ಕುಡಿದ ಮತ್ತಿನಲ್ಲಿ ಪೊಲೀಸ್​ ವಾಹನ ಚಲಾಯಿಸಿ ಆಟೋ, ಬೈಕ್​​ಗೆ ಗುದ್ದಿದ ಕಾನ್ಸ್ಟೇಬಲ್​​: ವಿಡಿಯೋ ವೈರಲ್​

ಕುಡಿದ ಮತ್ತಿನಲ್ಲಿ ಪೊಲೀಸ್​ ವಾಹನ ಚಲಾಯಿಸಿ ಆಟೋ, ಬೈಕ್​​ಗೆ ಗುದ್ದಿದ ಕಾನ್ಸ್ಟೇಬಲ್​​: ವಿಡಿಯೋ ವೈರಲ್​

Prajwal Kumar NY
| Updated By: ವಿವೇಕ ಬಿರಾದಾರ

Updated on: Jan 03, 2024 | 10:56 AM

ಪೊಲೀಸ್ ಪೇದೆ ಕುಡಿದ ಮತ್ತಿನಲ್ಲಿ ಪೊಲೀಸ್​ ವಾಹನ ಚಲಾಯಿಸಿ ಆಟೋ, ಬೈಕ್ ಸಹಿತ ಹಲವು ವಾಹನಗಳಿಗೆ ಗುದ್ದಿರುವ ಘಟನೆ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾನದಲ್ಲಿ ನಡೆದಿದೆ.

ಉಡುಪಿ, ಜನವರಿ 03: ಪೊಲೀಸ್ ಪೇದೆ (Police Constable) ಕುಡಿದ ಮತ್ತಿನಲ್ಲಿ ಪೊಲೀಸ್​ (Police) ವಾಹನ ಚಲಾಯಿಸಿ ಆಟೋ, ಬೈಕ್ ಸಹಿತ ಹಲವು ವಾಹನಗಳಿಗೆ ಗುದ್ದಿರುವ ಘಟನೆ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾನದಲ್ಲಿ ನಡೆದಿದೆ. ಉಡುಪಿ ಡಿಎಆರ್ ವಿಭಾಗದ ಪೊಲೀಸ್ ಪೇದೆ ಪ್ರಶಾಂತ್ ವರ್ತನೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಂಗೊಳ್ಳಿ ಗ್ರಾನದಲ್ಲಿನ ಕಾರ್ಯಕ್ರಮವೊಂದಕ್ಕೆ ಬಂದೋಬಸ್ತ್​ ನೀಡಲು ಡಿಎಆರ್ ಸಿಬ್ಬಂದಿ ಆಗಮಿಸಿದ್ದ ವೇಳೆ ಘಟನೆ ನಡೆದಿದೆ. ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.