ಅಪ್ಪು ಸಮಾಧಿ ಬಳಿ ಅಶ್ವಿನಿ ಮತ್ತು ಮಕ್ಕಳ ಕಣ್ಣೀರು; ಪುನೀತ್ ನಿಧನರಾಗಿ ಇಂದಿಗೆ 2 ತಿಂಗಳು
Ashwini Puneeth Rajkumar: ಪುನೀತ್ ರಾಜ್ಕುಮಾರ್ ವಿಧಿವಶರಾಗಿ 2 ತಿಂಗಳು ಕಳೆದ ಹಿನ್ನೆಲೆಯಲ್ಲಿ ಪೂಜೆ ಸಲ್ಲಿಸಲಾಗಿದೆ. ಅಶ್ವಿನಿ ಪುನೀತ್ ರಾಜ್ಕುಮಾರ್ ಮತ್ತು ಅವರ ಮಕ್ಕಳು ಸಮಾಧಿ ಎದುರು ನಿಂತು ಕಂಬನಿ ಸುರಿಸಿದ್ದಾರೆ.
ಅಭಿಮಾನಿಗಳು ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಮರೆಯುವುದು ಸಾಧ್ಯವೇ ಇಲ್ಲ. ಇನ್ನು, ಅವರ ಕುಟುಂಬದವರಂತೂ ಅಪ್ಪು ಇಲ್ಲ ಎಂಬ ನೋವಿನಿಂದ ಹೊರಬರುವುದು ಅಸಾಧ್ಯ. ಅಪ್ಪು ನಿಧನರಾಗಿ ಇಂದಿಗೆ (ಡಿ.29) ಎರಡು ತಿಂಗಳು ಪೂರೈಸಿದೆ. ಅವರನ್ನು ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಎಲ್ಲಿ ನೋಡಿದರೂ ಅವರ ನೆನಪುಗಳೇ ಕಾಡುತ್ತಿವೆ. ಡಾ. ರಾಜ್ಕುಮಾರ್ ಕುಟುಂಬದವರು ಅಪ್ಪು ಸಮಾಧಿ (Puneeth Rajkumar Samadhi) ಬಳಿ ತೆರಳಿ ಪೂಜೆ ಸಲ್ಲಿಸಿದ್ದಾರೆ. ಪುನೀತ್ಗೆ ಇಷ್ಟವಾದ ತಿನಿಸುಗಳ ಎಡೆ ಇಡಲಾಗಿದೆ. ಅನೇಕ ಅಭಿಮಾನಿಗಳು ಕೂಡ ಅಪ್ಪು ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. ಅಶ್ವಿನಿ ಪುನೀತ್ ರಾಜ್ಕುಮಾರ್ (Ashwini Puneeth Rajkumar) ಮತ್ತು ಅವರ ಮಕ್ಕಳು ಸಮಾಧಿ ಎದುರು ನಿಂತು ಕಂಬನಿ ಸುರಿಸಿದ್ದಾರೆ. ಪುನೀತ್ ಅವರು ಅರ್ಧಕ್ಕೆ ಬಿಟ್ಟುಹೋದ ಎಲ್ಲ ಕೆಲಸಗಳ ಹೊಣೆಯನ್ನು ಅಶ್ವಿನಿ ಅವರು ಹೊತ್ತುಕೊಂಡಿದ್ದಾರೆ. ಪಿಆರ್ಕೆ ಪ್ರೊಡಕ್ಷನ್ಸ್, ಪಿಆರ್ಕೆ ಆಡಿಯೋ, ಶಕ್ತಿಧಾಮ ಮುಂತಾದ ಸಂಸ್ಥೆಗಳ ಜವಾಬ್ದಾರಿ ಈಗ ಅಶ್ವಿನಿಯವರ ಹೆಗಲ ಮೇಲಿದೆ. ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ಇನ್ನುಳಿದ ಕೆಲಸಗಳನ್ನು ಅವರು ಪೂರ್ಣಗೊಳಿಸಲಿದ್ದಾರೆ.
ಇದನ್ನೂ ಓದಿ:
‘ಶಿವಣ್ಣ, ನಾನು ದೇಹದಾನ ಮಾಡಿದ್ದೇವೆ’: ಅಪ್ಪು ನೆನಪಲ್ಲಿ ರಾಘಣ್ಣ ಹೇಳಿದ ಮಹತ್ವದ ವಿಚಾರಗಳು ಇಲ್ಲಿವೆ
Year Ender 2021: ಚಿತ್ರರಂಗದ ಪಾಲಿಗೆ ಕಪ್ಪು ಚುಕ್ಕೆಯಾದ 2021; ಮರೆಯೋಕೆ ಆಗಲ್ಲ ಪುನೀತ್ ನಿಧನದ ನೋವು