ನಾಲ್ಕನೇ ಅಲೆ ಭೀತಿ, ಬೂಸ್ಟರ್ ಡೋಸ್​ಗಾಗಿ ತುಮಕೂರು ಜಿಲ್ಲಾಸ್ಪತ್ರೆ ಮುಂದೆ ಹಿರಿಯ ನಾಗರಿಕರ ದಂಡು

ಬೇರೆ ದೇಶಗಳಲ್ಲಿ ಮೂರನೇ ಅಲೆ ತಲೆದೋರಿದಾಗ ಬಹಳ ಜನ ಬಲಿಯಾದರು. ಆದರೆ ನಮ್ಮ ದೇಶದಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿತ್ತು. ಇದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಹ ಬುಧವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಹೇಳಿದರು.

TV9kannada Web Team

| Edited By: Arun Belly

Apr 27, 2022 | 10:29 PM

Tumakuru: ಕೊರೊನಾ ನಾಲ್ಕನೇ ಅಲೆ (4th wave) ಭೀತಿ ಶುರುವಾಗಿರದಿದ್ದರೆ ಇಲ್ಲಿ ಕಾಣುತ್ತಿರುವ ಹಿರಿಯ ನಾಗರಿಕರೆಲ್ಲ ಮನೆಗಳಲ್ಲಿ ಟಿವಿ ನೋಡುತ್ತಲೋ ಇಲ್ಲವೇ ಮೊಮ್ಮಕ್ಕಳೊಂದಿಗೆ ಆಟವಾಡಿಕೊಂಡು ಇದ್ದುಬಿಡುತ್ತಿದ್ದರು. ಮೂರನೇ ಅಲೆ ಹೆಚ್ಚು ತೊಂದರೆ ಮಾಡಲಿಲ್ಲ ಅನ್ನೋದು ನಿಜ ಆದರೆ ನಾಲ್ಕನೇ ಅಲೆ ಹಾಗೆ ಹೆದರಿಸಿ ಮಾಯವಾಗಲಿದೆ ಅಂತ ಅಂದುಕೊಳ್ಳುವುದು ತಪ್ಪು. ಯಾಕೆಂದರೆ, ನಾವು ಚಾಪೆ ಕೆಳಗೆ ತೂರಿದರೆ ಕೊರೊನಾ ರೂಪಾಂತರಿ ವೈರಸ್ಗಳು (mutant virus) ರಂಗೋಲಿ ಕೆಳಗೆ ತೂರೋದಲ್ಲ ಅಲ್ಲೇ ಮನೆ ಮಾಡಿಕೊಂಡು ವಾಸಮಾಡಲಾರಂಭಿಸುತ್ತವೆ. ಹಾಗಾಗಿ ನಮ್ಮ ಎಚ್ಚರದಲ್ಲಿ ನಾವಿರಬೇಕು ಅಂತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೇಳುತ್ತಿವೆ. ಹಾಗಾಗೇ ತುಮಕೂರಿನಲ್ಲಿ ಎರಡೆರಡು ಡೋಸ್ ಲಸಿಕೆ ತೆಗೆದುಕೊಂಡವರೆಲ್ಲ ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಜಿಲ್ಲಾ ಆಸ್ಪತ್ರೆ (district hospital) ಮುಂದೆ ಸಾಲುಗಟ್ಟಿದ್ದರು.

ಮೂರನೇ ಅಲೆ ನಮ್ಮನ್ನು ಹೆಚ್ಚು ಕಾಡದಿರುವುದಕ್ಕೆ ಹೆಚ್ಚು ಕಡಿಮೆ ಎಲ್ಲ ಭಾರತೀಯರು ಲಸಿಕೆ ಹಾಕಿಸಿಕೊಂಡಿರುವುದೇ ಕಾರಣ ಎಂದು ಹೇಳಲಾಗುತ್ತಿದೆ. ಬೇರೆ ದೇಶಗಳಲ್ಲಿ ಎರಡನೇ ಅಲೆ ಇಳಿಮುಖಗೊಂಡ ಬಳಿಕ ಜನ ಯಾಮಾರಿದರು ಮತ್ತು ಲಸಿಕೆ ತೆಗೆದುಕೊಳ್ಳುವುದನ್ನು ಉದಾಸೀನ ಮಾಡಿದರು. ಹಾಗಾಗೇ ಆ ದೇಶಗಳಲ್ಲಿ ಮೂರನೇ ಅಲೆ ತಲೆದೋರಿದಾಗ ಬಹಳ ಜನ ಬಲಿಯಾದರು. ಆದರೆ ನಮ್ಮ ದೇಶದಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿತ್ತು. ಇದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಹ ಬುಧವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಹೇಳಿದರು.

60ಕ್ಕಿಂತ ಹೆಚ್ಚು ವಯಸ್ಸಿನ ಹಿರಿಯ ನಾಗರಿಕರು ಮಧುಮೇಹ, ರಕ್ತದೊತ್ತಡ ಮೊದಲಾದ ಇತರ ಕಾಯಿಲೆಗಳೊಂದಿಗೆ ನರಳುತ್ತಿದ್ದರೆ ಅವರಿಗೆ ಬೂಸ್ಟರ್ ಡೋಸ್ ಅತ್ಯವಶ್ಯಕವಾಗಿದೆ. ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲೂ ಆದ್ಯತೆಯ ಮೇಲೆ ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದೆ.

ಇದನ್ನೂ ಓದಿ:  Thawar Chand Gehlot: ಬೂಸ್ಟರ್ ಡೋಸ್ ಪಡೆದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್; ಸಚಿವ ಸುಧಾಕರ್ ಉಪಸ್ಥಿತಿ

Follow us on

Click on your DTH Provider to Add TV9 Kannada