Karnataka Assembly Session: ಸರ್ಕಾರೀ ಆಸ್ಪತ್ರೆಗಳ ಸ್ಥಿತಿಯ ಬಗ್ಗೆ ವಿಪಕ್ಷ ನಾಯಕ ಅಶೋಕ ಮತ್ತು ಶಾಸಕ ಕೋನರೆಡ್ಡಿ ನಡುವೆ ವಾಗ್ವಾದ
Karnataka Assembly Session: ಅಶೋಕ ಮಾತಿನಿಂದ ಅಸಮಾಧಾನಗೊಂಡ ಕೋನರೆಡ್ಡಿ, ವಿರೋಧ ಪಕ್ಷದ ನಾಯಕರಾಗಿರುವ ಅಶೋಕ ಅವರೇ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಋಣಾತ್ಮಕವಾಗಿ ಮಾತಾಡಿದರೆ ಜನ ಅಲ್ಲಿಗೆ ಹೇಗೆ ಹೋದಾರು? ಅವರ ಮಾತು ಖಾಸಗಿ ಆಸ್ಪತ್ರೆಗಳಿಗೆ ನೆರವಾಗುವಂತಿದೆ, ಅವರು ನೆಗೆಟಿವ್ ಕಾಮೆಂಟ್ಗಳನ್ನು ಮಾಡೋದು ಬಿಟ್ಟು ಸರ್ಕಾರೀ ಆಸ್ಪತ್ರೆಗಳ = ಗುಣಮಟ್ಟ ಸುಧಾರಿಸಲು ಸಲಹೆ ನೀಡಲಿ ಎಂದರು.
ಬೆಳಗಾವಿ: ವಿಧಾನಸಭಾ ಅಧಿವೇಶನದ ಇವತ್ತಿನ ಕಾರ್ಯಕಲಾಪದ ಆರಭದಲ್ಲೇ ವಿರೋಧ ಪಕ್ಷದ ನಾಯಕ ಆರ್ ಅಶೋಕ ಮತ್ತು ಕಾಂಗ್ರೆಸ್ ಶಾಸಕ ಎನ್ ಹೆಚ್ ಕೋನರೆಡ್ಡಿ ನಡುವೆ ಸರ್ಕಾರಿ ಆಸ್ಪತ್ರೆಗಳ ವಿಷಯದ ಮೇಲೆ ವಾಗ್ವಾದ ನಡೆಯಿತು. ಸರ್ಕಾರಿ ಆಸ್ಪತ್ರೆಗಳ ಸ್ಥಿತಿ ಅಧೋಗತಿ ತಲುಪಿದೆ, ಸಾರ್ವಜನಿಕರು ಚಿಕಿತ್ಸೆಗಾಗಿ ಅಲ್ಲ್ಲಿಗೆ ಹೋಗುವುದು ಶೇಕಡ 50ರಷ್ಟು ಕಡಿಮೆಯಾಗಿದೆ, ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರು ಮತ್ತು ನವಜಾತ ಶಿಶುಗಳ ಮರಣ ನಂತರ ಜನ ತಮ್ಮ ಆಸ್ತಿಪಾಸ್ತಿಗಳನ್ನು ಮಾರಿಕೊಂಡು ಖಾಸಗಿ ಆಸ್ಪತ್ರೆಗಳಿಗೆ ಹೋಗೋದನ್ನು ಇಷ್ಟಪಡುತ್ತಿದ್ದಾರೆ ಎಂದು ಅಶೋಕ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಗರದ ಸಮಸ್ಯೆಗಳನ್ನು ವೀಕ್ಷಿಸಿದ ಬಳಿಕ ಸಿದ್ದರಾಮಯ್ಯ ದುರಸ್ತಿಗಾಗಿ ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲ: ಆರ್ ಅಶೋಕ
Published on: Dec 18, 2024 11:58 AM