ಅಧಿಕಾರಿಗಳ ಅನುಮತಿಯಿಲ್ಲದೆ 6 ತಿಂಗಳ ಹಿಂದೆ ಮಾಡಿದ್ದ ಸಮಾಧಿ ಶಿಫ್ಟ್​​ ಮಾಡಲು ಯತ್ನ! ಹೀಗ್ಯಾಕೆ? ಈಗ್ಯಾಕೆ?

| Updated By: ಸಾಧು ಶ್ರೀನಾಥ್​

Updated on: Mar 07, 2024 | 1:18 PM

ಜೊತೆಗೆ ಮೃತ ವ್ಯಕ್ತಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರದಿದ್ದರೂ ಕ್ರಿಶ್ಚಿಯನ್ ಬಾಕ್ಸ್ ತಂದು ಅದರಲ್ಲಿ ಶಿಫ್ಟ್​ ಮಾಡಲು ಯತ್ನಿಸಿದ್ದು ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ಸಮಾಧಿಯಿಂದ ಮೃತದೇಹವನ್ನ ಶಿಫ್ಟ್​​ ಮಾಡಲು ಅಧಿಕಾರಿಗಳಿಂದ ಅನುಮತಿಯನ್ನೂ ಪಡೆಯದೆ ಸಮಾಧಿ ಅಗೆದಿರುವುದರ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಆರು ತಿಂಗಳ ಹಿಂದೆ ಅಂತ್ಯಕ್ರಿಯೆ ( last rites) ಮಾಡಿ, ಸಮಾಧಿ (grave) ಮಾಡಿದ್ದನ್ನು ಏಕಾಏಕಿ ಈಗ ಅಗೆದು ಮೃತದೇಹವನ್ನ ಬೇರೆಡೆಗೆ ಅಕ್ರಮವಾಗಿ ಶಿಫ್ಟ್​​ ಮಾಡ್ತಿದ್ದಾರೆ ಅಂತ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಯಲಹಂಕ (Yelahanka) ತಾಲೂಕಿನ ನಾಗೇನಹಳ್ಳಿಯಲ್ಲಿ ಆರು ತಿಂಗಳಿಂದೆ ವೆಂಕಟರಾಜು ಎಂಬುವವರು ಸಾವನ್ನಪಿದ್ದು ಆತನನ್ನ ಖಾಸಗಿ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡಿದ್ರಂತೆ. ಆದ್ರೆ ಅಂದಿನಿಂದ ಸುಮ್ಮನಿದ್ದ ಕೆಲವರು ಇದೀಗ ಏಕಾಏಕಿ ಸಮಾಧಿ ಅಗೆಯಲು ಬಂದಿದ್ದು ಅಕ್ರಮವಾಗಿ ಸಮಾಧಿ ಶಿಫ್ಟ್​​ ಮಾಡ್ತಿದ್ದಾರೆ ಅಂತ ಆಕ್ರೋಶ ಹೊರ ಹಾಕಿದ್ದಾರೆ.

ಜೊತೆಗೆ ಮೃತ ವ್ಯಕ್ತಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರದಿದ್ದರೂ ಕ್ರಿಶ್ಚಿಯನ್ ಬಾಕ್ಸ್ ತಂದು ಅದರಲ್ಲಿ ಶಿಫ್ಟ್​ ಮಾಡಲು ಯತ್ನಿಸಿದ್ದು ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ಸಮಾಧಿಯಿಂದ ಮೃತದೇಹವನ್ನ ಶಿಫ್ಟ್​​ ಮಾಡಲು ಅಧಿಕಾರಿಗಳಿಂದ ಅನುಮತಿಯನ್ನೂ ಪಡೆಯದೆ ಸಮಾಧಿ ಅಗೆದಿರುವುದರ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಇನ್ನು ಈ ಬಗ್ಗೆ ಯಲಹಂಕ ನ್ಯೂಟೌನ್ ಪೊಲೀಸರಿಗೆ ಮೃತದೇಹದ ಸಂಬಂಧಿಕರು ದೂರು ನೀಡಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on