ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಚುನಾವಣಾ ಸಮಯದಲ್ಲಿ ವೈಯಕ್ತಿಕ ಮತ್ತು ಜಾತಿ-ಧರ್ಮಗಳ ಬಗ್ಗೆ ಮಾತಾಡಬಾರದು: ಜಗದೀಶ್ ಶೆಟ್ಟರ್
ಚುನಾವಣಾ ಸಮಯದಲ್ಲಿ ಹೀಗೆ ವೈಯಕ್ತಿಕವಾಗಿ ಟೀಕೆ ಮಾಡುವುದು. ಜಾತಿ-ಧರ್ಮಗಳ ಕುರಿತು ಮಾತಾಡುವುದು ಸರಿಯಲ್ಲ, ಅದರ ಅವಶ್ಯಕತೆಯೂ ಇಲ್ಲ ಎಂದು ಶೆಟ್ಟರ್ ಹೇಳಿದರು.
ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಅವರು ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರಿಗೆ ಹುಬ್ಬಳ್ಳಿಯಲ್ಲಿಂದು ಸಲಹೆಯೊಂದನ್ನು ನೀಡಿದರು. ಪ್ರಲ್ಹಾದ್ ಜೋಶಿ-ಬ್ರಾಹ್ಮಣತ್ವ (Pralhad Joshi-Brahmanism) ಬಗ್ಗೆ ಕುಮಾರಸ್ವಾಮಿ ಕಾಮೆಂಟ್ ಮಾಡಿರುವ ಬಗ್ಗೆ ಹುಬ್ಬಳ್ಳಿಯ ಟಿವಿ9 ವರದಿಗಾರ ಪ್ರಶ್ನಿಸಿದಾಗ ಶೆಟ್ಟರ್, ಕುಮಾರಸ್ವಾಮಿ ರಾಜಕೀಯದಲ್ಲಿ ಅಪಾರ ಅನುಭವ ಇರುವಂಥವರು ಮತ್ತು ಎರಡು ಸಲ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಆದರೆ ಚುನಾವಣಾ ಸಮಯದಲ್ಲಿ ಹೀಗೆ ವೈಯಕ್ತಿಕವಾಗಿ ಟೀಕೆ ಮಾಡುವುದು. ಜಾತಿ-ಧರ್ಮಗಳ ಕುರಿತು ಮಾತಾಡುವುದು ಸರಿಯಲ್ಲ, ಅದರ ಅವಶ್ಯಕತೆಯೂ ಇಲ್ಲ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 08, 2023 12:28 PM
Latest Videos