ನಟಿ ಬಿ. ಸರೋಜಾದೇವಿ ಅಂತ್ಯಕ್ರಿಯೆ: ಮಣ್ಣಲ್ಲಿ ಮಣ್ಣಾದ ‘ಅಭಿನಯ ಸರಸ್ವತಿ’
ಜುಲೈ 14ರಂದು ಬೆಂಗಳೂರಿನಲ್ಲಿ ನಟಿ ಬಿ. ಸರೋಜಾದೇವಿ ಅವರು ನಿಧನರಾದರು. ಹಲವು ಸೆಲೆಬ್ರಿಟಿಗಳು, ರಾಜಕೀಯ ಕ್ಷೇತ್ರದ ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದುಕೊಂಡರು. ಇಂದು (ಜುಲೈ 15) ಹೂವಿನ ಪಲ್ಲಕ್ಕಿಯಲ್ಲಿ ಸರೋಜಾದೇವಿ ಅವರ ಪಾರ್ಥಿವ ಶರೀರವನ್ನು ತೋಟಕ್ಕೆ ತರಲಾಯಿತು. ತೋಟದಲ್ಲಿ ಕುಟುಂಬಸ್ಥರು ಅಂತಿಮ ಸಂಸ್ಕಾರ ಮಾಡಿದರು.
ಸರ್ಕಾರಿ ಗೌರವಗಳೊಂದಿಗೆ ನಟಿ ಬಿ. ಸರೋಜಾದೇವಿ ಅವರ ಅಂತ್ಯಕ್ರಿಯೆ (B Saroja Devi Funeral) ಮಾಡಲಾಗಿದೆ. ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆದಿದೆ. ಸೋಮವಾರ (ಜುಲೈ 14) ಬೆಂಗಳೂರಿನಲ್ಲಿ ಸರೋಜಾದೇವಿ (B Saroja Devi) ನಿಧನರಾದರು. ಅನೇಕ ಸೆಲೆಬ್ರಿಟಿಗಳು, ರಾಜಕೀಯ ಗಣ್ಯರು ಬಂದು ಅಂತಿಮ ದರ್ಶನ ಪಡೆದುಕೊಂಡರು. ಇಂದು (ಜುಲೈ 15) ಹೂವಿನ ಪಲ್ಲಕ್ಕಿಯಲ್ಲಿ ಸರೋಜಾದೇವಿ ಅವರ ಪಾರ್ಥಿವ ಶರೀರವನ್ನು ತೋಟಕ್ಕೆ ತರಲಾಯಿತು. ಬಳಿಕ ಕುಟುಂಬಸ್ಥರು ಅಂತಿಮ ಸಂಸ್ಕಾರ ನೆರವೇರಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
