VIDEO: ಕೈ ಸನ್ನೆಯೊಂದಿಗೆ ಭಾರತೀಯ ಸೈನಿಕರನ್ನು ಹೀಯಾಳಿಸಿದ ಹಾರಿಸ್ ರೌಫ್
India vs Pakistan: ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿದ್ದರು. 172 ರನ್ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 18.5 ಓವರ್ಗಳಲ್ಲಿ 174 ರನ್ ಬಾರಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಭಾರತ ಮತ್ತು ಪಾಕಿಸ್ತಾನ್ ನಡುವಣ ಜಿದ್ದಾಜಿದ್ದಿನ ಪಂದ್ಯದ ನಡುವೆ ಪಾಕ್ ವೇಗಿ ಹಾರಿಸ್ ರೌಫ್ ವಿವಾದಾತ್ಮಕ ಕೈ ಸನ್ನೆ ತೋರಿಸಿ ಭಾರತೀಯ ಸೈನಿಕರನ್ನು ಹೀಯಾಳಿಸಿದ್ದಾರೆ. ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದ ವೇಳೆ ಬೌಂಡರಿ ಲೈನ್ನಲ್ಲಿ ಕಾಣಿಸಿಕೊಂಡಿದ್ದ ಹಾರಿಸ್ ರೌಫ್ ಅವರನ್ನು ಟೀಮ್ ಇಂಡಿಯಾ ಅಭಿಮಾನಿಗಳು ವಿರಾಟ್ ಕೊಹ್ಲಿ ಹೆಸರಿನೊಂದಿಗೆ ಕೆಣಕಿದ್ದರು.
ಇದಕ್ಕೆ ಪ್ರತಿಯಾಗಿ ಹಾರಿಸ್ ರೌಫ್ 6-0 ಎಂದು ಕೈ ಸನ್ನೆ ಮಾಡುವ ಮೂಲಕ ತಿರುಗೇಟು ನೀಡಿದರು. ಅಲ್ಲದೆ ವಿಮಾನ ಬೀಳುತ್ತಿರುವುದನ್ನು ತೋರಿಸುವ ಮೂಲಕ ಭಾರತೀಯರನ್ನು ಕೆಣಕಿದರು. ಹಾರಿಸ್ ರೌಫ್ ಹೀಗೆ ವಿಮಾನ ಬೀಳುವ ಹಾಗೂ 6-0 ಎಂದು ಕೈ ಸನ್ನೆ ತೋರಿಸಲು ಮುಖ್ಯ ಕಾರಣ ಆಪರೇಷನ್ ಸಿಂಧೂರ್ ಕಾರ್ಯಾಚರಣೆ.
ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ಸೈನಿಕರು ಪಾಕಿಸ್ತಾನ್ ಮೇಲೆ ವಾಯು ದಾಳಿ ನಡೆಸಿತ್ತು. ಈ ವೇಳೆ 6 ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂಬ ಪಾಕಿಸ್ತಾನದ ಆಧಾರರಹಿತ ಹೇಳಿಕೆ ನೀಡಿದ್ದರು. ಇದನ್ನೆ 6-0 ಎಂದು ಕೈ ಸನ್ನೆಯ ಮೂಲಕ ತೋರಿಸಿ ಹಾರಿಸ್ ರೌಫ್ ಭಾರತೀಯ ಅಭಿಮಾನಿಗಳನ್ನು ಕೆಣಕಿದ್ದಾರೆ. ಇದೀಗ ಪಾಕ್ ವೇಗಿಯ ನಡೆಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿದ್ದರು. 172 ರನ್ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 18.5 ಓವರ್ಗಳಲ್ಲಿ 174 ರನ್ ಬಾರಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.

