Karnataka Assembly session; ಧಾರ್ಮಿಕ ಆಚರಣೆಗಳಲ್ಲಿ ಧ್ವನಿವರ್ಧಕಗಳ ಬಳಕೆ, ಸದನದಲ್ಲಿ ಜೋರು ಚರ್ಚೆ

Updated on: Aug 20, 2025 | 1:49 PM

ಚಲುವರಾಯಸ್ವಾಮಿ ಮಾತಾಡುತ್ತಿದ್ದಾಗ ಕೆಲ ಬಿಜೆಪಿ ನಾಯಕರು ಎದ್ದುನಿಂತು, ಅವರ ಮಾತಿಗೆ ಬ್ರೇಕ್ ಹಾಕಿದರು. ಮಧ್ಯೆಪ್ರವೇಶ ಮಾಡಿದ ಸ್ಪೀಕರ್ ಯುಟಿ ಖಾದರ್, ಸಚಿವರು ಪ್ರಶ್ನೆಗಳಿಗೆ ಉತ್ತರ ಕೊಡುವಾಗ ಅಡ್ಡಿಪಡಿಸಬೇಡಿ, ಅವರು ಹೇಳುವುದನ್ನು ಶಾಂತರಾಗಿ ಕೇಳಿ, ನಡುವೆ ಬಾಯಿ ಹಾಕಿದರೆ ವಿಷಯಾಂತರವಾಗಿ ಬಿಡುತ್ತದೆ, ಸದನದಲ್ಲಿ ಎತ್ತಿದ ಪ್ರಶ್ನೆಗಳಿಗೆ ಉತ್ತರ ಸಿಗಬೇಕು ಎಂದು ಹೇಳಿದರು.

ಬೆಂಗಳೂರು, ಆಗಸ್ಟ್ 20: ವಿಧಾನಸಭಾ ಅಧಿವೇಶನದಲ್ಲಿ ಇಂದು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಧಾರ್ಮಿಕ ಅಚರಣೆಗಳಲ್ಲಿ ಧ್ವನಿವರ್ಧಕಗಳ ಬಳಕೆಗೆ ಸಂಬಂಧಿಸಿದಂತೆ ವಾಗ್ವಾದ ನಡೆಯಿತು. ಬಿಜೆಪಿಯ ವೇದವ್ಯಾಸ್ ಕಾಮತ್ ಮತ್ತು ಡಾ ಸಿಎನ್ ಅಶ್ವಥ್ ನಾರಾಯಣ ಎತ್ತಿದ ಪ್ರಶ್ನೆಗಳಿಗೆ ಸರ್ಕಾರದ ಪರವಾಗಿ ಉತ್ತರಿಸಿದ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (Agriculture Minister N Cheluvarayaswamy), ಜನರ ಭಾವನೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಅಂತ ವಿರೋಧ ಪಕ್ಷದ ನಾಯಕರು ಹೇಳಿದರೆ ಸಾಕಿತ್ತು, ಅದರೆ ಅವರು ಅದನ್ನ ಬಿಟ್ಟು ಬೇರೆ ಏನೇನೋ ಮಾತಾಡುತ್ತಾರೆ, ಸರ್ಕಾರ ಯಾವುದೇ ಆಗಿರಲಿ, ಕಾನೂನನ್ನು ಪಾಲಿಸಲೇ ಬೇಕು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರವೇ ಇದೆಲ್ಲ ಆಗುತ್ತಿರೋದು ಅಂದರೆ ಹೇಗೆ? ಎಂದರು. ಹಿಂದೆ ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದ ಅಶ್ವಥ್ ನಾರಾಯಣ ಹೀಗೆಲ್ಲ ಮಾತಾಡಬಾರದು, ಅವರಿಗೆ ಕೂಗಾಡೋದು ಮಾತ್ರ ಇಷ್ಟ ಅಂತ ಕಾಣುತ್ತೆ ಅಂತ ಸಚಿವ ಹೇಳಿದರು.

ಇದನ್ನೂ ಓದಿ:  Karnataka Assembly session; ಡಿಕೆ ಶಿವಕುಮಾರ್ ಮತ್ತು ಅಶ್ವಥ್ ನಾರಾಯಣ ನಡುವೆ ಸದನದಲ್ಲಿ ಮಾತಿನ ಯುದ್ಧ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ