ಸಾಧು ಕೋಕಿಲ ಜತೆ ಸೇರಿಕೊಂಡು ಮಸ್ತ್ ಕಾಮಿಡಿ ಮಾಡ್ತಾರೆ ‘ರಮೇಶ ಸುರೇಶ’
‘ಆರ್ಕೆ ಟಾಕೀಸ್’ ಬ್ಯಾನರ್ ಮೂಲಕ ‘ರಮೇಶ ಸುರೇಶ’ ಸಿನಿಮಾ ನಿರ್ಮಾಣವಾಗಿದೆ. ನವನೀತ್ ಚಾರಿ ಅವರ ಸಂಗೀತ ನಿರ್ದೇಶನ, ವಿಶ್ವಜಿತ್ ರಾವ್ ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನ ಈ ಸಿನಿಮಾಗಿದೆ. ಬೆನಕ ಗುಬ್ಬಿ ವೀರಣ್ಣ, ಯಶು ರಾಜ್, ಸಾಧು ಕೋಕಿಲ ಮುಂತಾದವರು ‘ರಮೇಶ ಸುರೇಶ’ ಚಿತ್ರದಲ್ಲಿ ನಟಿಸಿದ್ದಾರೆ. ಜೂ.21ಕ್ಕೆ ಈ ಸಿನಿಮಾ ತೆರೆಕಾಣಲಿದೆ.
ನಟ ಸಾಧು ಕೋಕಿಲ (Sadhu Kokila) ಅವರ ಸಿನಿಮಾ ಎಂದರೆ ಅಲ್ಲಿ ನಗುವಿಗೆ ಕೊರತೆ ಇರುವುದಿಲ್ಲ. ಈಗ ಅವರು ‘ರಮೇಶ ಸುರೇಶ’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರ ಪಾತ್ರ ಇದರಲ್ಲಿ ಹೇಗಿರಲಿದೆ ಎಂಬುದು ಟೀಸರ್ ಮೂಲಕ ಗೊತ್ತಾಗಿದೆ. ಈ ಸಿನಿಮಾದ ಹಾಡು, ಟ್ರೇಲರ್ ಕೂಡ ಗಮನ ಸೆಳೆದಿದೆ. ಇದು ಪಕ್ಕಾ ಕಾಮಿಡಿ ಸಿನಿಮಾ. ರಮೇಶ ಮತ್ತು ಸುರೇಶ ಎಂಬ ಪಾತ್ರದಲ್ಲಿ ಬೆನಕಾ ಗುಬ್ಬಿ ವೀರಣ್ಣ ಹಾಗೂ ಯಶು ರಾಜ್ ಅಭಿನಯಿಸಿದ್ದಾರೆ. ರಮೇಶ-ಸುರೇಶನ ತಂದೆಯಾಗಿ ಸಾಧು ಕೋಕಿಲ ನಟಿಸಿದ್ದಾರೆ. ಜೂನ್ 21ರಂದು ಈ ಸಿನಿಮಾ (Ramesha Suresha) ಬಿಡುಗಡೆ ಆಗಲಿದೆ.
‘ರಮೇಶ ಸುರೇಶ್’ ಚಿತ್ರದಲ್ಲಿ ಬೆನಕ, ಯಶು ರಾಜ್, ಸಾಧು ಕೋಕಿಲ ಜೊತೆ ಚಂದನಾ ಸೋಗು, ಉಮಾ, ಸತ್ಯಪ್ರಕಾಶ್, ನೀನಾಸಂ ರಂಗನಾಥ್, ವನಿತಾ ಜೈನ್ ಮುಂತಾದವರು ನಟಿಸಿದ್ದಾರೆ. ಪಿ. ಕೃಷ್ಣ ಹಾಗೂ ಬಿ. ಶಂಕರ್ ನಿರ್ಮಾಣದ ಈ ಚಿತ್ರಕ್ಕೆ ನಾಗರಾಜ್ ಮಲ್ಲಿಗೇನಹಳ್ಳಿ ಮತ್ತು ರಘುರಾಜ್ ಗೌಡ ಜೊತೆಯಾಗಿ ನಿರ್ದೇಶನ ಮಾಡಿದ್ದಾರೆ. ಕಾಮಿಡಿ ಸಿನಿಮಾ ಇಷ್ಪಪಡುವ ಪ್ರೇಕ್ಷಕರು ‘ರಮೇಶ ಸುರೇಶ’ ಚಿತ್ರ ನೋಡಲು ಕಾದಿದ್ದಾರೆ.
ಸಿನಿಮಾ ಹೇಗಿರಬಹುದು ಎಂಬುದಕ್ಕೆ ಟೀಸರ್ ಮೂಲಕ ತುಂಬ ಕ್ಲಿಯರ್ ಚಿತ್ರಣ ನೀಡಲಾಗಿದೆ. ‘ರಮೇಶ.. ಸುರೇಶ.. ಒಂದು ಮಾತು ಹೇಳ್ತೀನಿ ಕೇಳಿಸಿಕೊಳ್ಳಿ. ಈ ಪ್ರಪಂಚದಲ್ಲಿ ದುಡ್ಡು ಇದೆ ಕಣ್ರೋ.. ಅದು ಸರ್ಕ್ಯುಲೇಟ್ ಆಗಬೇಕು ಅಷ್ಟೇ. ನೀವಿಬ್ಬರು ಜೀವನದಲ್ಲಿ ಏನಾಗುತ್ತೀರೋ ಗೊತ್ತಿಲ್ಲ. ನನಗಿಂತ ದೊಡ್ಡ ಕಳ್ ನನ್ ಮಕ್ಕಳು ಆಗಬೇಕು ಅಷ್ಟೇ’ ಎಂದು ತಂದೆಯೇ ತನ್ನ ಮಕ್ಕಳಿಗೆ ಪಾಠ ಮಾಡ್ತಾನೆ. ಇಂಥ ತಂದೆಯಿಂದ ಪಾಠ ಕೇಳಿಸಿಕೊಂಡ ‘ರಮೇಶ ಸುರೇಶ’ ಏನೆಲ್ಲ ಕಿತಾಪತಿ ಮಾಡ್ತಾರೆ ಎಂಬುದು ಚಿತ್ರಮಂದಿರದಲ್ಲಿ ನೋಡಿ ನಗಬೇಕು.
ಇದನ್ನೂ ಓದಿ: ವಿಧಾನಸೌಧದಲ್ಲಿ ಸಾಧು ಕೋಕಿಲ ಮಾತು ಕೇಳಿ ಗಾಬರಿಯಾದ ಮಂಡಳಿ ಅಧ್ಯಕ್ಷರು; ಅಂಥದ್ದೇನಾಯ್ತು?
ನವನೀತ್ ಚಾರಿ ಅವರು ‘ರಮೇಶ ಸುರೇಶ’ ಸಿನಿಮಾಗೆ ಸಂಗೀತ ನೀಡಿದ್ದಾರೆ. ‘ಆರ್ಕೆ ಟಾಕೀಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ವಿಶ್ವಜಿತ್ ರಾವ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಕೆ.ಎಂ. ಪ್ರಕಾಶ್ ಅವರ ಸಂಕಲನ ಈ ಸಿನಿಮಾಗಿದೆ. ‘ಎ2’ ಮ್ಯೂಸಿಕ್ ಮೂಲಕ ‘ರಮೇಶ ಸುರೇಶ’ ಸಿನಿಮಾದ ಟೀಸರ್, ಟ್ರೇಲರ್ ಹಾಗೂ ಹಾಡುಗಳು ಬಿಡುಗಡೆ ಆಗಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:20 pm, Tue, 18 June 24