ಕಾನ್ಸ್​​ಟೇಬಲ್​ ಹುದ್ದೆ ಆಕಾಂಕ್ಷಿಗಳಿಂದ ಅರುಣ್ ಸಿಂಗ್ ಕಾರಿಗೆ ಮುತ್ತಿಗೆ

TV9 Web
| Updated By: ವಿವೇಕ ಬಿರಾದಾರ

Updated on: Oct 15, 2022 | 10:58 PM

ಅರಣು ಸಿಂಗ್ ಹಾವೇರಿಯ ಪ್ರವಾಸಿ ಮಂದಿರ ಪ್ರವೇಶಿಸುತ್ತಿದ್ದಂತೆ, ಕಾನ್ಸ್​​ಟೇಬಲ್​ ಹುದ್ದೆ ಆಕಾಂಕ್ಷಿಗಳು ಅರಣುಸಿಂಗ್ ಕಾರಿಗೆ ಮುತ್ತಿಗೆ ಹಾಕಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್​ ರಾಜ್ಯ ಪ್ರವಾಸದಲ್ಲಿದ್ದು, ಇಂದು ಹಾವೇರಿ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಅರಣು ಸಿಂಗ್ ಹಾವೇರಿಯ ಪ್ರವಾಸಿ ಮಂದಿರವನ್ನು ಪ್ರವೇಶಿಸುತ್ತಿದ್ದಂತೆ, ಕಾನ್ಸ್​​ಟೇಬಲ್​ ಹುದ್ದೆ ಆಕಾಂಕ್ಷಿಗಳು ಅವರ ಕಾರಿಗೆ ಮುತ್ತಿಗೆ ಹಾಕಿದ್ದಾರೆ. ಪೊಲೀಸ್ ಕಾನ್ಸ್​​ಟೇಬಲ್​ ಹುದ್ದೆಗಳ ವಯೋಮಿತಿ ಹೆಚ್ಚಿಸುವಂತೆ ಆಕಾಂಕ್ಷಿಗಳು ಒತ್ತಾಯ ಮಾಡಿದ್ದಾರೆ. ಆಗ ಅರುಣ್ ಸಿಂಗ್​​​ ಕಾರಿನಿಂದ ಇಳಿದು ಮನವಿ ಪತ್ರ ಸ್ವೀಕರಿಸಿದರು. ಈ ವಿಚಾರ ಸಿಎಂ ಬೊಮ್ಮಾಯಿ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.