ಮೇಕೆದಾಟು ಬಗ್ಗೆ ಕೇಂದ್ರ ಜಲಶಕ್ತಿ ಮಂತ್ರಿ ವಿ ಸೋಮಣ್ಣ ಹೇಳಿದ್ದೇನು?

ಮೇಕೆದಾಟು ಬಗ್ಗೆ ಕೇಂದ್ರ ಜಲಶಕ್ತಿ ಮಂತ್ರಿ ವಿ ಸೋಮಣ್ಣ ಹೇಳಿದ್ದೇನು?

ಕಿರಣ್ ಹನುಮಂತ್​ ಮಾದಾರ್
|

Updated on: Jun 15, 2024 | 3:44 PM

ಕನಕಪುರ ತಾಲೂಕಿನ ಶ್ರೀದೇಗುಲ ದೇವಸ್ಥಾನಕ್ಕೆ ಕೇಂದ್ರ ಸಚಿವ ವಿ ಸೋಮಣ್ಣ(V Somanna) ಭೇಟಿ ನೀಡಿದ್ದರು. ಬಳಿಕ ಮೇಕದಾಟು ನೀರು ಹಂಚಿಕೆ ವಿಚಾರ ಕುರಿತು ಮಾತನಾಡಿದ ಅವರು, ‘ ಇದು ಪ್ರಕೃತಿಮಯದ ವಿಚಾರವಾಗಿದ್ದು, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ತಮಿಳುನಾಡು, ಪಾಂಡಿಚೇರಿ ಸರ್ಕಾರ ಕೂತು ಬಗೆಹರಿಸಿಕೊಳ್ಳಬೇಕು. ಕೂತು ಮಾತನಾಡಿದ್ರೆ ಎಂತಹ ಸಮಸ್ಯೆ ಆದರೂ ಬಗೆಹರಿಯುತ್ತದೆ ಎಂದರು.

ರಾಮನಗರ, ಜೂ.15: ಕನಕಪುರ ತಾಲೂಕಿನ ಶ್ರೀದೇಗುಲ ದೇವಸ್ಥಾನಕ್ಕೆ ಕೇಂದ್ರ ಸಚಿವ ವಿ ಸೋಮಣ್ಣ(V Somanna) ಭೇಟಿ ನೀಡಿದ್ದರು. ಬಳಿಕ ಮೇಕದಾಟು ನೀರು ಹಂಚಿಕೆ ವಿಚಾರ ಕುರಿತು ಮಾತನಾಡಿದ ಅವರು, ‘ ಇದು ಪ್ರಕೃತಿಮಯದ ವಿಚಾರವಾಗಿದ್ದು, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ತಮಿಳುನಾಡು, ಪಾಂಡಿಚೇರಿ ಸರ್ಕಾರ ಕೂತು ಬಗೆಹರಿಸಿಕೊಳ್ಳಬೇಕು. ಕೂತು ಮಾತನಾಡಿದ್ರೆ ಎಂತಹ ಸಮಸ್ಯೆ ಆದರೂ ಬಗೆಹರಿಯುತ್ತದೆ. ಕಾನೂನಿನ ಚೌಕಟ್ಟಿನಲ್ಲಿ ಏನ್ ಕೆಲಸ ಆಗಬೇಕೋ ಅದಾಗುತ್ತದೆ ಎಂದು ಹೇಳಿದರು.

ರಾಜ್ಯಕ್ಕೆ ಹೊಸ ರೈಲ್ವೆ ಯೋಜನೆ ವಿಚಾರ, ‘ಹೊಸ ಯೋಜನೆಗಳಿಗೆ ರಾಜ್ಯಗಳದ್ದೇ ಸಮಸ್ಯೆ ಇದೆ. ರಾಜ್ಯಗಳು ಜಾಗ ಕೊಡಬೇಕು, ಅದರ ಜೊತೆ ದುಡ್ಡು ಕೊಡಬೇಕು. ರಾಜ್ಯದಲ್ಲಿ ಲೆವಲ್ ಕ್ರಾಸಿಂಗ್ ಬಗ್ಗೆ ಕೆಲಸ ಮಾಡುತ್ತೇನೆ. ಬರೀ ನಮ್ಮ ರಾಜ್ಯ ಮಾತ್ರವಲ್ಲ, ಇಡೀ ದೇಶದಲ್ಲಿ ಲೆವಲ್ ಕ್ರಾಸಿಂಗ್ ಅಭಿವೃದ್ದಿಗೆ ಕೆಲಸ ನಡೆಯಲಿದೆ. ಖರ್ಗೆ ಕಾಲದಲ್ಲಿ ಕನಕಪುರ ಚಾಮರಾಜನಗರ ರೈಲ್ವೆ ಕೆಲಸ ಹಾಗೆಯೇ ಇದೆ. ಧೃವನಾರಾಯಣ ಹಿಂಸೆ ಕೊಟ್ಟದಕ್ಕೆ ಕೆಲಸ ತೆಗೆದುಕೊಳ್ಳಲಾಗಿತ್ತು. ಆದರೆ, ನಾನೇ ಇನ್ಫ್ರಾಟ್ರಕ್ಟರ್ ಮಂತ್ರಿ ಆಗಿದ್ದಾಗ ಮುತುವರ್ಜಿ ವಹಿಸಿದ್ದೆ.ಪ್ರಧಾನಿ ಮೋದಿ ಮಂತ್ರಿಯಾದ ಒಂದು ತಾಸಿನಲ್ಲಿ ನಮಗೆಲ್ಲ ಬಿಸಿ ಮುಟ್ಟಿಸಿದ್ದಾರೆ. ರಾಜ್ಯದಲ್ಲಿ ಹತ್ತು ವರ್ಷ ಮಂತ್ರಿಯಾಗಿ ಕೆಲಸ ಮಾಡಿದ ಅನುಭವವಿದೆ. ಅದನ್ನೇ ಈಗ ಎನ್​ಡಿಎ ಸರಕಾರ ಮಂತ್ರಿಯಾಗಿ ಕೆಲಸ ಮಾಡುತ್ತೇನೆ ಎಂದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ