ಅಯೋಧ್ಯೆಯಲ್ಲಿ ವಿಶ್ವ ದಾಖಲೆ ಸೃಷ್ಟಿ; ರಾಮ ಜನ್ಮಭೂಮಿಯಲ್ಲಿ ಬೆಳಗಿದ 26 ಲಕ್ಷ ದೀಪಗಳು

Updated on: Oct 20, 2025 | 8:02 PM

ರಾಮಜನ್ಮಭೂಮಿಯಾದ ಅಯೋಧ್ಯೆಯಲ್ಲಿ ಈ ಬಾರಿಯ ದೀಪಾವಳಿ ಬಹಳ ವೈಭವದಿಂದ ನಡೆದಿದೆ. ಅಯೋಧ್ಯೆಯ ಸರಯೂ ನದಿಯ ದಡದಲ್ಲಿ ದೀಪೋತ್ಸವದ ಸಂದರ್ಭದಲ್ಲಿ ದೀಪಾವಳಿ ಮತ್ತೊಮ್ಮೆ ದಾಖಲೆಯ ದೃಶ್ಯವನ್ನು ಕಂಡಿತು. ಇಲ್ಲಿ ಒಂದೇ ಸ್ಥಳದಲ್ಲಿ 26.17 ಲಕ್ಷ ದೀಪಗಳನ್ನು ಬೆಳಗಿಸಲಾಯಿತು. 2,128 ಜನರು ಒಟ್ಟಾಗಿ 'ಆರತಿ' ಪ್ರದರ್ಶಿಸಿದರು. ಈ ಮೂಲಕ ಎರಡು ಹೊಸ ವಿಶ್ವ ದಾಖಲೆಗಳನ್ನು ನಿರ್ಮಿಸಲಾಯಿತು. ಗಿನ್ನೆಸ್ ವಿಶ್ವ ದಾಖಲೆಗಳ ಪ್ರತಿನಿಧಿಗಳು ಡ್ರೋನ್‌ಗಳನ್ನು ಬಳಸಿಕೊಂಡು ದೀಪಗಳ ಸಂಖ್ಯೆಯನ್ನು ಪರಿಶೀಲಿಸಿ, ವಿಶ್ವ ದಾಖಲೆಯನ್ನು ಘೋಷಣೆ ಮಾಡಿದರು.

ಅಯೋಧ್ಯೆ, ಅಕ್ಟೋಬರ್ 20: ದೀಪಾವಳಿಗೂ (Deepavali) ಮುನ್ನ 26 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ಅಯೋಧ್ಯೆಯಲ್ಲಿ ದಾಖಲೆ ನಿರ್ಮಿಸಲಾಗಿದೆ. 26.17 ಲಕ್ಷ ದೀಪಗಳನ್ನು ಒಂದೇ ಸ್ಥಳದಲ್ಲಿ ಬೆಳಗಿಸಲಾಯಿತು. 2,128 ಜನರು ಒಟ್ಟಾಗಿ ‘ಆರತಿ’ ಪ್ರದರ್ಶಿಸಿದರು. ಈ ಮೂಲಕ ಎರಡು ಹೊಸ ವಿಶ್ವ ದಾಖಲೆಗಳನ್ನು ನಿರ್ಮಿಸಿದರು.

ರಾಮಜನ್ಮಭೂಮಿಯಾದ ಅಯೋಧ್ಯೆಯಲ್ಲಿ ಈ ಬಾರಿಯ ದೀಪಾವಳಿ ಬಹಳ ವೈಭವದಿಂದ ನಡೆದಿದೆ. ಅಯೋಧ್ಯೆಯ ಸರಯೂ ನದಿಯ ದಡದಲ್ಲಿ ದೀಪೋತ್ಸವದ ಸಂದರ್ಭದಲ್ಲಿ ದೀಪಾವಳಿ ಮತ್ತೊಮ್ಮೆ ದಾಖಲೆಯ ದೃಶ್ಯವನ್ನು ಕಂಡಿತು. ಇಲ್ಲಿ ಒಂದೇ ಸ್ಥಳದಲ್ಲಿ 26.17 ಲಕ್ಷ ದೀಪಗಳನ್ನು ಬೆಳಗಿಸಲಾಯಿತು. 2,128 ಜನರು ಒಟ್ಟಾಗಿ ‘ಆರತಿ’ ಪ್ರದರ್ಶಿಸಿದರು. ಈ ಮೂಲಕ ಎರಡು ಹೊಸ ವಿಶ್ವ ದಾಖಲೆಗಳನ್ನು ನಿರ್ಮಿಸಲಾಯಿತು. ಗಿನ್ನೆಸ್ ವಿಶ್ವ ದಾಖಲೆಗಳ ಪ್ರತಿನಿಧಿಗಳು ಡ್ರೋನ್‌ಗಳನ್ನು ಬಳಸಿಕೊಂಡು ದೀಪಗಳ ಸಂಖ್ಯೆಯನ್ನು ಪರಿಶೀಲಿಸಿ, ವಿಶ್ವ ದಾಖಲೆಯನ್ನು ಘೋಷಣೆ ಮಾಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More