‘ಜಾಕಿ’ ಸಿನಿಮಾ ನೋಡಲು ಬಂದು ಚಿತ್ರಮಂದಿರದಲ್ಲಿ ಭಾವುಕರಾಗಿ ನಿಂತ ಅಶ್ವಿನಿ ಪುನೀತ್ ರಾಜ್ಕುಮಾರ್
ಎಷ್ಟು ವರ್ಷಗಳು ಉರುಳಿದರೂ ‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಮೇಲೆ ಜನರು ಇಟ್ಟಿರುವ ಅಭಿಮಾನ ಕಡಿಮೆ ಆಗುವುದಿಲ್ಲ. ಇಂದು ‘ಜಾಕಿ’ ಸಿನಿಮಾ ಮರು ಬಿಡುಗಡೆ ಆಗಿದ್ದು, ಚಿತ್ರಮಂದಿರದಲ್ಲಿ ಅಭಿಮಾನಿಗಳ ಪ್ರೀತಿ ಕಂಡು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಭಾವುಕರಾಗಿದ್ದಾರೆ. ‘ಅಪ್ಪು ಬಾಸ್ಗೆ ಜೈ’ ಎಂದು ಫ್ಯಾನ್ಸ್ ಜೈಕಾರ ಕೂಗಿದ್ದಾರೆ.
14 ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ‘ಜಾಕಿ’ ಸಿನಿಮಾ (Jackie Movie) ಈಗ ಮತ್ತೊಮ್ಮೆ ತೆರೆಕಂಡಿದೆ. ಇಂದು (ಮಾರ್ಚ್ 15) ‘ಜಾಕಿ’ ಸಿನಿಮಾವನ್ನು ಅಭಿಮಾನಿಗಳು ಮತ್ತೆ ದೊಡ್ಡ ಪರದೆ ಮೇಲೆ ಕಣ್ತುಂಬಿಕೊಂಡಿದ್ದಾರೆ. ಪುನೀತ್ ರಾಜ್ಕುಮಾರ್ ಅವರನ್ನು ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಅಶ್ವಿನಿ ಪುನೀತ್ ರಾಜ್ಕುಮಾರ್ (Ashwini Puneeth Rajkumar) ಕೂಡ ಸಿನಿಮಾ ನೋಡಲು ಬಂದಿದ್ದಾರೆ. ಈ ವೇಳೆ ‘ಪವರ್ ಸ್ಟಾರ್’ಗೆ ಎಲ್ಲರೂ ಜೈಕಾರ ಹಾಕಿದ್ದಾರೆ. ಅಭಿಮಾನಿಗಳ ಪ್ರೀತಿಯನ್ನು ಕಂಡು ಅಶ್ವಿನಿ ಭಾವುಕರಾಗಿದ್ದಾರೆ. ‘ಜಾಕಿ’ ಸಿನಿಮಾ ಪ್ರದರ್ಶನ ಆರಂಭ ಆಗುವಾಗ ಅಶ್ವಿನಿ ಅವರು ಎಮೋಷನಲ್ ಆಗಿದ್ದು ಕಂಡುಬಂತು. ಆ ಸಂದರ್ಭದ ವಿಡಿಯೋ ಇಲ್ಲಿದೆ. ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಜನ್ಮದಿನದ ಪ್ರಯುಕ್ತ ‘ಜಾಕಿ’ ಚಿತ್ರವನ್ನು ರೀ-ರಿಲೀಸ್ ಮಾಡಲಾಗಿದೆ. ಅನೇಕ ಕಡೆಗಳಲ್ಲಿ ಈ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಯೋಗೇಶ್ ಗೌಡ ಕೊಲೆ ಕೇಸ್: ವಿನಯ್ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ: 25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್

