ಜಿ.ಟಿ.ಮಾಲ್ ಘಟನೆ: ಬಿದ್ದ 10 ನಿಮಿಷಗಳ ಒದ್ದಾಡಿದ ಯುವಕ, ಕಾಪಾಡಲು ಯಾರು ಬಂದಿಲ್ಲ
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿ.ಟಿ.ಮಾಲ್‌ನಲ್ಲಿ ನಡೆದ ದುರಂತದಲ್ಲಿ ಯುವಕನೊಬ್ಬ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾನೆ. ಪ್ರತ್ಯಕ್ಷದರ್ಶಿ ಸೇಜಲ್ ಪ್ರಕಾರ, ಘಟನೆಯು ಬೆಳಿಗ್ಗೆ 9:40 ರ ಸುಮಾರಿಗೆ ಸಂಭವಿಸಿದ್ದು, ಯುವಕ ಉದ್ದೇಶಪೂರ್ವಕವಾಗಿ ಬಿದ್ದಂತೆ ಕಂಡಿದೆ. ಈ ಸಂಬಂಧ ಕೆ.ಪಿ.ಅಗ್ರಹಾರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬೆಂಗಳೂರು, ಅ.20: ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿ.ಟಿ.ಮಾಲ್‌ನಲ್ಲಿ ಇಂದು (ಅ.20) ಯುವಕನೊಬ್ಬ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿದೆ. ಬೆಳಿಗ್ಗೆ ಸುಮಾರು 9:40ರ ಸುಮಾರಿಗೆ ಈ ದುರಂತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿ ಸೇಜಲ್ ಮಾಹಿತಿ ನೀಡಿದ್ದಾರೆ. ಡಿ-ಮಾರ್ಟ್ ತೆರೆಯಲು ಕಾಯುತ್ತಿದ್ದಾಗ, ಯುವಕ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದಿದ್ದನ್ನು ತಾವು ಕಣ್ಣಾರೆ ನೋಡಿದ್ದಾಗಿ ಸೇಜಲ್ ಹೇಳಿದ್ದಾರೆ. ಸೇಜಲ್ ಅವರ ಹೇಳಿಕೆಯ ಪ್ರಕಾರ, ಯುವಕ ಉದ್ದೇಶಪೂರ್ವಕವಾಗಿ ಬಿದ್ದಂತೆ ಕಾಣುತ್ತದೆ. ಆತ ಮಾಲ್‌ನ ಹೊರಗಿನ ವ್ಯಕ್ತಿಯಾಗಿದ್ದು, ಮಾಲ್ ಸಿಬ್ಬಂದಿಯಲ್ಲ ಎಂದು ತಿಳಿದುಬಂದಿದೆ. ಘಟನೆ ನಡೆದಾಗ ಮೃತ ಯುವಕ ಒಬ್ಬನೇ ಇದ್ದನು. ಬಿದ್ದ ನಂತರ ಸುಮಾರು 10 ನಿಮಿಷಗಳ ಕಾಲ ಯುವಕ ಜೀವಂತವಾಗಿದ್ದರೂ, ಯಾರೂ ಅವನ ಹತ್ತಿರ ಹೋಗಿಲ್ಲ, ಈ ಕಾರಣದಿಂದ ಸ್ಥಳದಲ್ಲೇ ಮೃತಪಟ್ಟ ಎಂದು ಸೇಜಲ್ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ. ಈ ಘಟನೆಯ ಕುರಿತು ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ಯುವಕನ ಗುರುತು ಮತ್ತು ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

