ಕೇರಂ ಬೋರ್ಡ್ ಒಡೆದು ಹಾಕಿಸಿದ ಪೊಲೀಸಪ್ಪ, ಇಸ್ಪೀಟ್, ಮಟ್ಕಾ ಆಡುವರನ್ನು ಬಿಟ್ಟು ಕೇರಂ ಮೇಲ್ಯಾಕೆ ದರ್ಪ?
ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಎಎಸ್ಐ ಇಬ್ಬರು ಯುವಕರು ಆಡುತ್ತಿದ್ದ ಕೇರಂ ಮೇಲೆ ಕಲ್ಲಿ ಎತ್ತಿ ಹಾಕಿಸಿ ಒಡೆಸಿ ದರ್ಪ ಮೆರೆದಿದ್ದಾರೆ. ಕೇರಂ ಬೋರ್ಡ್ ಒಡೆಸಿ ಹಾಕುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ. ಎಎಸ್ಐ ರಮೇಶ್ ಭದ್ರಾಪೂರ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ, (ನವೆಂಬರ್ 05): ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಎಎಸ್ಐ ಇಬ್ಬರು ಯುವಕರು ಆಡುತ್ತಿದ್ದ ಕೇರಂ ಮೇಲೆ ಕಲ್ಲಿ ಎತ್ತಿ ಹಾಕಿಸಿ ಒಡೆಸಿ ದರ್ಪ ಮೆರೆದಿದ್ದಾರೆ. ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಾತ್ರಿ ಸಮಯದಲ್ಲಿ ಕೆಲ ಯುವಕರು ದೇವಸ್ಥಾನದಲ್ಲಿ ಕೇರಂ ಆಡುತ್ತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಹುಬ್ಬಳ್ಳಿ ಗ್ರಾಮೀಣ ಠಾಣೆಯ ASI ರಮೇಶ್ ಭದ್ರಾಪೂರ ಕೇರಂ ಬೋರ್ಡ್ ಆಡುವುದನ್ನು ನೋಡಿ ಗರಂ ಆಗಿದ್ದಾರೆ. ಅಲ್ಲದೇ ಅದೇ ಯವಕರ ಕಡೆಯಿಂದ ಕೇರಂ ಬೋರ್ಡ್ ಮೇಲೆ ಕಲ್ಲು ಎತ್ತಿಹಾಕಿಸಿ ಪುಡಿ ಪುಡಿ ಮಾಡಿಸಿದ್ದಾರೆ. ಕೇರಂ ಬೋರ್ಡ್ ಒಡೆಸಿ ಹಾಕುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ. ಎಎಸ್ಐ ರಮೇಶ್ ಭದ್ರಾಪೂರ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವಸ್ಥಾನದಲ್ಲಿ ಕುಳಿತುಕೊಂಡು ಕೇರಂ ಆಡಿದ್ದೇ ತಪ್ಪೇ? ಇಸ್ಪೀಟ್, ಮಟ್ಕಾ ಆಡುವವರನ್ನು ಬಿಟ್ಟು ಕೇರಂ ಆಡುವವರ ಮೇಲೆ ದರ್ಪ ತೋರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
Latest Videos