ಚಿತ್ರರಂಗಕ್ಕೆ ಬಂದ ಆರಂಭದಲ್ಲಿಯೇ ದರ್ಶನ್ ಕಿರಿಕ್: ಘಟನೆ ನೆನಪಿಸಿಕೊಂಡ ಭಾಮಾ ಹರೀಶ್

ದರ್ಶನ್ ತೂಗುದೀಪ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಇದೇ ಸಂದರ್ಭದಲ್ಲಿ ದರ್ಶನ್​ರ ಹಳೆಯ ವಿವಾದಗಳು ಮರುಜೀವ ಪಡೆದುಕೊಳ್ಳುತ್ತಿವೆ. ನಟ ದರ್ಶನ್ ಚಿತ್ರರಂಗಕ್ಕೆ ಬಂದ ಆರಂಭದ ವರ್ಷಗಳಲ್ಲಿ ಮಾಡಿಕೊಂಡಿದ್ದ ಕಿರಿಕ್ ಬಗ್ಗೆ ನಿರ್ಮಾಪಕ ಭಾಮಾ ಹರೀಶ್ ನೆನಪು ಮಾಡಿಕೊಂಡಿದ್ದಾರೆ.

ಚಿತ್ರರಂಗಕ್ಕೆ ಬಂದ ಆರಂಭದಲ್ಲಿಯೇ ದರ್ಶನ್ ಕಿರಿಕ್: ಘಟನೆ ನೆನಪಿಸಿಕೊಂಡ ಭಾಮಾ ಹರೀಶ್
ದರ್ಶನ್ ತೂಗುದೀಪ-ಭಾಮಾ ಹರೀಶ್
Follow us
ಮಂಜುನಾಥ ಸಿ.
|

Updated on: Jun 18, 2024 | 6:22 PM

ಭಾಮಾ ಹರೀಶ್ (Ba Ma Harish) ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ. ದರ್ಶನ್ (Darshan Thoogudeepa) ಚಿತ್ರರಂಗಕ್ಕೆ ನಾಯಕ ನಟನಾಗಿ ಎಂಟ್ರಿ ಕೊಟ್ಟ ಮೊದಲ ಸಿನಿಮಾ ‘ಮೆಜೆಸ್ಟಿಕ್’ ನಿರ್ಮಾಪಕರಲ್ಲಿ ಭಾಮಾ ಹರೀಶ್ ಸಹ ಒಬ್ಬರು. ದರ್ಶನ್​ರ ಚಿತ್ರರಂಗದ ಪಯಣವನ್ನು ಹತ್ತಿರದಿಂದ ನೋಡಿದವರಲ್ಲಿ ಭಾಮಾ ಹರೀಶ್ ಸಹ ಒಬ್ಬರು. ಚಿತ್ರರಂಗದ ಅಂಗಸಂಸ್ಥೆಗಳಲ್ಲಿ ಸಕ್ರಿಯವಾಗಿದ್ದ ಭಾಮಾ ಹರೀಶ್ ಅವರಿಗೆ ದರ್ಶನ್​ರ ಚಿತ್ರರಂಗದ ವಿವಾದಗಳ ಒಳ-ಹೊರಗುಗಳ ಅರಿವು ಚೆನ್ನಾಗಿಯೇ ಇದೆ. ದರ್ಶನ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಲೇ ಮಾಡಿಕೊಂಡಿದ್ದ ಕೆಲವು ಸಮಸ್ಯೆಗಳ ಬಗ್ಗೆ ಹರೀಶ್ ಮಾತನಾಡಿದ್ದಾರೆ.

ಟಿವಿ9 ಕನ್ನಡದ ಜೊತೆಗೆ ಮಾತನಾಡಿರುವ ಭಾಮಾ ಹರೀಶ್, ‘ಮೆಜೆಸ್ಟಿಕ್’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ದರ್ಶನ್, ನಾಯಕ ನಟನಾಗಿ ನಟಿಸಿದ ಮೂರನೇ ಸಿನಿಮಾ ‘ನಿನಗೋಸ್ಕರ’ ಸಿನಿಮಾದಲ್ಲಿ ಮಾಡಿಕೊಂಡಿದ್ದ ಕಿರಿಕ್ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ. ‘ನಿನಗೋಸ್ಕರ’ ಸಿನಿಮಾದಲ್ಲಿ ದರ್ಶನ್ ನಾಯಕ ನಟನಾಗಿ ನಟಿಸಿದ್ದರು, ಆ ಸಿನಿಮಾದ ನಿರ್ಮಾಪಕರೊಟ್ಟಿಗೆ ಕಿರಿಕ್ ಮಾಡಿಕೊಂಡಿದ್ದ ದರ್ಶನ್ ಸಿನಿಮಾಕ್ಕೆ ಡಬ್ಬಿಂಗ್ ಮಾಡುವುದಿಲ್ಲ ಎಂದಿದ್ದರಂತೆ. ಆಗ ಬಸಂತ್ ಕುಮಾರ್ ಪಾಟೀಲರು ಅಂಬರೀಶ್​ಗೆ ವಿಷಯ ಹೇಳಿ, ಅವರು ದರ್ಶನ್ ಅನ್ನು ಕರೆದು ಬುದ್ಧಿವಾದ ಹೇಳಿದ ಬಳಿಕವಷ್ಟೆ ದರ್ಶನ್ ಡಬ್ಬಿಂಗ್ ಮಾಡಿದರಂತೆ. ದರ್ಶನ್ ನಾಯಕ ನಟ ಆದ ಮೇಲೆ ಅದೇ ಮೊದಲಿಗೆ ಅಂಬರೀಶ್, ದರ್ಶನ್ ಬಳಿ ಮಾತನಾಡಿದ್ದು, ಆ ಘಟನೆಯ ಬಳಿಕವೇ ಅವರಿಬ್ಬರೂ ಆತ್ಮೀಯರಾದರು ಎಂದು ನೆನಪು ಮಾಡಿಕೊಂಡಿದ್ದಾರೆ ಭಾಮಾ ಹರೀಶ್.

ಇದನ್ನೂ ಓದಿ:ದರ್ಶನ್ ಪತ್ನಿಗೆ ಸಂಕಷ್ಟ, ವಿಜಯಲಕ್ಷ್ಮಿ ಎ1, ದರ್ಶನ್ ಎ3

ಇನ್ನು ದರ್ಶನ್​ ವೃತ್ತಿ ಜೀವನದಲ್ಲೇ ಅತಿ ದೊಡ್ಡ ಹಿಟ್ ಸಿನಿಮಾಗಳಲ್ಲಿ ಒಂದಾದ ‘ಕರಿಯ’ ಸಿನಿಮಾದ ಸಮಯದಲ್ಲಿಯೂ ಸಹ ದರ್ಶನ್ ದೊಡ್ಡ ಕಿರಿಕ್ ಮಾಡಿಕೊಂಡಿದ್ದರು. ಸಿನಿಮಾ ಅರ್ಧ ಶೂಟಿಂಗ್ ಮುಗಿದ ಮೇಲೆ ಚಿತ್ರೀಕರಣಕ್ಕೆ ಬಂದಿರಲಿಲ್ಲ. ಪ್ರೇಮ್​ ಕರೆದರೆ ರೀಲ್ ಸುಟ್ಟುಹಾಕು ಎಂದಿದ್ದರು, ಆಗ ಪ್ರೇಮ್ ನನ್ನ ಬಳಿ ಬಂದು ಕಣ್ಣೀರು ಹಾಕಿ ನ್ಯಾಯ ದೊರಕಿಸಿಕೊಡುವಂತೆ ಹೇಳಿದ್ದರು ಎಂಬ ವಿಷಯವನ್ನೂ ಸಹ ಭಾಮಾ ಹರೀಶ್ ಹೇಳಿದ್ದಾರೆ. ಆ ನಂತರ ದರ್ಶನ್​ಗೆ ಬುದ್ಧಿವಾದ ಹೇಳಿ ಪ್ರೇಮ್ ಹಾಗೂ ದರ್ಶನ್ ನಡುವೆ ಭಿನ್ನಾಭಿಪ್ರಾಯ ಸರಿಪಡಿಸಿದ ಬಳಿಕವೇ ಚಿತ್ರೀಕರಣ ಮುಂದುವರೆದಿತ್ತು ಎಂದಿದ್ದಾರೆ ಹರೀಶ್.

‘ಕರಿಯ’ ಸಿನಿಮಾದಲ್ಲಿ ವಿವಾದ ಆಗಿದ್ದರಿಂದ ಬಗ್ಗೆ ಮೈಕೋ ನಾಗರಾಜ್ ಸಹ ಈ ಹಿಂದೆ ಕೆಲವು ವಿಡಿಯೋಗಳಲ್ಲಿ ಮಾತನಾಡಿದ್ದರು. ‘ಕರಿಯ’ ಸಿನಿಮಾಕ್ಕೆ ಅವರೂ ಸಹ ಬಂಡವಾಳ ಹೂಡಿದ್ದರು ಎನ್ನಲಾಗಿದೆ. ಆದರೆ ‘ಕರಿಯ’ ಸಿನಿಮಾದ ಬಳಿಕ ಪ್ರೇಮ್ ಹಾಗೂ ದರ್ಶನ್ ಒಟ್ಟಿಗೆ ಕೆಲಸ ಮಾಡಿರಲಿಲ್ಲ. ಇತ್ತೀಚೆಗೆ ದರ್ಶನ್, ಪ್ರೇಮ್ ಬಗ್ಗೆಯೂ ನೆಗೆಟಿವ್ ಆಗಿ ಮಾತನಾಡಿದ್ದರು. ಬಳಿಕ ಇಬ್ಬರ ನಡುವೆ ಸಂಧಾನವಾಗಿ, ಈಗ ಮತ್ತೆ ಪ್ರೇಮ್ ಮತ್ತು ದರ್ಶನ್ ಒಟ್ಟಿಗೆ ಕೆಲಸ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಅಷ್ಟರಲ್ಲೇ ಈ ಘಟನೆ ನಡೆದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ