Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ

|

Updated on: Sep 08, 2024 | 6:39 AM

ನಿತ್ಯ ಬದುಕಿನಲ್ಲಿ ಪಂಚಾಂಗವೆಂಬುವುದು ಬಹಳ ಮುಖ್ಯವಾದುದ್ದಾಗಿದೆ. ವಿಶೇಷ 2024ರ ಸೆಪ್ಟೆಂಬರ್​ 08ರ ರಾಶಿ ಭವಿಷ್ಯ ಹೇಗಿರಲಿದೆ? ಇಂದು ಯಾವ ರಾಶಿಯವರಿಗೆ ಏನು ಫಲ? ಗ್ರಹಗಳ ಸಂಚಾರ ಹೇಗಿದೆ? ಇದರಿಂದ ನಿಮ್ಮ ಮೇಲಾಗುವ ಪರಿಣಾಮಗಳೇನು? ಎಂಬುವುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ದ್ವಾದಶ ರಾಶಿಗಳ ಫಲಾಪಲ ಕುರಿತು ಈ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.

ಜಾತಕ ಸಾಮಾನ್ಯವಾಗಿ 12 ಜ್ಯೋತಿಷ್ಯ ರಾಶಿಗಳನ್ನು ಹೊಂದಿದೆ. ಪ್ರತಿಯೊಂದೂ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಇವು ಪ್ರಭಾವ ಬೀರುತ್ತದೆ. ನಮ್ಮ ದೈನಂದಿನ ಜೀವನವು ಗ್ರಹಗಳ ಚಲನೆಗಳಿಂದ ಪ್ರಭಾವಿತವಾಗಿರುತ್ತವೆ. ಏಕೆಂದರೆ ಅವು ನಿರಂತರವಾಗಿ ತಮ್ಮ ಸ್ಥಾನಗಳನ್ನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಬದಲಾಯಿಸುತ್ತವೆ. ಈ ಚಲನವು ಒಬ್ಬರ ಜೀವನದಲ್ಲಿ ಧನಾತ್ಮಕವಾಗಿದ್ದರೆ ಮತ್ತೊಬ್ಬರ ಜೀವನಕ್ಕೆ ನಕಾರಾತ್ಮಕ ಪ್ರಭಾವಗಳನ್ನು ತರಬಹುದು. ಅಂತಹ ವಿಷಯಗಳನ್ನು ಮುಂಚಿತವಾಗಿ ತಿಳಿದಿರುವುದು ಅನಿಶ್ಚಿತತೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ದಿನದ ರಾಶಿ ಭವಿಷ್ಯ (Horoscope) ಹೇಗಿದೆ?, ಈ ದಿನದ ಗ್ರಹಗಳ ಚಲನವಲನ ಹೇಗಿದೆ? ಇಂದಿನ (ಸೆಪ್ಟೆಂಬರ್​ 08) ರಾಶಿ ಭವಿಷ್ಯವೇನು? ಈ ಪ್ರಶ್ನೆಗಳಿಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಉತ್ತರ ನೀಡಿದ್ದಾರೆ. ವಿಡಿಯೋ ನೋಡಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಪಂಚಮೀ, ನಿತ್ಯನಕ್ಷತ್ರ: ಸ್ವಾತಿ, ಯೋಗ: ಐಂದ್ರ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:38 ಗಂಟೆ, ರಾಹು ಕಾಲ ಮಧ್ಯಾಹ್ನ 05:06 ರಿಂದ ಸಂಜೆ 06:38, ಯಮಘಂಡ ಕಾಲ ಮಧ್ಯಾಹ್ನ 12:30 ರಿಂದ 02:02ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:34 ರಿಂದ 05:06ರ ವರೆಗೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ