸ್, ಎಸ್ ಆರ್ ಬಿ ಅಥವಾ ಫೈಬರರ್ಗಳನ್ನು ಬಳಸದೆ ತಯಾರಿಸಲಾಗಿದೆ ಅಂತ ಮೋಹನ್ ಅವರು ಹೇಳಿದರು. ಪುತ್ಥಳಿ ತಯಾರಿಸಲು ಮೋಹನ್ ಅವರ ತಂಡ ಅಪ್ಪು ಅವರು ಮುಗಳ್ನಗುತ್ತಿರುವ ಫೋಟೋವೊಂದನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಕಂಪ್ಯೂಟರ್ ನಲ್ಲಿ ಎಂಬೋಸ್ ಮಾಡಿದರಂತೆ.
ಫೋಟೋವನ್ನು 3ಡಿ ಲೇಯರ್ ಗಳಲ್ಲಿ ಪರಿವರ್ತಿಸಿದ ಬಳಿಕ ಅದನ್ನು ಸಿಎನ್ಸಿ ರೋಟರ್ ನಲ್ಲಿ 23 ಗಂಟೆಗಳ ಕಾಲ ಹಾಕಲಾಗಿತ್ತು. ಅದಾದ ಮೇಲೆ ಅದನ್ನು ಪ್ರೊಸೆಸಿಂಗ್ ಮಾಡಿ ಪುತ್ಥಳಿಯ ಒಂದು ನಮೂನೆ ತಯಾರಿಸಲಾಯಿತು. ಇದು ಸಾಮಾನ್ಯ ಪುತ್ಥಳಿಗಿಂತ ಬಹಳ ಭಿನ್ನವಾಗಿದೆ ಎಂದು ಮೋಹನ್ ಹೇಳುತ್ತಾರೆ.
ಪುತ್ಥಳಿಯ ನಮೂನೆ ತಯಾರಿಸಿದ ಮೇಲೆ ಕಂಪ್ಯೂಟರೈಸ್ಡ್ ಆರ್ಟ್ ಕ್ಯಾಮ್ನಲ್ಲಿ ಇಂದು ಅನಾವರಣ ಮಾಡಿದ ಪುನೀತ್ ಅವರ ಪುತ್ಥಳಿಯನ್ನು ತಯಾರು ಮಾಡಲಾಯಿತು ಎಂದು ಕಲಾವಿದ ಮೋಹನ್ ಹೇಳಿದರು. ಈ ಫುತ್ಥಳಿ 50 ಎಮ್ ಎಮ್ ಎಂಬೋಸ್ಡ್ ಅಂತ ಅವರು ಹೇಳುತ್ತಾರೆ.
ಪುತ್ಥಳಿಯು ಌಂಟಿಕ್ ಗೋಲ್ಡ್ ಬಣ್ಣದಲ್ಲಿದೆ ಮತ್ತು ಅದರ ಇತರ ಫೀಚರ್ ಗಳನ್ನು ಗಮನಿಸಿದ್ದೇಯಾದರೆ, ಅದರ ಎತ್ತರ ನಾಲ್ಕು ಅಡಿ ಮತ್ತು ತೂಕ 35-40 ಕೆಜಿ ಇದೆಯಂತೆ.