ಮಲ್ಪೆ: ಸ್ಕೂಟರ್ ಸಮೇತ ದಕ್ಕೆ ನೀರಿಗೆ ಬಿದ್ದ ತಮಿಳುನಾಡು ಮೂಲದ ಮೀನುಗಾರ -ನೆರವಿಗೆ ಬಂದ ರಕ್ಷಣೆಕಾರ ಈಶ್ವರ್
ನೀರಿಗೆ ಬಿದ್ದ ಮಾಹಿತಿ ತಿಳಿದು ತತ್‌ಕ್ಷಣ ಈಶ್ವರ್ ಮಲ್ಪೆ ಅವರು ಧಾವಿಸಿ ಬಂದು ನೀರಿಗೆ ಧುಮುಕಿ ಎಲ್ಲ ಕಡೆ ಜಾಲಾಡಿದರೂ ಆತನ ದೇಹ ಸಿಕ್ಕಿರಲಿಲ್ಲ. ಆದರೆ ಆತನ ಸ್ಕೂಟರ್ (Scooter) ಪತ್ತೆಯಾಗಿದ್ದು ಹಗ್ಗದ ಸಹಾಯದಿಂದ ಮೇಲಕ್ಕೆತ್ತಲಾಯಿತು
ಮಲ್ಪೆ ( Malpe) ಮೀನುಗಾರಿಕಾ ಬಂದರಿನಲ್ಲಿ ಆಕಸ್ಮಿಕವಾಗಿ ಮೀನುಗಾರನೋರ್ವ (Fisherman) ಸ್ಕೂಟರ್ ಸಮೇತ ದಕ್ಕೆ ನೀರಿಗೆ ಬಿದ್ದ ಘಟನೆ ನಡೆದಿದೆ. ನೀರಿಗೆ ಬಿದ್ದ ವ್ಯಕ್ತಿ ಮುಳುಗಡೆಯಾಗಿ ಕಣ್ಮರೆಯಾಗಿದ್ದರು. ಇವರು ತಮಿಳುನಾಡು ಮೂಲದ ಮೀನುಗಾರನಾಗಿದ್ದು, ಮಲ್ಪೆಯ ಬೋಟು ಒಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದರು.
ನೀರಿಗೆ ಬಿದ್ದ ಮಾಹಿತಿ ತಿಳಿದು ತತ್‌ಕ್ಷಣ ಈಶ್ವರ್ ಮಲ್ಪೆ ಅವರು ಧಾವಿಸಿ ಬಂದು ನೀರಿಗೆ ಧುಮುಕಿ ಎಲ್ಲ ಕಡೆ ಜಾಲಾಡಿದರೂ ಆತನ ದೇಹ ಸಿಕ್ಕಿರಲಿಲ್ಲ. ಆದರೆ ಆತನ ಸ್ಕೂಟರ್ (Scooter) ಪತ್ತೆಯಾಗಿದ್ದು ಹಗ್ಗದ ಸಹಾಯದಿಂದ ಮೇಲಕ್ಕೆತ್ತಲಾಯಿತು (Rescue). ನಿನ್ನೆ ಮಂಗಳವಾರ ಮೀನುಗಾರನ ಮೃತದೇಹ ಪತ್ತೆಯಾಗಿದ್ದು ಶವವನ್ನು ಮೇಲಕ್ಕೆತ್ತಲಾಯಿತು. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Also Read: ಮತ್ತೊಮ್ಮೆ ಕೆರೆಯಲ್ಲಿ ಕಳೆದುಕೊಂಡಿದ್ದ ಚಿನ್ನದ ಸರವನ್ನು 15 ನಿಮಿಷದಲ್ಲಿ ಹುಡುಕಿ ವಾರಸುದಾರರಿಗೆ ಒಪ್ಪಿಸಿದ ಈಶ್ವರ್ ಮಲ್ಪೆ
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published on: Jan 03, 2024 09:55 AM
Latest Videos