Video: ಮೈನವಿರೇಳಿಸುವ ಏರ್ಶೋಗೆ ವಿದ್ಯಾರ್ಥಿಗಳು ಫಿದಾ; ಕಸರತ್ತು ವೀಕ್ಷಣೆಗೆ ಜನಸಾಗರ
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಬೀದರ್ ಜಿಲ್ಲೆಯ ಕೋಟೆ ಮೈದಾನದಲ್ಲಿ ನಡೆದ ವಿಶೇಷ ಎರ್ಶೋ ಕಾರ್ಯಕಮದ ವೀಕ್ಷಣೆಗೆ ಸಾವಿರಾರರು ವಿದ್ಯಾರ್ಥಿಗಳು ಹಾಗೂ ಜನಸಾಗರವೇ ಹರಿದುಬಂತು. ಮೈನವಿರೇಳಿಸುವ ಯುದ್ಧ ವಿಮಾನಗಳ ಕಸರತ್ತಿಗೆ ವಿದ್ಯಾರ್ಥಿಗಳು ಫಿದಾ ಆಗಿದ್ದಾರೆ.
ಬೀದರ್: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಜಿಲ್ಲೆಯ ಕೋಟೆ ಮೈದಾನದಲ್ಲಿ ವಿಶೇಷ ಎರ್ಶೋ ಕಾರ್ಯಕಮ ಜರುಗಿತು. ಬಾನಂಗಳದಲ್ಲಿ ಲೋಹದ ಹಕ್ಕಿಗಳ ಹಾರಾಟದ ಚಿತ್ತಾರವನ್ನು ಕಣ್ತುಂಬಿಕೊಳ್ಳಲು 5ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಜನಸಾಗರವೇ ನೆರೆದಿತ್ತು. ಸಿಡಿಲಬ್ಬರದ ಶಬ್ದದೊಂದಿಗೆ ಮಿಂಚಿನಂತೆ ಹಾರಾಟವನ್ನು ನಡೆಸುತ್ತಿದ್ದಾಗ ನೆರೆದಿದ್ದ ವಿದ್ಯಾರ್ಥಿಗಳ ಹಾಗೂ ಜನಸಮೂಹದ ಸಂಭ್ರಮ ಮುಗಿಲುಮುಟ್ಟಿದೆ. ಆಕಾಶದಲ್ಲಿ ಮೈನವಿರೇಳಿಸುವ ಒಂದೊಂದು ರೀತಿಯ ಕಸರತ್ತುಗಳು ರೋಮಾಂಚನವಾಗಿತ್ತು.
ಮತ್ತಷ್ಟು ವಿಡಿಯೋಗಳನ್ನು ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ
Published on: Sep 03, 2022 10:14 AM
Latest Videos