Rongali Bihu: ಬಿಹು ಉತ್ಸವಕ್ಕೆ ಅಸ್ಸಾಂ ಸಿದ್ಧಗೊಳ್ಳುತ್ತಿದೆ, ಜಾನಪದ ಸಂಗೀತ ವಾದ್ಯಗಳಿಗೆ ಹೆಚ್ಚಿದ ಬೇಡಿಕೆ

|

Updated on: Mar 28, 2023 | 7:57 AM

ಬಿಹು ಸೀಸನ್ ನಲ್ಲಿ ದಂಪತಿ ತಯಾರಿಸುವ ಸಂಗೀತ ಉಪಕರಣಗಳಿಗೆ ಭಾರೀ ಬೇಡಿಕೆಯಿದ್ದು ಸಂಪಾದನೆಯೂ ಜೋರಾಗಿದೆ.

ಗೊಲಘಾಟ್ (ಅಸ್ಸಾಂ): ಅಸ್ಸಾಂ ಜನತೆ ವಿಜೃಂಭಣೆಯಿಂದ ಆಚರಿಸುವ ಬೊಹಾಗ್ ಬಿಹು ಅಂತಲೂ ಕರೆಯಲ್ಪಡುವ ರೊಂಗಾಲಿ ಬಿಹು (Rongali Bihu) ಹಬ್ಬಕ್ಕೆ ಸಿದ್ಧತೆಗಳು ಭರ್ಜರಿಯಾಗಿ ಆರಂಭವಾಗಿವೆ. ರೊಂಗಾಲಿ ಬಿಹು ಅಸ್ಸಾಮ್ ಹೊಸ ವರ್ಷ ಮತ್ತು ವಸಂತ ಋತುವಿನ (Spring Season) ಆಗಮನದ ಸೂಚನೆಯಾಗಿದೆ. ಹಬ್ಬದ ಪ್ರಯುಕ್ತ ಜಿಲ್ಲೆ ನಮ್ಸಾನಿಯಾ ಗ್ರಾಮದ ದಂಪತಿ ಮೆಹುರಾಮ್ ಬೋರಾ ಮತ್ತು ಮೊಮಿ ಬೋರಾ ಜಾನಪದ ಸಂಗೀತದ ಉಪಕರಣಗಳ (folk musical instruments) ತಯಾರಿಕೆಯಲ್ಲಿ ತಲ್ಲೀನರಾಗಿದ್ದಾರೆ. ಕಳೆದ 30 ವರ್ಷಗಳಿಂದ ಅವರು ತಮ್ಮನ್ನು ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಎತ್ತುಗಳ ಕೊಂಬುಗಳಿಂದ ತಯಾರಿಸಲ್ಪಡುವ ಪೆಪಾ, ಬಿದಿರಿನಿಂದ ಮಾಡುವ ಗೊಗೊನಾ ಮತ್ತು ಟೋಕಾ ಹಾಗೂ ಮಣ್ಣಿನಿಂದ ತಯಾರಾಗುವ ಜುಟುಲಿ ಅವರು ತಯಾರಿಸುವ ಸಂಗೀತದ ಉಪಕರಣಗಳಲ್ಲಿ ಸೇರಿವೆ.

ಇದನ್ನೂ ಓದಿ: Siddaramaiah: ವಿದೇಶಿ ಕಾಣಿಕೆ ಸ್ವೀಕರಿಸಲಾಗದೆ ತಿರುಪತಿ ಟ್ರಸ್ಟ್​ಗೆ ಸಂಕಷ್ಟ; ಹಿಂದೂ ವಿರೋಧಿ ಬಿಜೆಪಿ ಎಂದ ಸಿದ್ದರಾಮಯ್ಯ

‘ನಾವು ಜೂಲಿಯ ಪೆಪಾ, ಗೊಗೋನಾ, ಜುಟುಲಿ, ಢೋಲ್ಕಮಾರಿ, ಟೊಕಾ, ಟುಕಾರಿ ಮತ್ತು ಧೊತೊರಾಗಳನ್ನು ತಯಾರು ಮಾಡುತ್ತೇವೆ. ಸುಮಾರು 150 ಪೆಪಾಗಳನ್ನು ನಾನು ಇದುವರೆಗೆ ತಯಾರಿಸಿದ್ದೇನೆ,’ ಎಂದು ಮೆಹುರಾಮ್ ಬೋರಾ ಹೇಳುತ್ತಾರೆ.

ಬಿಹು ಸೀಸನ್ ನಲ್ಲಿ ದಂಪತಿ ತಯಾರಿಸುವ ಸಂಗೀತ ಉಪಕರಣಗಳಿಗೆ ಭಾರೀ ಬೇಡಿಕೆಯಿದ್ದು ಸಂಪಾದನೆಯೂ ಜೋರಾಗಿದೆ.

‘ಕೆಲವು ಸೀಸನ್ ಗಳಲ್ಲಿ ಮಾರಾಟ ಅಮೋಘವಾಗಿದ್ದರೆ ಕೆಲ ಸಲ ನೀರಸವಾಗಿರುತ್ತದೆ. ಏನೇ ಆಗಲಿ ನಮ್ಮ ಉಪಜೀವನಕ್ಕೇನೂ ತೊಂದರೆಯಿಲ್ಲ. ಪ್ರಸಕ್ತ ಸೀಸನ್ ನಲ್ಲಿ ನಾನು ಇದುವರೆಗೆ ರೂ. 3,80,000 ಸಂಪಾದಿಸಿದ್ದೇನೆ, ಒಮ್ಮೆ ಒಂದು ಸೀಸನ್ ನಲ್ಲಿ ರೂ. 5 ಲಕ್ಷ ಸಂಪಾದನೆ ಮಾಡಿದ್ದೂ ಇದೆ,’ ಎಂದು ಮೆಹುರಾಮ್ ಹೇಳುತ್ತಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಅಮೆರಿಕಾ ಕಾನ್ಸುಲೇಟ್ ಕಚೇರಿ ಆರಂಭಿಸಲು ಬ್ಲಿಂಕನ್​ಗೆ ಮನವಿ ಸಲ್ಲಿಸುತ್ತೇನೆ: ವಿದೇಶಾಂಗ ಸಚಿವ ಜೈಶಂಕರ್

ಬಿಹು ಸೀಸನ್ ನಲ್ಲಿ ಕರಕುಶಲ ವಸ್ತುಗಳಿಗೆ ವಿಪರೀತ ಬೇಡಿಕೆ ಇರುತ್ತದೆ. ಬೇರೆ ಸಾಂಪ್ರದಾಯಿಕ ಕರಕುಶಲಕರ್ಮಿಗಳು ತಯಾರಿಸುವ ಸಾಂಪ್ರದಾಯಿಕ ವಾದ್ಯಗಳು ಸಹ ಚೆನ್ನಾಗಿ ಮಾರಾಟವಾಗುತ್ತಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on