ಕಾಂಗ್ರೆಸ್ ಪಕ್ಷದ ಚಿಹ್ನೆ ಕೈಯಲ್ಲಿ ಗೆರೆಗಳು ಹೆಚ್ಚಿದರೆ ಬಿಜೆಪಿ ಚಿಹ್ನೆ ಕಮಲದ ಹೂವಿನ ಬಣ್ಣ ಕೇಸರಿಯಿಂದ ಕಡುಗುಲಾಬಿ ಬಣ್ಣಕ್ಕೆ ತಿರುಗಿತು!
ಬಿಜೆಪಿಯ ಬ್ಯಾನರ್ ಮತ್ತು ಫ್ಲೆಕ್ಸ್ ಗಳಲ್ಲಿ ಪಕ್ಷದ ಚಿಹ್ನೆ ಕಮಲದ ಹೂವಿನ (lotus) ಬಣ್ಣ ಕೇಸರಿಯಿಂದ ಕಡು ಗುಲಾಬಿ ಬಣ್ಣಕ್ಕೆ ತಿರುಗಿದೆ.
ಬೆಂಗಳೂರು: ಸಾಮಾನ್ಯ ಜನರಿಗೆ ಇಂಥ ನಂಬಿಕೆಗಳು ಇರುತ್ತವೋ ಇಲ್ಲವೋ ಗೊತ್ತಿಲ್ಲ ಮಾರಾಯ್ರೇ. ಆದರೆ ನಮ್ಮ ಮೇಲೆ ದೊರೆತನ ನಡೆಸುವ ರಾಜಕಾರಣಿಗಳಿಗೆ (politicos) ನಿಶ್ಚಿತವಾಗಿಯೂ ಇರುತ್ತವೆ. ಮೊದಲು ಕಾಂಗ್ರೆಸ್ (Congress) ತನ್ನ ಪಕ್ಷದ ಕೈ ಚಿಹ್ನೆಯಲ್ಲಿದ್ದ ಗೆರೆಗಳ ಸಂಖ್ಯೆಯನ್ನು ಹೆಚ್ಚಿಸಿತು. ಈಗ ಬಿಜೆಪಿಯ ಸರದಿ. ಈ ವಿಡಿಯೋ ನೋಡಿ. ಬಿಜೆಪಿಯ ಬ್ಯಾನರ್ ಮತ್ತು ಫ್ಲೆಕ್ಸ್ ಗಳಲ್ಲಿ ಪಕ್ಷದ ಚಿಹ್ನೆ ಕಮಲದ ಹೂವಿನ (lotus) ಬಣ್ಣ ಕೇಸರಿಯಿಂದ ಕಡು ಗುಲಾಬಿ ಬಣ್ಣಕ್ಕೆ ತಿರುಗಿದೆ. ಇದು ಬೆಂಗಳೂರಿನ ದಾಸನಪುರ ಹೋಬಳಿಯ ಬಿಜೆಪಿ ಕಚೇರಿಯಲ್ಲಿ ಕಂಡುಬಂದ ದೃಶ್ಯ. ಚಿಹ್ನೆಗಳಲ್ಲಿ ಬದಲಾವಣೆ ಮಾಡಿದರೆ ಅದೃಷ್ಟವೂ ಬದಲಾಗುತ್ತದೆ ಅಂತ ನಾಯಕರು ಭಾವಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 08, 2023 01:10 PM