ಚುನಾವಣಾ ವರ್ಷ ಆರಂಭಗೊಳ್ಳುತ್ತಿದ್ದಂತೆಯೇ ಎಲ್ಲ ಪಕ್ಷಗಳ ನಾಯಕರು ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸಿದ್ದಾರೆ!
ಪಕ್ಷ ಯಾವುದಾದರು ಆಗಿರಲಿ ಅಭಿವೃದ್ಧಿ ಕಾಮಗಾರಿಗಳು ಚುನಾವಣಾ ವರ್ಷದಲ್ಲೇ ಜಾಸ್ತಿ ನಡೆಯುತ್ತವೆ! ಮುಂದಿನ ವರ್ಷ ಚುನಾವಣೆ ಮುಗಿದು ಬಹುಮತ ಪಡೆಯುವ ಪಕ್ಷ ಸರ್ಕಾರ ರಚಿಸಿದ ಬಳಿಕ ಆ ಮೊದಲ ವರ್ಷದಲ್ಲಿ ಕೆಲಸಗಳು ನಡೆಯುತ್ತವೆ, ಇಲ್ಲವೆಂದೇನಿಲ್ಲ.
ಬೆಂಗಳೂರು: ಕರ್ನಾಟಕ ವಿಧಾನ ಸಭೆ ಚುನಾವಣೆಗೆ (Assembly Polls) ಇನ್ನೂ ಒಂದು ವರ್ಷವಿರುವಾಗಲೇ ರಾಜಕೀಯ ಪಕ್ಷಗಳು (political parties) ಮತದಾರನ್ನು ಓಲೈಸುವ ಸರ್ಕಸ್ ಶುರುವಿಟ್ಟುಕೊಂಡಿವೆ. ಕಳೆದ ನಾಲ್ಕು ವರ್ಷಗಳಿಂದ ಕೋವಿಡ್ ಸೇರಿದಂತೆ ನಾನಾ ಕಾರಣಗಳಿಗೆ ಸ್ಥಗಿತಗೊಂಡಿದ್ದ ಅಥವಾ ಆರಂಭವೇಗೊಂಡಿರದ ಅಭಿವೃದ್ಧಿ ಕಾಮಗಾರಿಗಳು (developmental works) ಚುನಾವಣಾ ವರ್ಷದಲ್ಲಿ ಆರಂಭಗೊಳ್ಳುತ್ತಿರುವುದು ಆಶ್ಚರ್ಯವನ್ನೇನೂ ಹುಟ್ಟಿಸುವುದಿಲ್ಲ. ಈ ವಿಡಿಯೋನಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಬೆಂಗಳೂರು ನಗರ ಪುಲಿಕೇಶಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಮುಸ್ಲಿಂ ಸಮುದಾಯದ ಜನರಿಗೆ ಆಹಾರ ಸಾಮಗ್ರಿಗಳನ್ನೊಳಗೊಂಡ ಕಿಟ್ ವಿತರಿಸುತ್ತಿರುವುದು ನಿಮಗೆ ಕಾಣುತ್ತದೆ. ಮುಸ್ಲಿಮರ ಪವಿತ್ರ ರಂಜಾನ್ ಹಬ್ಬ ಕೇವಲ ಒಂದು ವಾರ ದೂರ ಇರುವುದರಿಂದ ಈ ಕಿಟ್ ಗಳು ಬಡಜನರಿಗೆ ಬಹಳ ನೆರವಾಗಲಿವೆ.
ಹಾಗೆ ನೋಡಿದರೆ, ಮುಸ್ಲಿಮೇತರ ಕುಟುಂಬಗಳು ಸಹ ಕಿಟ್ ಗಳನ್ನು ಪಡೆಯುತ್ತಿರುವುದು ವಿಡಿಯೋನಲ್ಲಿ ಕಾಣುತ್ತದೆ. ಬಡವರು ಯಾವ ಸಮುದಾಯವದರಾದರೇನು ಬಡವರೇ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಪುಲಿಕೇಶಿನಗರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಸಹ ಸಿದ್ದರಾಮಯ್ಯ ಹಾಗೂ ಶ್ರೀನಿವಾಸಮೂರ್ತಿ ಬುಧವಾರ ಉದ್ಘಾಟಿಸಿದರು.
ಅದನ್ನೇ ನಾವು ಹೇಳಿದ್ದು, ಪಕ್ಷ ಯಾವುದಾದರು ಆಗಿರಲಿ ಅಭಿವೃದ್ಧಿ ಕಾಮಗಾರಿಗಳು ಚುನಾವಣಾ ವರ್ಷದಲ್ಲೇ ಜಾಸ್ತಿ ನಡೆಯುತ್ತವೆ! ಮುಂದಿನ ವರ್ಷ ಚುನಾವಣೆ ಮುಗಿದು ಬಹುಮತ ಪಡೆಯುವ ಪಕ್ಷ ಸರ್ಕಾರ ರಚಿಸಿದ ಬಳಿಕ ಆ ಮೊದಲ ವರ್ಷದಲ್ಲಿ ಕೆಲಸಗಳು ನಡೆಯುತ್ತವೆ, ಇಲ್ಲವೆಂದೇನಿಲ್ಲ. ಸಚಿವರಾಗಿ ಅಧಿಕಾರ ಸ್ವೀಕರಿಸಿದ ಖುಷಿಯಲ್ಲಿ ಕೆಲಸಗಳನ್ನು ಕೈಗೆತ್ತಿಕೊಳ್ಳುತ್ತಾರೆ. ವರ್ಷದ ಬಳಿಕ ಅವು ಸ್ಥಗಿತಗೊಂಡು ಚುನಾವಣಾ ವರ್ಷದಲ್ಲಿ ಪುನರಾರಂಭಗೊಳ್ಳುತ್ತವೆ.
ಇದನ್ನೂ ಓದಿ: ಸಿದ್ದರಾಮಯ್ಯ ಸುಖಾಸುಮ್ಮನೆ ಸರ್ಕಾರವನ್ನು ದೂರುವ ಬದಲು ನ್ಯೂನತೆಗಳಿದ್ದರೆ ಹೇಳಲಿ, ಸರಿಪಡಿಸುತ್ತೇವೆ: ಕೋಟ ಶ್ರೀನಿವಾಸ ಪೂಜಾರಿ