ಅಯೋಧ್ಯೆ ರಾಮನ ವಿಗ್ರಹ ಶಿಲ್ಪಿ ಅರುಣ್ ಯೋಗಿರಾಜ್ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ

| Updated By: Ganapathi Sharma

Updated on: Jan 03, 2024 | 9:47 AM

Arun Yogiraj Dance Video: ಅಯೋಧ್ಯೆಯಲ್ಲಿ ಮೂರ್ತಿ ಕೆತ್ತನೆ ಮಾಡಿದ ಬಳಿಕ ಅರುಣ್ ಅವರಿಗೆ ಟ್ರಸ್ಟಿಗಳಿಂದ ಸನ್ಮಾನವಾಗಿತ್ತು. ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಗಿತ್ತು. ಅದಾದ ಬಳಿಕ ಎಲ್ಲ ಶಿಲ್ಪಿಗಳ ಜೊತೆ ನೃತ್ಯ ಮಾಡಿ ಅರುಣ್ ಸಂಭ್ರಮಿಸಿದ್ದಾರೆ.

ಮೈಸೂರು, ಜನವರಿ 3: ಅಯೋಧ್ಯೆಯಲ್ಲಿ ಜನವರಿ 22ರಂದು ಉದ್ಘಾಟನೆಯಾಗಲಿರುವ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೆ ಕರ್ನಾಟಕದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ನಿರ್ಮಿಸಿರುವ ವಿಗ್ರಹ ಆಯ್ಕೆಯಾಗಿರುವುದಕ್ಕೆ ರಾಜ್ಯದಾದ್ಯಂತ ಸಂಭ್ರಮ ವ್ಯಕ್ತವಾಗಿದೆ. ಈ ಮಧ್ಯೆ, ಅಯೋಧ್ಯೆಯಲ್ಲಿ ಶಿಲ್ಪಿ ಅರುಣ್​ ಯೋಗಿರಾಜ್ ಅವರು ಸಹ ಶಿಲ್ಪಿಗಳ ಜತೆಗೂಡಿ ನೃತ್ಯ (Arun Yogiraj Dance) ಮಾಡಿರುವ ವಿಡಿಯೋ ಈಗ ಬಹಿರಂಗವಾಗಿದೆ. ವಿಗ್ರಹ ಆಯ್ಕೆಯಾದ ಖುಷಿಯಲ್ಲಿ ಸಹ ಶಿಲ್ಪಿಗಳೊಂದಿಗೆ ಅರುಣ್​ ಯೋಗಿರಾಜ್ ನೃತ್ಯಮಾಡಿದ್ದಾರೆ. ಅರುಣ್ ಅವರನ್ನು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​​ ನೆನಪಿನ ಕಾಣಿಕೆಯೊಂದಿಗೆ ಬೀಳ್ಕೊಟ್ಟಿದೆ.

ಅಯೋಧ್ಯೆಯಲ್ಲಿ ಮೂರ್ತಿ ಕೆತ್ತನೆ ಮಾಡಿದ ಬಳಿಕ ಅರುಣ್ ಅವರಿಗೆ ಟ್ರಸ್ಟಿಗಳಿಂದ ಸನ್ಮಾನವಾಗಿತ್ತು. ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಗಿತ್ತು. ಅದಾದ ಬಳಿಕ ಎಲ್ಲ ಶಿಲ್ಪಿಗಳ ಜೊತೆ ನೃತ್ಯ ಮಾಡಿ ಅರುಣ್ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಮೈಸೂರಿನ ಶಿಲ್ಪಿ ಕೆತ್ತಿದ ವಿಗ್ರಹ, ಯಾರು ಅರುಣ್ ಯೋಗಿರಾಜ್?

ಮೈಸೂರಿನ ಶಿಲ್ಪಿ ಅರುಣ್​ ಯೋಗಿರಾಜ್ ನಿರ್ಮಿಸಿರುವ, ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೆ ಆಯ್ಕೆಯಾಗಿರುವ ವಿಗ್ರಹದ ಚಿತ್ರಗಳನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಂಗಳವಾರ ಸಾಮಾಜಿಕ ಮಾಧ್ಯಮ ಎಕ್ಸ್​​ ಮೂಲಕ ಹಂಚಿಕೊಂಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jan 03, 2024 09:44 AM