‘ಮೆಜೆಸ್ಟಿಕ್’ ಸಿನಿಮಾ ಬಗ್ಗೆ ಭಾಮಾ ಹರೀಶ್ ಮಾತು, ದರ್ಶನ್​ಗೆ ಎಚ್ಚರಿಕೆ

‘ಮೆಜೆಸ್ಟಿಕ್’ ಸಿನಿಮಾ ದರ್ಶನ್ ಪಾಲಿಗೆ ಅತ್ಯಂತ ಮಹತ್ವದ ಸಿನಿಮಾ. ಈ ಸಿನಿಮಾದ ನಿರ್ಮಾಪಕ ರಾಮಮೂರ್ತಿಯವರ ಬಗ್ಗೆ ದರ್ಶನ್​ಗೆ ವಿಶೇಷ ಗೌರವ. ಆದರೆ ಆ ಸಿನಿಮಾದ ಏಕೈಕ ನಿರ್ಮಾಪಕ ನಾನು ಎಂದಿರುವ ಭಾಮಾ ಹರೀಶ್, ‘ಮೆಜೆಸ್ಟಿಕ್’ ಸಿನಿಮಾ ಬಗ್ಗೆ ದರ್ಶನ್ ತಿಳಿದು ಮಾತನಾಡಬೇಕು ಎಂದಿದ್ದಾರೆ.

‘ಮೆಜೆಸ್ಟಿಕ್’ ಸಿನಿಮಾ ಬಗ್ಗೆ ಭಾಮಾ ಹರೀಶ್ ಮಾತು, ದರ್ಶನ್​ಗೆ ಎಚ್ಚರಿಕೆ
|

Updated on: Jun 18, 2024 | 8:05 PM

‘ಮೆಜೆಸ್ಟಿಕ್’ ಸಿನಿಮಾ ಬಿಡುಗಡೆ ಆಗಿ 22 ವರ್ಷಗಳಾಗಿವೆ. ಸಿನಿಮಾ ಬಿಡುಗಡೆ ಆಗಿ ಎರಡು ದಶಕ ಪೂರೈಸಿದಾಗ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಟ ದರ್ಶನ್ (Darshan Thoogudeepa) ಮಾತನಾಡಿ, ‘ಮೆಜೆಸ್ಟಿಕ್’ ಸಿನಿಮಾದ ನಿರ್ಮಾಪಕ ರಾಮಮೂರ್ತಿಯವರನ್ನು ಕೊಂಡಾಡಿದ್ದರು. ನನಗೆ ಪ್ರಶ್ನೆ ಮಾಡುವ ಹಕ್ಕು ಇರುವ ಒಬ್ಬರೇ ನಿರ್ಮಾಪಕ ರಾಮಮೂರ್ತಿ ಎಂದಿದ್ದರು. ಆದರೆ ಟಿವಿ9 ಜೊತೆ ಮಾತನಾಡಿರುವ ಹಿರಿಯ ನಿರ್ಮಾಪಕ ಭಾಮಾ ಹರೀಶ್, ‘ಮೆಜೆಸ್ಟಿಕ್’ ಸಿನಿಮಾದ ಏಕೈಕ ನಿರ್ಮಾಪಕ ತಾವೇ ಎಂದಿದ್ದಾರೆ. ಆ ಸಿನಿಮಾವನ್ನು ನನ್ನ ಮಗ ಉಲ್ಲಾಸ್ ಹೆಸರಿನಲ್ಲಿ ಪ್ರಾರಂಭಿಸಿದ್ದ ಉಲ್ಲಾಸ್ ಪ್ರೊಡಕ್ಷನ್ ಹೌಸ್ ಹೆಸರಲ್ಲಿ ನಿರ್ಮಿಸಿದ್ದು. ಆ ಸಿನಿಮಾದ ಸಂಪೂರ್ಣ ಸೈನಿಂಗ್ ಅಥಾರಿಟಿ ನನ್ನದ್ದೇ ಆಗಿತ್ತು ಎಂದಿದ್ದಾರೆ. ದರ್ಶನ್ ಎಲ್ಲೂ ಸಹ ತಮ್ಮ ಹೆಸರು ಉಲ್ಲೇಖ ಮಾಡದೇ ಇರುವ ಬಗ್ಗೆಯೂ ಮಾತನಾಡಿದ ಹರೀಶ್, ದರ್ಶನ್ ‘ಮೆಜೆಸ್ಟಿಕ್’ ಸಿನಿಮಾ ಬಗ್ಗೆ ತಿಳಿದುಕೊಂಡು, ಎಚ್ಚರಿಕೆಯಿಂದ ಮಾತನಾಡಬೇಕು ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್