ಇದಿನ್ನು ಖಚಿತ-ಬಳ್ಳಾರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಜಿ ಸೋಮಶೇಖರ್ ರೆಡ್ಡಿ ಸ್ಪರ್ಧಿಸಿದರೂ ಕೆಆರ್ಪಿಪಿ ಅಭ್ಯರ್ಥಿ ಅರುಣ ಲಕ್ಷ್ಮಿ!
ಕೆಆರ್ ಪಿಪಿ ಪಕ್ಷದ ಅಭ್ಯರ್ಥಿಗಳು ಯಾವ ಕ್ಷೇತ್ರದಿಂದ ಗೆಲ್ಲಬಹುದೆಂದು ತಮಗೆ ಅನಿಸುತ್ತೋ ಅಲ್ಲಿ ಬೇರೆ ಪಕ್ಷಗಳ ಯಾವುದೇ ಅಭ್ಯರ್ಥಿ ಸ್ಪರ್ಧಿಸಿದ್ದರೂ ತಮ್ಮ ಆಭ್ಯರ್ಥಿ ಹಾಕುವುದು ಖಚಿತ ಎಂದು ರೆಡ್ಡಿ ಹೇಳಿದರು.
ಕೊಪ್ಪಳ: ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ತಮ್ಮ ಪತ್ನಿ ಅರುಣ ಲಕ್ಷ್ಮಿ (Aruna Lakshmi) ಸ್ಪರ್ಧಿಸಲಿದ್ದಾರೆ ಅನ್ನೋದನ್ನು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ ಗಾಲಿ ಜನಾರ್ಧನ ರೆಡ್ಡಿ (Gali Janardhan Reddy) ಸ್ಪಷ್ಟಪಡಿಸಿದ್ದಾರೆ. ಕೊಪ್ಪಳದಲ್ಲಿ ತಮ್ಮ ಕಲ್ಯಾಣ ಯಾತ್ರೆ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತಾಡಿದ ರೆಡ್ಡ್ಡಿಯವರು, ಬಳ್ಳಾರಿಯಲ್ಲಿ ಬೇರೆ ಪಕ್ಷಗಳ ಅಭ್ಯರ್ಥಿಗಳು ಯಾರಾಗಿರುತ್ತಾರೆ ಅನ್ನುವುದರ ಬಗ್ಗೆ ತಾವು ಮಾತಾಡುವುದಿಲ್ಲ, ಅದು ತಮ್ಮ ಕೆಲಸವಲ್ಲ ಎಂದು ಅವರು ಹೇಳಿದರು. ಕೆಆರ್ ಪಿಪಿ ಪಕ್ಷದ ಅಭ್ಯರ್ಥಿಗಳು ಯಾವ ಕ್ಷೇತ್ರದಿಂದ ಗೆಲ್ಲಬಹುದೆಂದು ತಮಗೆ ಅನಿಸುತ್ತೋ ಅಲ್ಲಿ ಬೇರೆ ಪಕ್ಷಗಳ ಯಾವುದೇ ಅಭ್ಯರ್ಥಿ ಸ್ಪರ್ಧಿಸಿದ್ದರೂ ತಮ್ಮ ಅಭ್ಯರ್ಥಿ ಹಾಕುವುದು ಖಚಿತ ಎಂದು ರೆಡ್ಡಿ ಹೇಳಿದರು. ಅದರರ್ಥ ಬಳ್ಳಾರಿಯಲ್ಲಿ ಬಿಜೆಪಿ ಜಿ ಸೋಮಶೇಖರ್ ರೆಡ್ಡಿ (G Somashekhar Reddy) ಅವರನ್ನು ಕಣಕ್ಕಿಳಿಸಿದರೂ ಕೆಆರ್ ಪಿಪಿಯಿಂದ ಅರುಣ ಲಕ್ಷ್ಮಿಯವರೇ ಅಭ್ಯರ್ಥಿ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ