ರಂಗಾಯಣ ರಘು ಅವರ ನಟನೆಯ ಕೊಂಡಾಡಿದ ರಾಘವೇಂದ್ರ ರಾಜ್ಕುಮಾರ್
Rangayana Raghu: ‘ರಂಗಸಮುದ್ರ’ ಟ್ರೈಲರ್ ಲಾಂಚ್ನಲ್ಲಿ ಮಾತನಾಡಿದ ರಾಘವೇಂದ್ರ ರಾಜ್ಕುಮಾರ್, ರಂಗಾಯಣ ರಘು ಅವರ ನಟನೆಯನ್ನು ಮೆಚ್ಚಿ ಕೊಂಡಾಡಿದರು.
‘ರಂಗಸಮುದ್ರ’ ಸಿನಿಮಾದ ಟ್ರೈಲರ್ ಇಂದು (ಡಿಸೆಂಬರ್ 02) ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಅಪ್ಪು (Puneeth Rajkumar) ಮಾಡಬೇಕಿದ್ದ ಪಾತ್ರದಲ್ಲಿ ರಾಘವೇಂದ್ರ ರಾಜ್ಕುಮಾರ್ (Raghavendra Rajkumar) ನಟಿಸಿದ್ದಾರೆ. ಇಂದು ನಡೆದ ಟ್ರೈಲರ್ ಲಾಂಚ್ನಲ್ಲಿ ಮಾತನಾಡಿದ ರಾಘವೇಂದ್ರ ರಾಜ್ಕುಮಾರ್, ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿರುವ ರಂಗಾಯಣ ರಘು ಅವರ ನಟನೆಯನ್ನು ಮೆಚ್ಚಿ ಕೊಂಡಾಡಿದರು. ನಮ್ಮ ಪಾತ್ರಗಳಲ್ಲಿ, ರಂಗಾಯಣ ರಘು ಅವರು ಮಾಡಿರುವ ಪಾತ್ರಕ್ಕೆ ದೊಡ್ಡ ತೂಕವಿದೆ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos