Nithya Bhavishya: ಈ ರಾಶಿಯವರಿಗೆ ಆರ್ಥಿಕ ಸಂಕಷ್ಟ, ಕುಟುಂಬದಲ್ಲಿ ಕಲಹ ಉಂಟಾಗಲಿದೆ

|

Updated on: Aug 03, 2024 | 6:43 AM

2024 ಆಗಸ್ಟ್ 3ರ ಶನಿವಾರವಾದ ಇಂದು, ಚಂದ್ರನು ತನ್ನದೇ ಆದ ರಾಶಿಚಕ್ರ ಕರ್ಕ ರಾಶಿಯಲ್ಲಿ ಸಾಗಲಿದ್ದಾನೆ. ಅಲ್ಲದೇ ಈ ದಿನ ಸಿದ್ಧಿ ಯೋಗ, ಶಶ ಯೋಗ, ಪುನರ್ವಸು ನಕ್ಷತ್ರದ ಶುಭ ಸಂಯೋಗ ನಡೆಯುತ್ತಿದ್ದು, ಗ್ರಹಗಳ ಸ್ಥಾನ ಬದಲಾವಣೆಯಾಗಿದೆ. ಇದರಿಂದ ಯಾವೆಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಎಂಬುವುದನ್ನು ಇಲ್ಲಿ ತಿಳಿಯಿರಿ.

ನಮ್ಮ ನಿತ್ಯದ ಜೀವನದಲ್ಲಿ ನಾವು ದೈನಂದಿನ (Horoscope) ಜೀವನದಲ್ಲಿ ಜಾತಕ ನೋಡುವುದನ್ನು ಮರೆಯಬಾರದು. ಜ್ಯೋತಿಷ್ಯದ ಪ್ರಕಾರ, ನಮ್ಮ ದೈನಂದಿನ ಜೀವನವು ಗ್ರಹಗಳ ಚಲನೆಗಳಿಂದ ಪ್ರಭಾವಿತವಾಗಿರತ್ತವೆ. ಏಕೆಂದರೆ ಅವು ನಿರಂತರವಾಗಿ ತಮ್ಮ ಸ್ಥಾನಗಳನ್ನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಬದಲಾಯಿಸುತ್ತವೆ. ಈ ಚಲನವು ಒಬ್ಬರ ಜೀವನದಲ್ಲಿ ಧನಾತ್ಮಕವಾಗಿದ್ದರೆ ಮತ್ತೊಬ್ಬರ ಜೀವನಕ್ಕೆ ನಕಾರಾತ್ಮಕ ಪ್ರಭಾವಗಳನ್ನು ತರಬಹುದು. ಅಂತಹ ವಿಷಯಗಳನ್ನು ಮುಂಚಿತವಾಗಿ ತಿಳಿದಿರುವುದು ಅನಿಶ್ಚಿತತೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ಇಂದಿನ ಗ್ರಹಗಳ ಚಲನವಲನ ಹೇಗಿದೆ? ಇಂದಿನ (ಆಗಸ್ಟ್ 03) ರಾಶಿ ಭವಿಷ್ಯವೇನು? ಇಂದಿನ ಅಥವಾ ನಾಳೆಯ ಜಾತಕವನ್ನು ಹುಡುಕುತ್ತಿರುವಿರಾ? ಈ ಪ್ರಶ್ನೆಗಳಿಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಉತ್ತರ ನೀಡಲಿದ್ದಾರೆ. ವಿಡಿಯೋ ನೋಡಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಕರ್ಕಾಟಕ ಮಾಸ, ಪುನರ್ವಸು ನಕ್ಷತ್ರ: ಪುಷ್ಯಾ, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ದ್ವಾದಶೀ, ಪುಷ್ಯ ನಕ್ಷತ್ರ: ಯೋಗ: ವ್ಯಾಘಾತ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 17 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ, ರಾಹು ಕಾಲ ಬೆಳಗ್ಗೆ 09:19 ರಿಂದ 10:54ರ ವರೆಗೆ, ಯಮಗಂಡ ಕಾಲ ಮಧ್ಯಾಹ್ನ 02:04 ರಿಂದ 03:39ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:10ರಿಂದ 07:44ರ ವರೆಗೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow us on