ದರ್ಶನ್​ ಕೇಸ್​ನಲ್ಲಿ ಒತ್ತಡ ಹಾಕ್ತಿರೋ ಆ ಸಚಿವ ಯಾರು? ಸತೀಶ್​ ಜಾರಕಿಹೊಳಿ ಹೇಳಿದ್ದಿಷ್ಟು

|

Updated on: Jun 15, 2024 | 5:01 PM

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಚಿತ್ರನಟ ದರ್ಶನ ಸೇರಿದಂತೆ ಒಟ್ಟು 19 ಜನರ ಬಂಧನವಾಗಿದೆ. ಈ ಕುರಿತು ಬೆಳಗಾವಿಯಲ್ಲಿ  ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ‘ದರ್ಶನ್​ ತನಿಖೆಯ ಮಾಹಿತಿಯನ್ನ ಬೆಂಗಳೂರಿನ ನಾಯಕರನ್ನೇ ಕೇಳಿ ಎಂದರು.

ಬೆಳಗಾವಿ, ಜೂ.15: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಚಿತ್ರನಟ ದರ್ಶನ ಬಂಧನವಾಗಿದೆ. ಈ ಮಧ್ಯೆ ದರ್ಶನ ಹಾಗೂ ಗ್ಯಾಂಗ್ ವಿಚಾರಣೆ ನಡೆಸುತ್ತಿರುವ ಪೊಲೀಸ್ ಠಾಣೆಗೆ ಶಾಮೀಯಾನ ಕಟ್ಟಿದ ವಿಚಾರವಾಗಿ ಬೆಳಗಾವಿಯಲ್ಲಿ  ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ(Satish Jarkiholi), ‘ದರ್ಶನ್​ ತನಿಖೆಯ ಮಾಹಿತಿಯನ್ನ ಬೆಂಗಳೂರಿನ ನಾಯಕರನ್ನೇ ಕೇಳಿ ಎಂದರು.

ನಮಗೆ ಬೆಂಗಳೂರು 500 ಕಿಮೀ ದೂರದಲ್ಲಿದೆ, ಈ ವಿಷಯ ಬೆಂಗಳೂರಿನವರನ್ನೇ ಕೇಳಿ. ಇದೇ ವೇಳೆ ದರ್ಶನ್​ಬಚಾವ್ ಮಾಡಲು ಪ್ರಭಾವಿ ಸಚಿವರ ಒತ್ತಡ ಇದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ‘ನಟರ ಜೊತೆಗೆ ಉತ್ತರ ಕರ್ನಾಟಕದ ರಾಜಕೀಯ ನಾಯಕರಿಗೆ ನಂಟಿಲ್ಲ, ಬೆಂಗಳೂರು- ಮೈಸೂರಿನ ನಾಯಕರಿಗೆ ಈ ಬಗ್ಗೆ ಪ್ರಶ್ನೆ ಮಾಡಿ ಎಂದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on