ಕರ್ನಾಟಕದಿಂದ ಬಂದಿರುವ ಬಾಲರಾಮನ ಮೂರ್ತಿಯಲ್ಲಿ ಜೀವಕಳೆ ಸೂಸುತ್ತಿದೆ: ನಿರ್ಮಾಲಾನಂದನಾಥ ಶ್ರೀ

|

Updated on: Jan 22, 2024 | 7:27 PM

ರಾಮಲಲ್ಲಾನ ವಿಗ್ರಹ ಕೆತ್ತಿರುವ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ ನಿರ್ಮಾಲಾನಂದನಾಥ ಶ್ರೀಗಳು ಅವರೊಬ್ಬ ಆಸಾಧಾರಣ ಪ್ರತಿಭೆಯ ಶಿಲ್ಪಿ ಎಂದು ಹೇಳಿದರು.

ಅಯೋಧ್ಯೆ: ರಾಮಮಂದಿರದ ಪ್ರಾಣಪ್ರತಿಷ್ಠೆ ಕಾರ್ಯಕ್ರಮ (Ram temple consecration ceremony) ನೆರವೇರಿದ ಬಳಿಕ ಆದಿ ಚುಂಚನಗಿರಿ ಶಾಖಾಮಠದ ನಿರ್ಮಲಾನಂದನಾಥ ಶ್ರೀಗಳು (Nirmalanandanatha Sri) ಅವರು ಟಿವಿ9 ಕನ್ನಡ ವಾಹಿನಿಯ ವರದಿಗಾರನೊಂದಿಗೆ ಮಾತಾಡಿದರು. ರವಿವಾರವೂ ಟಿವಿ9 ವಾಹಿನಿಯೊಂದಿಗೆ ಮಾತಾಡಿದ್ದ ಅವರು ರಾಮಮಂದಿರ ಸುತ್ತಮುತ್ತಲಿನ ಪ್ರದೇಶವನ್ನು ನೋಡಿರಲಲಿಲ್ಲವಾದ್ದರಿಂದ ಅದರ ಬಗ್ಗೆ ಹೆಚ್ಚು ಹೇಳಿಲಿಲ್ಲ. ಇವತ್ತು ಮಾತಾಡುವಾಗ ಅವರು ನಿನ್ನೆ ಹೇಳಿದನ್ನು ಜ್ಞಾಪಿಸಿಕೊಂಡರು. ಆದರೆ ಇವತ್ತು ಉದ್ಘಾಟನೆ ಸಮಯದಲ್ಲಿ ಮಂದಿರ ಮತ್ತು ಸುತ್ತಮುತ್ತಲಿನ ಪರಿಸರ ವೀಕ್ಷಿಸಿದ್ದ ಅವರು, ತಾವು ಹಿಂದೆಯೂ ಹಲವು ಸಲ ಇಲ್ಲಿಗೆ ಬಂದಿದ್ದು ಆಗಿನ ಮತ್ತು ಈಗಿನ ಮಂದಿರದ ನಡುವೆ ಅಗಾಧವಾದ ವ್ಯತ್ಯಾಸವಿದೆ. ದೇವಸ್ಥಾನವನ್ನು ಅದ್ಭುತವಾಗಿ ನಿರ್ಮಾಣ ಮಾಡಲಾಗಿದೆ ಎಂದ ಶ್ರೀಗಳು ಕರ್ನಾಟಕದಿಂದ ಬಂದಿರುವ ಬಾಲರಾಮನ ಮೂರ್ತಿಯಲ್ಲಿ ಜೀವಕಳೆ ಸೂಸುತ್ತಿದೆ ಎಂದು ಹೇಳಿದರು. ರಾಮಲಲ್ಲಾನ ವಿಗ್ರಹ ಕೆತ್ತಿರುವ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ ನಿರ್ಮಾಲಾನಂದನಾಥ ಶ್ರೀಗಳು ಅವರೊಬ್ಬ ಆಸಾಧಾರಣ ಪ್ರತಿಭೆಯ ಶಿಲ್ಪಿ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Jan 22, 2024 07:13 PM