Highway Toll: ಹೈ ವೆ ಟೋಲ್ ತಪ್ಪಿಸಲು ಹೀಗಾ ಮಾಡೋದು!  ಹುಷಾರ್​ ಎಂದು ಎಚ್ಚರಿಕೆ ಸಂದೇಶ ರವಾನಿಸಿದ ಸಂಸದ ಪ್ರತಾಪ್ ಸಿಂಹ

Edited By:

Updated on: Oct 03, 2023 | 5:02 PM

ಮೈಸೂರು-ಬೆಂಗಳೂರು ಎಕ್ಸ್​​ಪ್ರೆಸ್​​ ಹೈವೆ ಯಲ್ಲಿ ಹೋಂ ಗಾರ್ಡ್ಸ್ ಮೇಲೆ ದರ್ಪ ತೋರಿ ಹಲ್ಲೆ ಮಾಡಿರುವ ಪ್ರಸಂಗ ವಿಟಿಯೋದಲ್ಲಿ ಸೆರೆಯಾಗಿದೆ. ಕಾರಿನಲ್ಲಿದ್ದವರು ಹೈ ವೆ ಟೋಲ್ (highway toll) ತಪ್ಪಿಸಿಕೊಳ್ಳಲು ಸರ್ವಿಸ್ ರಸ್ತೆ ಮೂಲಕ ಹೈವೆ ಎಂಟ್ರಿ ಕೊಟ್ಟಿದ್ದರು. ಸರ್ವಿಸ್ ರಸ್ತೆ ಮೂಲಕ ಹೈವೆ ಗೆ ಬರುತ್ತಿದ್ದ ಕಾರನ್ನು ಹೋಂ ಗಾರ್ಡ್ ತಡೆದಿದ್ದರು. ಆ ವೇಳೆ ಹೋಂ ಗಾರ್ಡ್ ಮೇಲೆ ಕಾರಿನಲ್ಲಿದ್ದವರು ಹಲ್ಲೆ ಮಾಡಲು ಮುಂದಾಗಿದ್ದಾರೆ.

ಮೈಸೂರು, ಅಕ್ಟೋಬರ್​ 3: ಮೈಸೂರು-ಬೆಂಗಳೂರು ಎಕ್ಸ್​​ಪ್ರೆಸ್​​ ಹೈವೆ ಯಲ್ಲಿ ಹೋಂ ಗಾರ್ಡ್ಸ್ ಮೇಲೆ ದರ್ಪ ತೋರಿ ಹಲ್ಲೆ ಮಾಡಿರುವ ಪ್ರಸಂಗ ವಿಟಿಯೋದಲ್ಲಿ ಸೆರೆಯಾಗಿದೆ. ಕಾರಿನಲ್ಲಿದ್ದವರು ಹೈ ವೆ ಟೋಲ್ (highway toll) ತಪ್ಪಿಸಿಕೊಳ್ಳಲು ಸರ್ವಿಸ್ ರಸ್ತೆ ಮೂಲಕ ಹೈವೆ ಎಂಟ್ರಿ ಕೊಟ್ಟಿದ್ದರು. ಸರ್ವಿಸ್ ರಸ್ತೆ ಮೂಲಕ ಹೈವೆ ಗೆ ಬರುತ್ತಿದ್ದ ಕಾರನ್ನು ಹೋಂ ಗಾರ್ಡ್ ತಡೆದಿದ್ದರು. ಆ ವೇಳೆ ಹೋಂ ಗಾರ್ಡ್ ಮೇಲೆ ಕಾರಿನಲ್ಲಿದ್ದವರು ಹಲ್ಲೆ ಮಾಡಲು ಮುಂದಾಗಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದಿಸಿ ಹೋಂ ಗಾರ್ಡ್ ಕೊರಳಪಟ್ಟಿ ಹಿಡಿದು ( home guards) ಹಲ್ಲೆಗೆ ಯತ್ನಿಸಿದ್ದಾರೆ. ಈ ವೀಡಿಯೋ ವನ್ನು ಮೈಸೂರು ಸಂಸದ ಪ್ರತಾಪ್ ಸಿಂಹ (MP Pratap Simha) ಅವರು ತಮ್ಮ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ. ಹೋಮ್​ ಗಾರ್ಡ್ಸ್ ಮೇಲೆ ಕೈ ಎತ್ತಿದ್ದರೆ (behaviour) ಸುಮ್ಮನೆ ಬಿಡಲ್ಲ ಎಂದೂ ಅವರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ